Wednesday, March 13, 2019

ಬಹುಸಂಖ್ಯಾತ ಬಿಲ್ಲವರು ಮತ್ತು ಇತರ ಹಿಂದುಳಿದ ಜಾತಿಗಳಿಗೆ ದ್ರೋಹ ಬಗೆಯುತಿರುವ ರಾಷ್ಟ್ರೀಯ ಪಕ್ಷಗಳು

ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಬಹುಸಂಖ್ಯಾತ ಬಿಲ್ಲವರು ಮತ್ತು ಇತರ ಹಿಂದುಳಿದ ಜಾತಿಗಳಿಗೆ ರಾಜಕೀಯ ಪ್ರಾತಿನಿಧ್ಯ ನೀಡುವಲ್ಲಿ ಜಿಲ್ಲೆಯ ಎರಡು ಪ್ರಬಲ ಪಕ್ಷಗಳು ಮಾಡಿದ ಅನ್ಯಾಯದ ಪುನರಾವರ್ತನೆ ಲೋಕ ಸಭಾ ಚುನಾವಣೆಯಲ್ಲಿ ಪುನರಾವರ್ತನೆ ಯಾಗುವ ಲಕ್ಷಣ ಕಂಡು ಬರುತ್ತಿದೆ. ಹಿಂದುತ್ವ ಮತ್ತು ಮೋದಿಯ ಹೆಸರಿನಲ್ಲಿ ಏನೂ ಕೆಲಸ ಮಾಡದ ನಳಿನ್ ಕುಮಾರ್ ಕಟೀಲ್ ಅನ್ನು ನಿಲ್ಲಿಸಿದರೂ ಬಿಲ್ಲವರು ಮತ್ತು ಇತರ ಹಿಂದುಳಿದ ಜಾತಿಯವರು ವೋಟ್ ಹಾಕುತ್ತಾರೆ ನಾವು ಗೆಲ್ಲಬಹುದು ಎಂಬ ನಂಬಿಕೆ ಒಂದು ಪಕ್ಷದಾದ್ದರೆ. ಇನ್ನೊಂದು ಪಕ್ಷದ ಬಂಟ ಮತ್ತು ಜೈನರ ವಾದ ನಮಗೆ ಸೀಟ್ ಕೊಡಿ ಬಿಲ್ಲವರಿಗೆ ಮಂಗಳೂರು ಲೋಕಸಭೆಯಲ್ಲಿ ಹಲವು ಭಾರಿ ಸೀಟ್ ಕೊಟ್ಟರೂ ಗೆಲ್ಲಲಾಗಲಿಲ್ಲ ಬಿಲ್ಲವರೇ ವೋಟ್ ಹಾಕಿಲ್ಲ ಆದರೆ ನಮ್ಮ ಜಾತಿಯವರಿಗೆ ಸೀಟ್ ಕೊಟ್ಟರೆ ಬೇರೆ ಪಕ್ಷದಲ್ಲಿರುವ ನಮ್ಮ ಜಾತಿಯವರು ನಮಗೆ ಓಟು ಹಾಕುತ್ತಾರೆ ನಾವೂ ಗೆಲ್ಲಬಹುದು ಎಂದು. ಈ ಕಾರಣದಿಂದಲೇ ರಾಜೇಂದ್ರ ಕುಮಾರ್ ಹೆಸರು ಕೂಡ ಇದೀಗ ಸೇರ್ಪಡೆ ಯಾಗಿದೆ. ಬಹುಸಂಖ್ಯಾತ ಜನರಿಗೆ ನ್ಯಾಯ ಬದ್ಧ ರಾಜಕೀಯ ಪ್ರಾತಿನಿಧ್ಯ ನೀಡದಿದ್ದರೆ ಮುಂದಿನ ದಿನಗಳಲ್ಲಿ ಬಿಲ್ಲವರು ಮತ್ತು ಅವಕಾಶ ವಂಚಿತ ವರ್ಗಗಳು ಒಗ್ಗಟ್ಟಿನಿಂದ ಎರಡು ಪಕ್ಷಗಳಿಗೆ ಸರಿಯಾದ ಪಾಠ ಕಲಿಸುತ್ತದೆ ಮತ್ತು ಪರ್ಯಾಯ ರಾಜಕೀಯದ ದಾರಿಯನ್ನು ನೋಡಬೇಕಾಗುತ್ತದೆ.

-ರಾಜೇಂದ್ರ

0 comments: