Tuesday, March 5, 2019

ಬಿಲ್ಲವರ ತಾಳ್ಮೆ ಪರೀಕ್ಷೆ ಮಾಡಲಾಗುತ್ತಿದೆಯೇ ?

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲೋಕಸಭೆ ಚುನಾವಣೆಗೆ ತಯಾರಿ ನಡೆಯುತ್ತಿದೆ . ಜಿಲ್ಲೆಯಲ್ಲಿ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಬಿಜೆಪಿ ತಮ್ಮ ಅಭ್ಯರ್ಥಿಗಳ ಆಯ್ಕೆಯ ಕಸರತ್ತು ನಡೆಸುತ್ತಿದೆ.ಬಿಜೆಪಿಯಲ್ಲಿ ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್ ವಿರುದ್ಧ  ಅಸಮಾಧಾನ ಭುಗಿಲೆದ್ದಿದೆ .ಅಲ್ಲದೆ ಅಭ್ಯರ್ಥಿ ಬದಲಾವಣೆ ಮಾಡಲು ದೊಡ್ಡ ಮಟ್ಟದಲ್ಲಿ ಅಭಿಯಾನ ಕೂಡ ನಡೆಯುತ್ತಿದೆ .ಬಿಜೆಪಿಯಲ್ಲಿ ಸತ್ಯಜಿತ್ ಸುರತ್ಕಲ್ ಅವರು ಟಿಕೆಟ್ ಆಕಾಂಕ್ಷಿಯಾಗಿ ಹೊರ ಹೊಮ್ಮಿದ ಬೆನ್ನಲ್ಲೇ ಅವರನ್ನು ಶತಾಯಗತಾಯವಾಗಿ ಮುಗಿಸಲು ಹಾಲಿ ಸಂಸದರ ಬಲಗೈ ಬಂಟರು ನಿರಂತರವಾಗಿ ತೊಡಗಿಕೊಂಡಿದ್ದಾರೆ.ಈ ಬಲಗೈ ಬಂಟರು ಜಿಲ್ಲೆಯ ಬಹುಸಂಖ್ಯಾತ ಬಿಲ್ಲವರ ತಾಳ್ಮೆ ಪರೀಕ್ಷೆ ಮಾಡುತ್ತಿದ್ದಾರೆ ಅಥವಾ ಬಿಲ್ಲವ ಸಮುದಾಯಕ್ಕೆ ಸವಾಲು ಎಸೆಯುತ್ತಿದ್ದಾರೆ  ಎಂದು ಭಾಸವಾಗುತ್ತಿದೆ .

ಇನ್ನು ಕಾಂಗ್ರೆಸ್ ಪಾಳಯದಲ್ಲಿ ಕಾಂಗ್ರೆಸ್ ಹಿರಿಯ ನಾಯಕ ಜನಾರ್ದನ ಪೂಜಾರಿಯವರನ್ನು ಊಟಕ್ಕಿಲ್ಲದ ಉಪ್ಪಿನಕಾಯಿಯಾಗಿ ಪರಿಗಣಿಸಲಾಗಿದೆ .ಕಾಂಗ್ರೆಸ್ನಲ್ಲಿ ಪ್ರಬಲ ಆಕಾಂಕ್ಷಿಯಾಗಿ ರಮಾನಾಥ ರೈ ಮತ್ತು ಇನ್ನೊಂದು ಬಣಗಳ ನಡುವೆ ತೀವ್ರ ಟಿಕೆಟ್ಗಾಗಿ ಪೈಪೋಟಿ ನಡೆದಿದೆ .ಬಿಲ್ಲವ ಸಮುದಾಯದ ಹಿರಿಯ ನಾಯಕ ಬಿಕೆ ಹರಿಪ್ರಸಾದ್ ಮತ್ತು ಸಚಿವೆ ಜಯಮಾಲಾ ಅವರ ಹೆಸರು ಕೂಡ ಮುಂಚೂಣಿಯಲ್ಲಿದೆ.

ರಾಷ್ಟ್ರೀಯ ಪಕ್ಷಗಳ ವರಿಷ್ಠರು ಈ ಬಾರಿ ಬಿಲ್ಲವ ಸಮುದಾಯಕ್ಕೆ ಆದ್ಯತೆ ನೀಡಬೇಕಾಗಿ ವಿನಂತಿ. ಇನ್ನೂ ಬಿಲ್ಲವ ಸಮುದಾಯದವರ ರಾಜಕೀಯ ಏಳಿಗೆಯನ್ನು ಸಹಿಸದ ಮೇಲ್ ವರ್ಗದವರೆಂದು ಹಣೆಪಟ್ಟಿ ಕಟ್ಟಿಕೊಂಡವರು ಹಲವಾರು ರೀತಿಯ ಕುತಂತ್ರವನ್ನು ಬಿಲ್ಲವ ಸಮುದಾಯ ಸೂಕ್ಷ್ಮವಾಗಿ ಗಮನಿಸುತ್ತಿದೆ.ಮೇಲ್ವರ್ಗದವರ ಶೋಷಣೆಯ ಪರಿಣಾಮವಾಗಿ ಇಂದು ಕೇರಳದಲ್ಲಿರುವ ರಾಜಕೀಯ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಮನಗಂಡು ರಾಷ್ಟ್ರೀಯ ಪಕ್ಷಗಳು ಬಿಲ್ಲವ ಸಮುದಾಯವನ್ನು ಕಡೆಗಣಿಸಬಾರದಾಗಿ ವಿನಂತಿ,

1 comment: