ದೇಗುಲ ದರ್ಶನ ಕರ್ನಾಟಕ ತಂಡದಿಂದ ಅತ್ಯುತ್ತಮ ದೈವ ಮಾಹಿತಿ ನಿಮಗಾಗಿ ಓದಿ ತಪ್ಪದೇ ಶೇರ್ ಮಾಡಿ. ಈ ದೇವಿಯ ಮೂರ್ತಿ ಬಹಳ ವಿಶೇಷವಾದದ್ದು ಮಣ್ಣಿನಿಂದ ಮಾಡಿದ ಶ್ರೀ ರಾಜರಾಜೇಶ್ವರಿ ದೇವಿಯ ವಿಗ್ರಹದ ಇತಿಹಾಸ ರೋಚಕ ಕಥೆಯನ್ನು ತೆರೆಯುತ್ತದೆ.ಬನ್ನಿ ಕ್ಷೇತ್ರ ಮಹಿಮೆ ನೊಡೋಣ. ದೇಗುಲ ದರ್ಶನ ಕರ್ನಾಟಕ-ಪೊಳಲಿ-ರಾಜರಾಜೇಶ್ವರಿ ದೇವಿಯ ಪಾದಕ್ಕೊಂದು ಭಕ್ತಿಪೂರ್ವಕ ನಮನ.ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪೊಳಲಿ ಗ್ರಾಮದಲ್ಲಿ ನೆಲೆಸಿದ್ದಾಳೆ ಶ್ರೀ ರಾಜರಾಜೇಶ್ವರಿ. ಈ ಕ್ಷೇತ್ರ ಅತ್ಯಂತ ಪ್ರಾಚೀನವಾದದ್ದು ಸುರತ ಎಂಬ ಮಹಾರಾಜ ಈ ತಾಯಿಯನ್ನು ಪ್ರತಿಷ್ಠಾಪಣೆ ಮಾಡಿದ ಎಂಬ ಕಥೆಯಿದೆ. ಕ್ರಿ.ಶ ದ ಪ್ರಾರಂಭದಿಂದಲೂ ಈ ದೇವಸ್ಥಾನದ ಹೆಸರನ್ನು ಉಲ್ಲೇಖಿಸಲಾಗಿದೆ ಅಶೋಕನ ಶಾಸನದಲ್ಲಿ ವಿದೇಶಿ ಪ್ರವಾಸದ ಕಥನಗಳಲ್ಲಿ ಪೊಳಲಿ ರಾಜರಾಜೇಶ್ವರಿಯ ಉಲ್ಲೇಖ ಮಾಡಲಾಗಿದೆ. ಸುಮಾರು ೨೦೦೦ ವರ್ಷಗಳ ಹಿಂದೆ ಸುರತ ಮಹಾರಾಜ ರಾಜ್ಯವನ್ನು ಆಳುತ್ತದ್ದರು ವೈರಿಗಳ ಆಕ್ರಮಣದಿಂದ ರಾಜ್ಯವನ್ನು ಕಳೆದುಕೊಂಡು ರಾಜ್ಯಭ್ರಷ್ಠನಾಗಿ ಮೂರು ವರುಷ ತಪಸ್ಸನ್ನು ಮಾಡಿದರು ಆಮೇಲೆ ಅವರಿಗೆ ದೇವಿಯ ಸ್ವಪ್ನ ಬರುತ್ತದೆ.ಸುಬ್ರಮಣ್ಯ,ಮಹಾಗಣಪತಿ, ರಾಜರಾಜೇಶ್ವರಿ, ಭದ್ರಕಾಳಿ ಪ್ರದಾನ ವಿಗ್ರಹಗಳು ಮೃಣ್ಮಯ ಮೂರ್ತಿಗಳನ್ನು ಸುರತ ಮಹಾರಾಜರು ಪ್ರತಿಷ್ಠಾಪಿಸಿದರು. ಆರಾಧನೆ ಮಾಡುತ್ತಾ ಬಂದರು ಅವರು ಕಳಿದುಕೊಂಡ ರಾಜ್ಯವನ್ನೆಲ್ಲ ಮರಳಿ ಪಡೆದರು.
ರಾಜರಾಜೇಶ್ವರಿಯ ವಿಶೇಷತೆ ಬಗ್ಗೆ ಹೇಳಬೆಕೆಂದರೆ ಸಾಮಾನ್ಯವಾಗಿ ದೇವತಾ ಮೂರ್ತಿಗಳು ಕಲ್ಲಿನದ್ದಾಗಿರುತ್ತದೆ ಆದರೆ ಪೊಳಲಿ ಶ್ರೀ ರಾಜರಾಜೇಶ್ವರಿಯದ್ದು ವಿಶಿಷ್ಠವಾದ ಮಣ್ಣಿನ ವಿಗ್ರಹ ಸಾವಿರಾರು ವರ್ಷಗಳಿಗೂ ಇಲ್ಲಿ ಮಣ್ಣಿನ ಮೂರ್ತಿಯನ್ನೇ ಪೂಜಿಸುತ್ತಾ ಬರಲಾಗಿದೆ ಇದು ಅಂತಿಂಥ ಮಣ್ಣಿನ ಮೂರ್ತಿಯಲ್ಲ ಕಲ್ಲಿನಷ್ಟೇ ಗಟ್ಟಿಯಾದದ್ದು ಮಣ್ಣಿನ ಮೂರ್ತಿಯನ್ನು ಮರಗಳ ವಿಶಿಷ್ಠ ರಸಗಳನ್ನು ಬಳಸಿ ಮಣ್ಣಿಗೆ ಕಲ್ಲಿನ ಬಲ ಬರುವಂತೆ ಮಾಡಲಾಗಿದೆ. ಈ ವಿಧಾನವು ಬಹು ಪುರಾತನವಾದದ್ದು ಇಂದಿಗೂ ಬಹು ಹಿಂದೆಯೇ ಮಿಶ್ರಣ ಮಾಡಲಾದ ಮಣ್ಣಿನಿಂದ ತಾಯಿಯ ವಿಗ್ರಹ ನಿರ್ಮಾಣ ಮಾಡಲಾಗಿದೆ.
ಪೊಳಲಿಯ ಶ್ರೀ ರಾಜರಾಜೇಶ್ವರಿಯ ಮೂರ್ತಿಯು ಸುಮಾರು ೯ ಅಡಿಗಳಿಗೂ ಎತ್ತರವಿದೆ ಇಡೀ ಭಾರತದಲ್ಲಿ ಇಷ್ಟು ದೊಡ್ಡದಾದ ಮಣ್ಣಿನ ಮೂರ್ತಿ ಬೇರೆಲ್ಲೂ ಇಲ್ಲ ತಾಯಿಯ ವಿಗ್ರಹವು ತನ್ನ ಗಾತ್ರದಿಂದ ಅಷ್ಟೇ ಅಲ್ಲ ಕಲಾತ್ಮಕವಾಗಿಯೂ ಮೂರ್ತಿಯು ಅತ್ಯಾಕರ್ಷಕವಾದ ವಜ್ರದ ಕಿರೀಟವನ್ನು ಹೊಂದಿದೆ. ಈ ಕಿರೀಟವನ್ನು ಸುರತ ಮಹಾರಾಜರು ದೇವಿಗೆ ನೀಡಿದ್ದಾರೆ ಎಂದು ಹೇಳಲಾಗಿದೆ. ಪೊಳಲಿ ಶ್ರೀ ರಾಜರಾಜೇಶ್ವರಿ ಅಮ್ಮನವರ ಸನ್ನಿಧಿಯ ಎದುರು ನಿಂತಾಗ ನಮ್ಮೆಲ್ಲಾ ದು:ಖ ನಾಶವಾಗಿ ಸುಖ ನೆಮ್ಮದಿ ಮನೆ ಮಾಡುತ್ತದೆ ಹಚ್ಚ ಹಸಿರಿನಂದ ಕೂಡಿದ ಕ್ಷೇತ್ರಕ್ಕೆ ಭೇಟಿ ನೀಡಿದರೆ ಸಾಕು ಮನಸ್ಸು ಉಲ್ಲಾಸವಾಗುತ್ತದೆ ಸರ್ವಾಲಂಕರಭೂಷಿತವಾದ ಮೃಣ್ಮಯ ವಿಗ್ರಹವನ್ನು ನೋಡಿದಾಗ ಪ್ರಶಾಂತ ಮನಸ್ಥಿತಿ ಪಡೆದು ರೋಮಾಂಚಿತರಾಗುತ್ತೇವೆ. ವಿಗ್ರಹದಲ್ಲಿ ನೆಟ್ಟ ದೃಷ್ಠಿಯನ್ನು ಹಿಂತೆಗೆಯಲಾರದ ಭಾವ ತನ್ಮಯತೆ ಹೊಂದುತ್ತೇವೆ.
ಶ್ರೀ ಕ್ಷೇತ್ರ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನವು ಅತೀ ಪುರಾತನ ದೇವಾಲಯಗಳಲ್ಲಿ ಒಂದು. ಸುಮಾರು ಸಾವಿರಾರು ವರ್ಷಗಳ ಇತಿಹಾಸವುಳ್ಳ ಈ ದೇವಸ್ಥಾನವನ್ನು ಸುರಥ ಮಹಾರಾಜನು ನಿರ್ಮಿಸಿದನೆಂದು ಪುರಾಣವಿದೆ. ಸುರಥ ಮಹಾರಾಜನು ವೈರಿಗಳ ಆಕ್ರಮನದಿಂದ ನಡೆದ ಯುದ್ದದಲ್ಲಿ ಸೋತು ಎಲ್ಲವನ್ನು ಕಳೆದುಕೊಂಡು ವೈರಾಗ್ಯದಿಂದ ಬರುತ್ತಿರಲು ಸುಮೇದಿ ಎಂಬ ವೈಶ್ಯನು ಸಿಕ್ಕಿದ್ದನು. ಇವರಿಬ್ಬರು ಒಟ್ಟಾಗಿ ಕಾಡದಾರಿಯಲ್ಲಿ ಹೋಗುತ್ತಿರಲು ಸುಮೇಧ ಮುನಿಯ ಆಶ್ರಮವನ್ನು ಕಂಡು ಮುನಿವರ್ಯರಲ್ಲಿ ತನ್ನ ಕಷ್ಟವೆಲ್ಲವನ್ನು, ಹೇಳಲಾಗಿ, ಋಷಿಮುನಿಯು ಅರಸನಿಗೆ ಶ್ರೀ ರಾಜರಾಜೇಶ್ವರೀಯ ಮಂತ್ರೋಪದೇಶವನ್ನು ಕೊಟ್ಟು ಧ್ಯಾನದಿಂದಿರಲು ಹೇಳಲಾಗಿ, ರಾಜನು ಶ್ರೀದೇವಿಯ ಧ್ಯಾನದಲ್ಲಿರಲು ಒಂದು ದಿನ ಕನಸಿನಲ್ಲಿ ಆಸ್ಥಾನರೂಢಳಾಗಿ ಪರಿವಾರ ಸಹಿತ ಕುಳಿತಿದ್ದ ಶ್ರೀ ದೇವಿಯನ್ನು ಕಂಡ ಅರಸ ವಿಷಯವನ್ನು ಮುನಿಗೆ ತಿಳಿಸಲಾಗಿ, ಸುಮೇಧ ಮುನಿಯು ಅರಸನಿಗೆ ತಾನು ಕಂಡಂತೇ ಮೂರ್ತಿಯನ್ನು ಸೃಷ್ಟಿಸಿ, ಪ್ರತಿಷ್ಟಾಪಿಸಿ ಪೂಜಿಸು ಎಂದು ಹೇಳಿದಂತೆ ಮಣ್ಣಿನಿಂದ ಪರಿವಾರ ಸಹಿತ ಶ್ರೀದೇವಿಯ ಮೂರ್ತಿಯನ್ನು, ಸೃಷ್ಟಿಸಿ, ಪೂಜಿಸುತ್ತಿರಲು ತಾನು ಕಳಕೊಂಡ ಸಮಸ್ತ ರಾಜ್ಯಗಳನ್ನು ಮರಳಿ ಪಡೆದನೆಂದು ಕಥೆಯಿದೆ.
ಪುಳಿನ, ಪೊಳಲ್ ಎಂದರೆ ಮಣ್ಣು ಎಂಬ ಅರ್ಥದಿಂದ ಶ್ರೀ ದೇವಿಯ ಕ್ಷೇತ್ರಕ್ಕೆ ಪುಳಿನಾಪುರ, “ಪೊಳಲಿ” ಎಂಬ ಹೆಸರು ಬಂತು. ಪ್ರಧಾನ ದೇವತೆ ಶ್ರೀ ರಾಜರಾಜೇಶ್ವರೀ, ಎಡಗಡೆಯಲ್ಲಿ ಭದ್ರಕಾಳಿ, ಬಲಕಡೆಯಲ್ಲಿ ಶ್ರೀ ಸುಬ್ರಹ್ಮಣ್ಯ, ಶ್ರೀ ಮಹಾಗಣಪತಿ, ಬ್ರಹ್ಮವಟು, ವಿಷ್ಣುವಟು, ಶೂಲಿನಿ, ದಂಡಿನಿ, ಮುಂಡಿನಿ ಪರಿವಾರ ಗಣಗಳ ಸಾನಿಧ್ಯವು ಶ್ರೀ ಕ್ಷೇತ್ರದಲ್ಲಿದೆ.ಶ್ರೀ ಕ್ಷೇತ್ರದ ಹೊರಾಂಗಣದ ಬಲಬದಿಯಲ್ಲಿ ಶ್ರೀ ದುರ್ಗಾಪರಮೇಶ್ವರೀ ದೇವಿಯ ಗುಡಿಯಿದ್ದು ಸುಮೇಧಮುನಿಯು ಪ್ರತಿಷ್ಟಾಪಿಸಿದನೆಂದು ಪುರಾಣದಲ್ಲಿದೆ. ಎಡಬದಿಯಲ್ಲಿ ಶ್ರೀ ಕ್ಷೇತ್ರಪಾಲನ ಸನ್ನಿಧಿಯಿದೆ. ದೈನಂದಿನ ಪೂಜೆಗಳಲ್ಲಿ ಪ್ರಥಮ ಪೂಜೆ ದುರ್ಗಾಪರಮೇಶ್ವರಿಗೆ ನಡೆಯುತ್ತದೆ. ನಂತರ ಶ್ರೀ ರಾಜರಾಜೇಶ್ವರೀ ದೇವಿಗೆ ಹಾಗೂ ಪರಿವಾರ ದೇವತೆಗಳಿಗೆ ಪೂಜೆ ನಡೆಯುತ್ತದೆ. ಇದು ಇಲ್ಲಿಯ ವಿಶೇಷತೆ.
ಶ್ರೀ ಕ್ಷೇತ್ರದಲ್ಲಿ ಶ್ರೀ ರಾಜರಾಜೇಶ್ವರೀಯ ಸಾನಿಧ್ಯದಷ್ಟೇ ಶ್ರೀ ಸುಬ್ರಹ್ಮಣ್ಯನ ಸಾನಿಧ್ಯವಿದ್ದು ಜಾತ್ರೋತ್ಸವಗಳು ಶ್ರೀ ಸುಬ್ರಹ್ಮಣ್ಯನಿಗೆ ನಡೆಯುವುದು ವಿಶೇಷ. ದೈನಂದಿನ ದಿನಗಳಲ್ಲಿ ಬೆಳಿಗ್ಗೆ, ಮಧ್ಯಾಹ್ನ, ರಾತ್ರಿ ಹೀಗೆ ಮೂರು ಹೊತ್ತು ಪೂಜೆ ನಡೆಯುತ್ತದೆ. ಮಂಗಳವಾರ, ಗುರುವಾರ ಆದಿತ್ಯವಾರಗಳಲ್ಲಿ ಶೀ ಭದ್ರಕಾಳಿ ದೇವರಿಗೆ ರಾತ್ರಿ ಗಾಯತ್ರಿ ಪೂಜೆ ನಡೆಯುತ್ತದೆ. ವರ್ಷಂಪ್ರತಿ ನಡೆಯುವ ವಿಶೇಷ ಹಬ್ಬಗಳ ಆಚರಣೆ ಇಲ್ಲಿದೆ. ಇಲ್ಲಿಯ ಜಾತ್ರೋತ್ಸವ ಲೋಕಪ್ರಸಿದ್ಡವಾದುದು, ಹದಿನಾರು ಮಾಗಣೆ ಒಳಪಟ್ಟ್ತ ಈ ದೇವಸ್ಥಾನವು ಸಾವಿರ ಸೀಮೆಯ ದೇವಸ್ಥಾನವೆಂದೇ ಪ್ರಸಿದ್ಡಿ ಪಡೆದಿದೆ. ಪವಿತ್ರವಾದ ಪಲ್ಗುಣಿ ನದಿಯ ಎಡದಂಡೆಯಲ್ಲಿ ಹೊಲ, ಗುಡ್ಡೆ ಬೆಟ್ಟಗಳ ಮದ್ಯದಲ್ಲಿ ಶ್ರೀ ದೇವಳವು ರಾರಾಜಿಸುತ್ತದೆ. ಈ ಕ್ಷೇತ್ರ ಮಹಾಕಾಳಿ, ಮಹಾಲಕ್ಷ್ಮೀ, ಮಹಾಸರಸ್ವತಿ ಸ್ವರೂಪಳಾದ ಶ್ರೀ ಮಾತೆ, ಭಕ್ತರ ಭಕ್ತಿಗೆ ಫಲವನ್ನು ಈಯುತ್ತಾ ಇಷ್ಟಪ್ರದಾಯಕಿಯಾಗಿ ಇಲ್ಲಿ ಮೆರೆಯುತ್ತಿದ್ದಾಳೆ. ಈ ಕಾರಣದಿಂದಾಗಿ ಇಲ್ಲಿಗೆ ಭಕ್ತಮಾಹಾಸಾಗರವೇ ಹರಿದು ಬರುವುದು ವಿಶೇಷ. ಪ್ರದಾನ ದೇವತೆ ಶ್ರೀ ರಾಜರಾಜೇಶ್ವರೀ, ಶ್ರೀ ಭದ್ರಕಾಳಿ, ಶ್ರೀ ಮಹಾಗಣಪತಿ, ಶ್ರೀ ಸುಬ್ರಹ್ಮಣ್ಯ ಆಳೆತ್ತರದ ಕುಳಿತ ಭಂಗಿಯ ವಿಗ್ರಹಗಳಾಗಿದ್ದು ಇದು ಭಾರತದಲ್ಲೇ ಪ್ರಥಮ ಎಂದು ಹೇಳಿದರೂ ತಪ್ಪಗಲಾರದು. ಶ್ರೀದೇವಿಗೆ ತೊಡಲು ಹದಿನೆಂಟು ಮೊಳದ ಸೀರೆ ವಿಶೇಷ. ಇಲ್ಲಿ ಸಾನಿಧ್ಯವೃದ್ಧಿಗಾಗಿ ಪ್ರತೀ ಹನ್ನೆರಡು ವರ್ಷಕ್ಕೊಮ್ಮೆ ಲೇಪಾಷ್ಟ ಗಂಧ ಬ್ರಹ್ಮಕಲಶಾಭಿಷೇಕ ನಡೆಯುತ್ತದೆ
0 comments: