ಪುರಾತನ ಕಾಲದಿಂದಲೂ ಹೆಚ್ಚಾಗಿ ಮಣ್ಣಿನ ಪಾತ್ರೆಯಲ್ಲಿ ಆಹಾರ ತಯಾರಿಸುತ್ತಿದ್ದರೂ ಮಣ್ಣಿನ ಪಾತ್ರೆಯಲ್ಲಿ ಆಹಾರ ತಯಾರಿಕೆ ಆರೋಗ್ಯಕ್ಕೆ ಒಳ್ಳೆಯದು. ಆರೋಗ್ಯಕ್ಕೆ ಒಳ್ಳೆಯದು ಹೇಳಲಾಗಿತ್ತು, ಆದರೆ ಅಲ್ಯುಮಿನಿಯಂ, ಸ್ಟೈನ್ ಸ್ಟೀಲ್ ಬಳಕೆ, ಪ್ಲಾಸ್ಟಿಕ್ ಪಾತ್ರೆಗಳ ಬಳಕೆ ಆರಂಭವಾದ ನಂತರ ಮಣ್ಣಿನ ಮಡಿಕೆಗಳು ಮೂಲೆಗೆ ಸರಿದು ವಿನಾಶದ ಅಂಚಿಗೆ ಸರಿದವು. ನಾನ್‌ಸ್ಟಿಕ್ ಪಾತ್ರೆಗಳ ಯುಗ ಆರಂಭವಾದ ಮೇಲೆಯೂ ಮಣ್ಣಿನ ಪಾತ್ರೆಗಳಿಗೆ ಅಡುಗೆ ಮನೆಯಲ್ಲಿ ಜಾಗವಿಲ್ಲದಂತಾಯಿತು.ಆದರೆ ಕ್ರಮೇಣವಾಗಿ ಈ ಪಾತ್ರೆಗಳ ಬಳಕೆ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂಬ ವರದಿಗಳ ಬಹಿರಂಗವಾಗುತ್ತಿದ್ದಂತೆ ಈಗ ಜನ ಮತ್ತೆ ಮಣ್ಣಿನ ಮಡಿಕೆಗಳ ಮೊರೆ ಹೋಗುತ್ತಿದ್ದಾರೆ. ಕೆಲವು ರೆಸಾರ್ಟ್‌ಗಳು, ಐಷಾರಾಮಿ ಹೋಟೆಲ್‌ಗಳಲ್ಲಿ ಮಣ್ಣಿನ ಪಾತ್ರೆ ಬಳಕೆ ಪ್ಯಾಷನ್ ಆಗಿದೆ. ಹಾಗಾಗಿ ಮತ್ತು ಮಣ್ಣಿನ ಅಡುಗೆ ಪಾತ್ರೆಗಳು ನಿಧಾನವಾಗಿ ಗತ ವೈಭವಕ್ಕೆ ಮರಳುತ್ತಿವೆ.
ಮಣ್ಣಿನ ಪಾತ್ರೆಯಲ್ಲಿ ಆಹಾರ ತಯಾರಿಸುವಾಗ ಬರುವಂತಹ ಹಬೆಯನ್ನು ಕೂಡ ಮಣ್ಣಿನ ಪಾತ್ರೆಗಳು ಹೀರಿಕೊಳ್ಳುವುದು. ಈ ಕಾರಣಕ್ಕೆ ಆಹಾರಕ್ಕೂ ಮತ್ತಷ್ಟು ಪೋಷಕಾಂಶಗಳು ಸಿಗುವುದು. ಮಣ್ಣಿನ ಪಾತ್ರೆಗಳನ್ನು ತಯಾರಿಸಲು ಬಳಸುವ ಮಣ್ಣಿನಲ್ಲಿ ಒಳ್ಳೆಯ ಗುಣಮಟ್ಟದ ಪೋಷಕಾಂಶಗಳಾದ ಮಿಟಮಿನ್ ಬಿ೧೨, ಕ್ಯಾಲ್ಸಿಯಂ ಪಾಸ್ಪರಸ್, ಕಬ್ಬಿನಾಂಶ ಮತ್ತು ಮೆಗ್ನಿಷಿಯಂ ಇರುತ್ತದೆ. ಜೊತೆಗೆ ಮಣ್ಣು ಕ್ಷಾರೀಯ ಗುಣ ಹೊಂದಿದ್ದು ನೈಸರ್ಗಿಕವಾಗಿ ನಿರ್ದಿಷ್ಟಕಾರಿಯಾಗಿ ಕೆಲಸ ಮಾಡುತ್ತದೆ. ಹಾಗಾಗಿ ಆಹಾರದ ರುಚಿ ಮತ್ತು ಪೋಷಕಾಂಶ ಹೆಚ್ಚಾಗುತ್ತದೆ.ಮಣ್ಣಿನ ಮಡಿಕೆಯಲ್ಲಿರುವ ನೀರು ತಂಪಾಗಿರುತ್ತದೆ. ಮಣ್ಣಿನಲ್ಲಿರುವ ಲವಣಗಳು ಆಮ್ಲೀಯ ಅಂಶಗಳನ್ನು ಹೀರಿಕೊಳ್ಳುತ್ತದೆ. ಹಾಗಾಗಿ ಆಮ್ಲೀಯ ಗುಣ ಹೊಂದಿರುವ ಆಹಾರಗಳನ್ನು ಮಣ್ಣಿನ ಪಾತ್ರೆಯಲ್ಲಿ ಬಿಸಿ ಮಾಡುವುದು. ಆರೋಗ್ಯಕ್ಕೆ ಒಳ್ಳೆಯದು. ಮಣ್ಣಿನ ಪಾತ್ರೆಯಲ್ಲಿ ಆಹಾರ ತಯಾರಿಸಿದರೆ ಆಹಾರದಲ್ಲಿನ ಪೋಷಕಾಂಶಗಳು ನಾಶವಾಗದೆ ಹಾಗೆಯೇ ಉಳಿಯುವಲ್ಲಿ ಜೊತೆಗೆ ಮಣ್ಣಿನ ಪಾತ್ರೆಯಲ್ಲಿ ಆಹಾರ ದೀರ್ಘಕಾಲ ಬಿಸಿಯಾಗಿರುತ್ತದೆ.
ಮಣ್ಣಿನ ಪಾತ್ರೆಯಲ್ಲಿ ಅಡುಗೆ ಮಾಡುವ ಮೊದಲು ಕೆಲ ಅಂಶಗಳತ್ತ ಗಮನ ಕೊಡಬೇಕು. ಹೊಳಪಿಲ್ಲದ ಮಣ್ಣಿನ ಪಾತ್ರೆ ಬಳಸಬೇಕು. ಅಡುಗೆ ಮಾಡುವ ಮೊದಲು ಮಣ್ಣಿನ ಪಾತ್ರೆಯನ್ನು ೧೫ ನಿಮಿಷ ನೀರಿನಲ್ಲಿ ನೆನಸಿಡಿ. ಮಣ್ಣಿನಿಂದ ಮಾಡಿದ ಪಾತ್ರೆಗಳು ಸುಲಭವಾಗಿ ಒಡೆಯುವುದರಿಂದ ತುಂಬಾ ಕಾಳಜಿ ಅಗತ್ಯ. ಮಣ್ಣಿನಿಂದ ಮಾಡಿದ ಪಾತ್ರೆಗಳು ಸುಟ್ಟಿರಬೇಕು. ಸುಡದ ಬಿಸಿಲಿನಲ್ಲಿ ಒಣಗಿಸಿದ ಮಡಿಕೆಗಳನ್ನು ಅಡುಗೆಗೆ ಬಳಸಬಾರದು. ಅಡುಗೆಗೆ ಬಳಸುವ ಮಡಿಕೆಯ ಹೊರಭಾಗಕ್ಕೆ ಬಣ್ಣ ಹೊಡೆಯಬಾರದು.
0 comments: