Friday, March 8, 2019

ಪಾಂಡವರಕಲ್ಲು ಬ್ರಹ್ಮಬೈದರ್ಕಳ ಗರಡಿಯಲ್ಲಿ 16-03-2019ರಿಂದ 21-03-2019ವರೆಗೆ ವರ್ಷಾವಧಿ ಜಾತ್ರಾಮಹೋತ್ಸವ

ಪಾಂಡವರಕಲ್ಲು ಬ್ರಹ್ಮಬೈದರ್ಕಳ ಗರಡಿಯಲ್ಲಿ 16-03-2019ರಿಂದ 21-03-2019ವರೆಗೆ ವರ್ಷಾವಧಿ ಜಾತ್ರಾಮಹೋತ್ಸವ ನಡೆಯಲಿರುವುದು. ದಿನಾಂಕ:16-03-2019 ಶನಿವಾರ ಬೆಳಿಗ್ಗೆ 10 ಗಂಟೆಗೆ ಸಾರಿ ಹಾಕುವುದು,ಅದೇ ದಿನ ರಾತ್ರಿ ದೊಂಪದಬಲಿ ನೇಮೋತ್ಸವ.ದಿನಾಂಕ:17-03-2019 ಆದಿತ್ಯವಾರ ರಾತ್ರಿ ಕಜೆಕಾರು ಗುತ್ತಿನಿಂದ ರಾಜನ್‌ದೈವ ಕೊಡಮಣಿತ್ತಾಯ ಮತ್ತು ಪಟ್ರಾಡಿ ತಾವಿನಿಂದ ಶ್ರೀ ಬ್ರಹ್ಮಬೈದರ್ಕಳ ಭಂಡಾರ ಬಂದು ಬಲಿ ಉತ್ಸವ.18-03-2019 ಸೋಮವಾರಮುಂಜಾನೆ ಧ್ವಜಾರೋಹಣರಾತ್ರಿ ಕಂರ್ಬಡ್ಕ ಗುತ್ತಿನಿಂದ ಶ್ರೀ ವಿಷ್ಣುಮೂರ್ತಿ ದೈವದ ಭಂಡಾರ ಬಂದು ದೈವದ ನೇಮೋತ್ಸವ

19-03-2019 ಮಂಗಳವಾರ ರಾತ್ರಿ ಶ್ರೀ ರಾಜನ್‌ದೈವ ಕೊಡಮಣಿತ್ತಾಯ ಮತ್ತು ಕಲ್ಕುಡ ದೈವದ ನೇಮೋತ್ಸವ.20-03-2019 ಬುಧವಾರ ಮುಂಜಾನೆ 5 ಗಂಟೆಗೆ ಪಿಲಿಚಾಮುಂಡಿ ದೈವದ ನೇಮೋತ್ಸವ ಶ್ರೀ ಬ್ರಹ್ಮಬೈದರೆ ಜಾತ್ರೋತ್ಸವರಾತ್ರಿ ಗಂಟೆ 7.00ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ನಮೋ ಫ್ರೆಂಡ್ಸ್ ಕರ್ಲ(ಕಕ್ಯಪದವು) ಇವರ ಪ್ರಾಯೋಜಕತ್ವದಲ್ಲಿ ಶಬರಿ ಚೆಂಡೆ ಕಾವೂರು ಇವರಿಂದ ಕೇರಳ ಚೆಂಡೆ ರಾತ್ರಿ ಗಂಟೆ 8ರಿಂದ 9.30ವರೆಗೆ ಶಾಶ್ವತ ಅನ್ನಸಂತರ್ಪಣೆಯ ದಾನಿಗಳ ಸೇವಾರ್ಥ ಮಹಾ ಅನ್ನಸಂತರ್ಪಣೆ ರಾತ್ರಿ ಗಂಟೆ 10 ರಿಂದ ಬೈದೆರೆಗಳು ಗರಡಿ ಇಳಿಯುವುದು ಸುಡುಮದ್ದು ಪ್ರದರ್ಶನ ರಾತ್ರಿ 11.30 ರಿಂದ ಗರೋಡಿ ಫ್ರೆಂಡ್ಸ್ ಪಾಂಡವರಕಲ್ಲು ಇವರ ಪ್ರಾಯೋಜಕತ್ವದಲ್ಲಿ ಶಾರದಾ ಆರ್ಟ್ಸ್ ತಂಡದ ಐಸಿರಿ ಕಲಾವಿದರು ಮಂಜೇಶ್ವರ ಅಭಿನಯದ ಕುಸಲ್ದರಸೆ ನವೀನ್ ಡಿ ಪಡೀಲ್ ನಿರ್ದೇಶನದ ,ಸುಂದರ್ ರೈ ಮಂದಾರ ಅಭಿನಯದ ಅಂಚಗೆ ಇಂಚಗೆ ತುಳು ಹಾಸ್ಯಮಯ ನಾಟಕದಿನಾಂಕ 21-03-2019 ಗುರುವಾರ ಧ್ವಜಾವರೋಹಣ,ಕುರುಸಂಬಿಲ ನೇಮ,ಭಂಡಾರ ಇಳಿಯುವುದು.ಈ ಎಲ್ಲಾ ಕಾರ್ಯಕ್ರದಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಜಾತ್ರಾ ಮಹೋತ್ಸವ ಯಶಸ್ವಿಗೊಳಿಸುವಂತೆ ವಿನಂತಿಆಗಮಿಸುವ ಭಕ್ತಾದಿಗಳಿಗೆ ಆದರದ ಸ್ವಾಗತ ಬಯಸುವ ಸಂತೋಷ್ ಪೂಜಾರಿ ಕುತ್ತಾಡಿ ಪಾಂಡವರಕಲ್ಲು

0 comments: