Thursday, March 14, 2019

ಜನಾರ್ದನ ಪೂಜಾರಿ ಹೇಳಿಕೆಯನ್ನು ಸ್ವಾಗತಿಸೋಣ, ಒಂದು ವೇಳೆ ಜನಾರ್ದನ ಪೂಜಾರಿ ಬಂಡಾಯ ಅಭ್ಯರ್ಥಿಯಾದರೆ ಬಿಜೆಪಿಯವರು ಅಭ್ಯರ್ಥಿ ಹಾಕದೆ ಜನಾರ್ದನ ಪೂಜಾರಿಯವರಿಗೆ ಬೆಂಬಲಿಸುವರೇ ?

ಕಾಂಗ್ರೆಸ್ ಹಿರಿಯ ನಾಯಕ ಮತ್ತು ಬಿಲ್ಲವ ಸಮುದಾಯದ ಮಾರ್ಗದರ್ಶಕರಾದ ಜನಾರ್ದನ ಪೂಜಾರಿಯವರು ಇಂದು ಮಂಗಳೂರಿನಲ್ಲಿ ಕಾಂಗ್ರೆಸ್ ಪಾಳಯದಲ್ಲಿ ನಡೆಯುತ್ತಿರುವ ಟಿಕೆಟ್ ಲಾಬಿ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ .ಕಾಂಗ್ರೆಸ್ಸಿನಲ್ಲಿ ರಮಾನಾಥ ರೈ, ವಿನಯ ಕುಮಾರ್ ಸೊರಕೆ ,ಬಿಕೆ ಹರಿಪ್ರಸಾದ್ ಸ್ಪರ್ಧಿಸಿದರೆ ನಾನು ಬೆಂಬಲಿಸುವುದಾಗಿ ಹೇಳಿದ್ದಾರೆ .ಭ್ರಷ್ಟಾಚಾರ ಆರೋಪ ಹೊತ್ತಿರುವ ರಾಜೇಂದ್ರ ಕುಮಾರ್ ಮತ್ತು ಟಿಕೆಟ್ ಆಕಾಂಕ್ಷಿ ಐವನ್ ಲೋಬೋ ಸ್ಪರ್ಧಿಸಿದ್ದರೆ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಕೂಡ ಹೇಳಿದ್ದಾರೆ. ಮಾಧ್ಯಮದವರು ಭ್ರಷ್ಟಾಚಾರ ನಿರ್ಮೂಲನೆ ಕುರಿತಾಗಿ ಕೇಳಿದಾಗ ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವವನ್ನು ಹೊಗಳಿದ್ದಾರೆ .ಜನಾರ್ದನ ಪೂಜಾರಿ ಹೇಳಿಕೆಯನ್ನು ನಳೀನ್ ಕುಮಾರ್ ಬೆಂಬಲಿಗರು ಭರ್ಜರಿಯಾಗಿ ಸ್ವಾಗತಿಸುತ್ತಿದ್ದಾರೆ. ಇದೇ ಹಿಂಬಾಲಕರು ಕಳೆದ ಚುನಾವಣೆಯಲ್ಲಿ ಜನಾರ್ದನ ಪೂಜಾರಿಯವರನ್ನು ಯಾವ ರೀತಿ ತೇಜೋವಧೆ ಮಾಡಿದ್ದಾರೆ ಎನ್ನುವುದು ನಮಗೆಲ್ಲಾ ಗೊತ್ತಿರುವ ಸಂಗತಿ. ಅದೇನೇ ಇರಲಿ ಮಂಡ್ಯದಲ್ಲಿ ಬಿಜೆಪಿ ತೋರುತ್ತಿರುವ ಧೋರಣೆ ಮಂಗಳೂರಿನಲ್ಲಿ ಅನುಸರಿಸುವ ಶಕ್ತಿ ಇದೆಯೇ ಎಂಬ ಪ್ರಶ್ನೆ ಬಿಲ್ಲವ ಸಮುದಾಯಕ್ಕೆ ಕಾಡುತ್ತಿದೆ .ಮಂಡ್ಯದಲ್ಲಿ ಸುಮಲತಾ ಅಂಬರೀಶ್ ಅವರು ಪಕ್ಷೇತರವಾಗಿ ಸ್ಪರ್ಧಿಸಿದರೆ ತಾನು ಅಭ್ಯರ್ಥಿಯನ್ನು ಹಾಕದೆ ಸುಮಲತಾ ಅಂಬರೀಶ್ ಅವರಿಗೆ ಬೆಂಬಲಿಸುವುದಾಗಿ ಘಟಾನುಘಟಿ ನಾಯಕರು ಹೇಳಿದ್ದಾರೆ .ಮಂಗಳೂರಿನಲ್ಲಿ ನಳಿನ್ಕುಮಾರ್ ಹಿಂಬಾಲಕರು ಒಂದು ವೇಳೆ ಜನಾರ್ದನ ಪೂಜಾರಿಯವರು ಬಂಡಾಯ ಅಭ್ಯರ್ಥಿಯಾಗುವುದು ಆದರೆ ಸ್ವಯಂ ಘೋಷಿತ ಬಿಜೆಪಿ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಜನಾರ್ದನ ಪೂಜಾರಿ ಅವರನ್ನು ಬೆಂಬಲಿಸುವ ತಾಕತ್ತು ಇವರಿಗೆ ಇದೆಯೇ?ಮತ್ತೊಂದು ವಿಚಾರ ಈ ರಾಜೇಂದ್ರ ಕುಮಾರ್ ವಿರುದ್ಧ ಈ ಹಿಂದೆ ನಳಿನ್ ಕುಮಾರ್ ಬೆಂಬಲಿಗರು ಮತ್ತು ಕೆಲ ಸ್ವಯಂ ಘೋಷಿತ ನಾಯಕರು ಒಮ್ಮೆಯಾದರೂ ಧ್ವನಿ ಎತ್ತಿದ್ದನ್ನು ನೀವು ನೋಡಿದ್ದೀರಾ ??

0 comments: