Thursday, March 14, 2019

ಬಂಟ್ವಾಳದ ಹರೀಶ್ ಪೂಜಾರಿ ಹತ್ಯೆಯಾದಾಗ ನಾವೆಲ್ಲ ಹಿಂದೂ ನಾವೆಲ್ಲ ಒಂದು ಆಗಿರಲಿಲ್ಲ ಯಾಕೆ !!

2016 ಅಂದಿನ ಕಾಂಗ್ರೆಸ್ ಸರ್ಕಾರ ಟಿಪ್ಪು ಜಯಂತಿ ಆಚರಿಸಿತ್ತು ಎಂಬ ಆಕ್ರೋಶದಲ್ಲಿ ಸೇಡು ತೀರಿಸುವ ಬರದಲ್ಲಿ ಅಮಾಯಕ ಬಿಲ್ಲವ ಯುವಕ ಹರೀಶ್ ಪೂಜಾರಿಯನ್ನು ಕೊಚ್ಚಿ ಕೊಲ್ಲುತಾರೆ .ಬಂಟ್ವಾಳದ ಹರೀಶ್ ಪೂಜಾರಿ ಹತ್ಯೆಯಾದಾಗ ನಾವೆಲ್ಲ ಹಿಂದೂ ನಾವೆಲ್ಲ ಒಂದು ಎಂಬ ಧ್ವನಿಯಿಂದ ನ್ಯಾಯಕ್ಕಾಗಿ ಯಾವೊಬ್ಬನೂ ಬೀದಿಗೆ ಇಳಿಯುವುದಿಲ್ಲ. ನ್ಯಾಯ ಎಂಬುದು ಹರೀಶ್ ಪೂಜಾರಿ ಕುಟುಂಬಕ್ಕೆ ಮರೀಚಿಕೆಯಾಗಿ ಬಿಡುತ್ತದೆ. ಹರೀಶ್ ಪೂಜಾರಿ ಹತ್ಯೆಗೆ ಸುಪಾರಿ ಕೊಟ್ಟವರು ಯಾರು ಎಂಬುದು ತನಿಖೆಯಿಂದ ಹೊರ ಬೀಳುವುದಿಲ್ಲ. ಆದರೆ ಈ ಪ್ರಕರಣದಲ್ಲಿ ಬಂಧಿತರಾದವರಲ್ಲಿ ಹೆಚ್ಚಿನವರು ಯಾರು ಎಂಬುದು ಜಗಜ್ಜಾಹೀರಾಗುತ್ತದೆ. ಆರ್ಥಿಕವಾಗಿ ಹಿಂದುಳಿದ ಹರೀಶ್ ಪೂಜಾರಿ ಅವರ ತಂದೆ ಮೃತಪಟ್ಟು ಹರೀಶ್ ಪೂಜಾರಿ ಅವರ ಮನೆಗೆ ಬೀಗ ಬಿದ್ದ ನಂತರದ ಬೆಳವಣಿಗೆಯಲ್ಲಿ ಯಾರೊಬ್ಬ ರಾಜಕೀಯ ಪುಢಾರಿಯು ಹರೀಶ್ ಪೂಜಾರಿ ಮನೆಯತ್ತ ಸುಳಿಯಲಿಲ್ಲ ಎಂಬುದು ಕಟು ಸತ್ಯವಾಗಿದೆ .ಇಂದಿನ ದಿನಗಳಲ್ಲಿ ಬಿಲ್ಲವರ ಸಮುದಾಯದ ಹಕ್ಕುಗಳ ಬಗ್ಗೆ ಧ್ವನಿ ಎತ್ತಿದರೆ ಕೆಲವರು ನಾನೊಬ್ಬ ಹಿಂದೂ ನಾವೆಲ್ಲ ಒಂದು ಎಂದೆಲ್ಲ ವಿಮರ್ಶಿಸುತ್ತಾರೆ ಆದರೆ ಇಂಥ ಘಟನೆಗಳು ನಡೆದಾಗ ಅವರು ತೆರೆಮರೆಯಲ್ಲಿ ಮರೀಚಿಕೆಯಾಗಿ ಬಿಡುತ್ತಾರೆ ಇವರೆಲ್ಲಾ ಯಾವ ಸೀಮೆ ಹೋರಾಟಗಾರರು ಎಂಬ ಅನುಮಾನ ನಮ್ಮಲ್ಲಿ ಕಾಡುತ್ತದೆ.

0 comments: