ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಮಕ್ಕಳಿಗೆ ಉಚಿತವಾಗಿ ವಿಷ್ಣು ಸಹಸ್ರನಾಮ ಸ್ತೋತ್ರ ಹಾಗೂ ಹನುಮಾನ್ ಚ್ಚಾಲಿಸಾ ಮಂತ್ರ ಪಠಣ ತರಬೇತಿ ಶಿಬಿರವು ಈಗಾಗಲೇ ನಡೆಯುತ್ತಿದೆ. ಇದರ ಜೊತೆ ಶಿವಗಿರಿಯ ಸತ್ಯಾನಂದ ಸ್ವಾಮೀಜಿಯವರಿಂದ ನಮ್ಮ ಸಂಸ್ಕೃತಿ, ಸಂಸ್ಕಾರದ ಅರಿವು ಮೂಡಿಸುವ ನಿಟ್ಟಿನಲ್ಲಿ ಹಾಗೂ ನಾರಾಯಣ ಗುರುಗಳ ತತ್ವಾದರ್ಶಗಳನ್ನು ಮಕ್ಕಳಿಗೆ ತಿಳಿಯಪಡಿಸುವುದರ ಜೊತೆ ನಮ್ಮ ಆಚಾರ ವಿಚಾರ ಮನೆಯಲ್ಲಿ ನಿತ್ಯ ಪೂಜಾ ವಿಧಿ ವಿಧಾನಗಳ ಬಗ್ಗೆ 5 ದಿನಗಳ ಕಾಲ ನಡೆದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ವಿಶೇಷ ಮಾಹಿತಿಯನ್ನು ನೀಡಿದರು.ಬ್ರಹ್ಮಶ್ರೀ ನಾರಾಯಣಗುರುಗಳ ತತ್ವಸಂದೇಶಗಳನ್ನು ಮಕ್ಕಳು ಓದಿ ತಮ್ಮ ಜೀವನದಲ್ಲಿ ಗುರುಗಳ ಆದರ್ಶವನ್ನು ಪಾಲಿಸಿದರೆ ಉತ್ತಮ ಎಂಬ ಅಭಿಪ್ರಾಯದಿಂದ ಡಾ.ಅನುಸೂಯ ಬಿ.ಟಿ.ಸಾಲ್ಯಾನ್ ಇವರು ನಾರಾಯಣ ಗುರುಗಳ ಜೀವನ ಚರಿತ್ರೆಯ ಪುಸ್ತಕವನ್ನು ಮಕ್ಕಳಿಗೆ ಉಚಿತವಾಗಿ ನೀಡಿದರು.
0 comments: