ಒಂದು ಕಾಲದಲ್ಲಿ ಮೇಲ್ವರ್ಗದವರ ಶೋಷಣೆಗೆ ಗುರಿಯಾದ ಬಿಲ್ಲವ ಸಮುದಾಯ ಇಂದು ಎಲ್ಲಾ ಕ್ಷೇತ್ರದಲ್ಲೂ ಬಿಲ್ಲವರೆಂದರೆ ಯಾರೂ ತೋರಿಸಿಕೊಟ್ಟಿದ್ದೇವೆ.ಆದರೆ ಬಿಲ್ಲವರ ಏಳಿಗೆಯನ್ನು ಸಹಿಸಲಾರದ ಕೆಲ ದುಷ್ಟರು ಬಿಲ್ಲವರ ವಿರುದ್ಧ ಷಡ್ಯಂತ್ರ ರೂಪಿಸಿ ತೇಜೋವಧೆ ಮಾಡುವ ಕೆಲಸವನ್ನು ಮಾಡುತ್ತಾ ಇರುತ್ತಾರೆ.ಮಾಜಿ ಮೇಯರ್ ಕವಿತಾ ಸನಿಲ್ ಅವರು ಇತ್ತೀಚೆಗೆ ಸಿದ್ದರಾಮಯ್ಯ ಅವರು ಮಂಗಳೂರಿಗೆ ಭೇಟಿ ನೀಡಿದ್ದ ಸಂದರ್ಭ ಅವರ ಹತ್ತಿರ ಕುಳಿತು ಫೋಟೊ ತೆಗೆಸಿಕೊಂಡಿದ್ದರು. ಈ ಫೋಟೋ ಕುರಿತಾಗಿ ಪೋರ್ಟ್ ಕಾರ್ಡ್ ಬೆಂಬಲಿತ ಪೇಜ್ ಒಂದರಲ್ಲಿ ವಿವಿಧ ರೀತಿಯ ಉಲ್ಲೇಖದಲ್ಲಿ ಈ ಫೋಟೋವನ್ನು ಪ್ರಕಟಿಸಲಾಗಿದ್ದು ಬಿಲ್ಲವ ಮಹಿಳೆಗೆ ತೇಜೋವಧೆ ಆಗುವಂತೆ ಕಾಮೆಂಟ್ ಕೂಡಾ ಮಾಡಲಾಗಿದೆ .ಈ ರೀತಿ ಕಮೆಂಟ್ ಮಾಡಿದವರು ತನ್ನ ತಂದೆ ಮತ್ತು ತಾಯಿ, ತಂಗಿಯನ್ನು ಯಾವ ದೃಷ್ಟಿಯಿಂದ ನೋಡುತ್ತಾರೋ ಎಂಬ ಅನುಮಾನ ಕಾಡುತ್ತದೆ. ದಯವಿಟ್ಟು ಇಂತಹ ದುಷ್ಟ ಬುದ್ಧಿಯನ್ನು ಸರಿಪಡಿಸಿ ಮಾನವರಾಗಿ ಬದುಕಿ ಈ ನೆಲದ ಸಂಸ್ಕೃತಿಯನ್ನು ಕಾಪಾಡಿ
0 comments: