ತುಳುವರ ಬದುಕಿನ ಮಜಲುಗಳು ಎಷ್ಟೇ ಸಂಘರ್ಷಮಯವಾಗಿದ್ದರು ಕೂಡ ತಮ್ಮದೇ ಆದ ಕಟ್ಟಲೆಗಳನ್ನು ಬಿಟ್ಟವರಲ್ಲ. ತುಳುವರಲ್ಲಿ ಅದೆಷ್ಟೇ ಜಾತಿ ಪದ್ದತಿಗಳಿದ್ದರು ಕೂಡ ಪ್ರತಿಯೊಬ್ಬರು ಕೂಡ ಅವರದೇ ಆದ ಅನನ್ಯವಾದ ಸಂಪ್ರದಾಯಗಳನ್ನು ಪಾಲಿಸಿಕೊಂಡು ಬಂದವರು. ಕೆಲವೊಂದು ಏಕ ರೂಪದಲ್ಲಿ ಇದ್ದರು ಕೂಡ ಇನ್ನೂ ಕೆಲವು ಆ ಜಾತಿಗೆ ಮಾತ್ರ ಸೀಮಿತವಾದದ್ದು ಇದೆ. ಇವೆಲ್ಲದರ ಮಧ್ಯೆ ಬಿಲ್ಲವ ಸಮುದಾಯ ತಮ್ಮದೇ ಆದ ಸಂಪ್ರದಾಯಗಳ ಛಾಪನ್ನು ಒತ್ತಿದವರು. ತಮ್ಮ ಗುರಿಕಾರ ಬೋಂಟ್ರರ ನಾಯಕತ್ವದಲ್ಲಿ ತಮ್ಮ ಜಾತಿ ಸಂಪ್ರದಾಯಗಳನ್ನು ಮದುವೆ ಮುಂಜಿಗಳನ್ನು ನಡೆಸಿಕೊಂಡು ಬರುತ್ತಿದ್ದರು. ನಾನಿವತ್ತು ಬರೆಯ ಹೊರಟಿರುವ ವಿಷಯ ಬಿಲ್ಲವ ಸಮುದಾಯದಲ್ಲಿದ್ದ ಮದುವೆ ನಿಶ್ಚಿತಾರ್ಥದ ಕ್ರಮಗಳ ಬಗ್ಗೆ. ನಾನು ಇದನ್ನು ಬರೆಯಲು ಕಾರಣ ನನ್ನ ಸ್ನೇಹಿತರಾದ ದಿನೇಶ್ ಸುವರ್ಣ ರಾಯಿಯವರು.ಹಳೆಯ ಸಂಪ್ರದಾಯದ ಪ್ರಕಾರ ನಿಶ್ಚಿತಾರ್ಥ ಮಾಡಿಸುವ ಜವಬ್ದಾರಿ ಅವರ ಹೆಗಲ ಮೇಲೇರಿದಾಗ ಅವರು ನನ್ನಲ್ಲಿ ಈ ವಿಷಯ ಕೇಳಿದಾಗ ನಾಲ್ಕು ಜನರಿಗೆ ಉಪಯೋಗವಾಗಲಿ ಎನ್ನುವ ನಿಟ್ಟಿನಲ್ಲಿ ಮರೆತು ಹೋದ ಸಂಪ್ರಾಯಗಳು ಯಾರಿಗಾದರು ಉಪಯೋಗವಾಗಲಿ ಎಂದು ಬರೆಯುತ್ತಿದ್ದೇನೆ.
ದಿನೇಶ್ ಸುವರ್ಣ ರಾಯಿಯಂತಹ ಯುವ ನಿರೂಪಕರು ಹಳೆ ಸಂಪ್ರದಾಯಗಳಿಗೆ ಒತ್ತುಕೊಟ್ಟು ಮಾಡಿಸುತ್ತಿರುವುದು ನಮಗೆಲ್ಲ ಹೆಮ್ಮೆಯ ವಿಷಯ. ನುಡಿದಂತೆ ನಡೆಯುವ ಅವರು ನಮಗೂ ಮಾದರಿ. ಬಿಲ್ಲವರಲ್ಲಿ ಈ ಮದುವೆ ನಿಶ್ಚಿತಾರ್ಥಕ್ಕೆ ಪಾತೆರ ಕೊರ್ದು ಕಾಯಿ ಪೂಲ್ ಪಗಪುನಿ ಅಂತ ಹೇಳುವುದು. ಅಂದರೆ ಮಾತು ಕೊಟ್ಟು ಕಾಯಿ ವೀಳ್ಯ ನೀಡುವುದು ಅಂತ ಅರ್ಥ. ಈ ಎಲ್ಲಾ ಕ್ರಮಗಳು ಆಗುವುದು ಜಾತಿಯ ಗುರಿಕಾರ ಅಥವ ಬೋಂಟ್ರ ಎನ್ನುವ ನಾಯಕನ ಮುಂದಾಳತ್ವದಲ್ಲಿ. ಇಡೀ ಜಾತಿ ಕಟ್ಟಿನಲ್ಲಿ ಗುರಿಕಾರನ ಮಾತೇ ಅಂತಿಮ ಮತ್ತು ಅವನ ಮಾತನ್ನು ಮೀರಿ ಹೋದ ಸಂಧರ್ಭಗಳು ಬಹಳ ವಿರಳ. ಈ ಹಿಂದೆ ಈಗಿನ ರೀತಿಯಲ್ಲಿ ಹೆಣ್ಣಿನ ಮನೆಗೆ ಇಡೀ ಕುಟುಂಬ ಹೋಗುವ ಕ್ರಮ ಇರಲಿಲ್ಲ ಬೇಕಾದ ನಾಲ್ಕು ಜನ ಹೋಗಿ ಮದುವೆ ಮಾತುಕತೆ ಮುಗಿಸಿ ಬರುವಂತಹುದು. ಅದು ಕೂಡ ಇಲ್ಲಿ ಗಂಡು ಕೂಡ ಹೆಣ್ಣಿನ ಮನೆಗೆ ಮದುವೆಗೆ ಮುಂಚೆ ಹೋಗುವ ಸಂಪ್ರದಾಯವಿಲ್ಲ.
ಕೆಲವು ಕಡೆಗಳಲ್ಲಿ ಹೋಗುವುದು ಆದರು ವಿರಳ. ಮನೆಗೆ ಬಂದ ಗಂಡಿನ ಮನೆಯವರಿಗೆ ಚೌಕ ಆಕಾರದಲ್ಲಿ ಪಡಸಾಲೆಯಲ್ಲಿ ಚಾಪೆಯನ್ನು ಹಾಸಿ ಕೂರಿಸುತ್ತಾರೆ. ಇದಕ್ಕೆ ಚೌಕದ ಕಳ ಅಥವ ಬುದ್ದಿವಂತರ ಕಳ ಅಂತಲೂ ಕರೆಯುವ ವಾಡಿಕೆ ಇದೆ. ಈ ಚೌಕದ ಕಳದ ಬಗ್ಗೆ ಉಳ್ಳಾಕ್ಲು ನೇಮದಲ್ಲೂ ಉಲ್ಲೇಖ ಇದೆ. ಇಲ್ಲಿ ಪೂರ್ವಾಭಿಮುಖವಾಗಿ ಗಂಡಿನ ಮನೆಯವರು L ಆಕಾರದಲ್ಲಿ ಕೂತರೆ ಪಶ್ಚಿಮಾಭಿಮುಖವಾಗಿ L ಆಕಾರದಲ್ಲಿ ಗಂಡಿನಮನೆಯವರು ಕೂರುತ್ತಾರೆ. ಈ ರೀತಿಯಾಗಿ ಕೂರುವ ಮುಂಚೆ ಹುಡುಗಿಯ ಕಡೆಯ ಗುರಿಕಾರ ಈ ರೀತಿಯಾಗಿ ಕೂಗಿ ಹೇಳುತ್ತಾರೆ, ಕಲತ್ತ ಬುದ್ಯಂತೆರೆಡ,ಜಾತಿದ ಬುದ್ಯಂತೆರೆಂಡ,ಜಾತಿ ಸಂಗತೆರೆಡ,ಊರುದ ಅದ್ವೆರೆಡ,ಪರವೂರುದ ಪೊದ್ವೆರೆಡ,ದೂರದ ಬಿನ್ನೆರೆಡ,ಮುಟ್ಟದ ಇಷ್ಟೆರೆಡ ಚೌಕದ ಕಲ ಪಾಡುವ ಅಂತ ಹೇಳುತ್ತಾರೆ. ಅಷ್ಟು ಹೊತ್ತಿಗೆ ಹೆಣ್ಣು ಬೆಲ್ಲ ಮತ್ತು ನೀರನ್ನು ಮಧ್ಯದಲ್ಲಿ ಇಟ್ಟು ಆಕೆ ಒಳ ಹೋಗುತ್ತಾಳೆ. ಹೆಣ್ಣಿನ ಮನೆಯ ಗುರಿಕಾರ ಗಂಡಿನ ಮನೆಯ ಗುರಿಕಾರನಿಗೆ ಸೀಯಾಳ ನೀಡಿ ಅತಿಥಿ ಸತ್ಕಾರ ಮಾಡುತ್ತಾರೆ ಬಂದಂತಹ ಬೇರೆಯವರು ಬೆಲ್ಲ ನೀರು ಕುಡಿಯುತ್ತಾರೆ.
ತದನಂತರ ಬಂದವರಿಗೆಲ್ಲ ಹುಡುಗಿಯ ಮಾವ ಅಡಿಕೆ ವೀಳ್ಯ ತಿನ್ನಲು ನೀಡುತ್ತಾರೆ. ತದನಂತರ ಹೆಣ್ಣಿನ ಮನೆಯ ಗುರಿಕಾರ ಕೇಳುತ್ತಾನೆ. ಅದು ತುಳುವಿನಲ್ಲಿ ಸಂಭಾಷಣೆ ಈ ರೀತಿ ಇರುತ್ತೆ. ಜಾತಿ ಸಂಗತೆರ್ ಒಟ್ಟುಗು ಬೈದರ್ ಬತ್ತಿ ಕಜ್ಜ ಪನೊಲಿಯೆ ಅಪಗ ಆನ ಕೋಡಿದಕ್ಲು ಪನ್ಪೆರ್ ಬತ್ತಿ ಕಜ್ಜ ಪನಂದೆ ದಾನೆ ಊರು ತಿರುಗೊಂದು ಬತ್ತ ದಪ್ಪುನ ಎರ್ಲು ಉಂಡ ಬೊರ್ಪಿನ ಪೆತ್ತ ಉಂಡ ಬಿತ್ತುದ ಬಿದೆ ಉಂಡ ಕೊರ್ಪುನ ಪೊಣ್ಣು ಉಂಡ ಕೇನೊಂದು ಬತ್ತ. ಅಪಗ ಪೊಣ್ಣ ಇಲ್ಲದಕ್ಲು ಪನ್ಪೆರ್ ದಪ್ಪುನ ಎರ್ಲು ಬೋಡಾಂಡ ಕುಲ್ಕುಂದ ಎರು ಜಾತ್ರೆಗ್ ಪೋವೊಡಾವು, ಬೊರ್ಪಿನ ಪೆತ್ತ ಬಚ್ಚದುಂಡು, ಬಿತ್ತುದ ಬಿದೆಗ್ ಅಟ್ಟ ಅಡಿತುದು ಆತುಂಡು ಕೊರ್ಪಿನ ಪೊಣ್ಣು ಕೊರ್ದಾತುಂಡು ಇಲ್ಲಡ್ ಉಪ್ಪುನಿ ಅಮೆ ನೀರ್ ಮೀಯಂದಿ ಪೊಣ್ಣು ಅಲೆನ ಸೊಂಟಡ್ ನೀರ್ದ ಕಡ್ಯ ಕುಲ್ಲಂದ್ ತರೆಗ್ ಎಣ್ಣೆ ಪಾರ್ದ್ ಬಾಚಿಯರೆ ತೆರಿಯಂದ್ ಇಲ್ಲದ ನೆಲಕ್ ಅಂಬಿ ಪೂಜಿದ್ ತೆರಿಯಂದ್ ( ಈ ರೀತಿಯ ಉಲ್ಲೇಖ ಕೊರಗಜ್ಜನ ತಾಯಿಯ ಮದುವೆ ಮತ್ತು ಬಾರೆಯರ ತಾಯಿಯ ಮದುವೆಯ ಪಾರ್ದನದಲ್ಲಿದೆ) ಪನ್ನಗ ಆನ ಕೋಡಿದಕ್ಲು ಪನ್ಪೆರ್ ಪೊಣ್ಣಗ್ ಉಂದು ಪೂರ ಕಲ್ಪಯರೆ ಇಲ್ಲಡ್ ನಾಲ್ ಮಾಮಿಯರ್ಲ್ ಉಲ್ಲೆರ್ ನಿಕ್ಲು ಒಪ್ಪಿತುದ್ ಕೈ ದಾರೆ ಮೈತ್ ಕೊರಿಯರ್ಂಡ ಎಂಕ್ಲೆನ ಇಲ್ಲದ ಬೊಲ್ಪು ಪಂದ್ ಬಾಮಿತುದು ಲೆತೊಂದು ಪೋಪ ಪನ್ಪೆರ್
ಅಪಗ ಪೊಣ್ಣ ಕೋಡಿದಕ್ಲು ಪನ್ಪೆರ್ ಈತ್ ದೈರ್ಯ ಕೊರ್ನಗ ಪೊರ್ಲುಡು ದಾರೆ ಮೈತುದು ಕೊರ್ಪ ಪನ್ಪೆರ್. ಈ ಮಾತುಕತೆ ಆದ ನಂತರ ಪರಸ್ಪರ ತಮ್ಮ ಪಾಂಡಿತ್ಯವನ್ನು ತೋರಿಸಿಕೊಳ್ಳುವ ವೇದಿಕೆಯನ್ನು ರೂಪಿಸಿಕೊಳ್ಳುತ್ತಾರೆ. ಮಾತಿನಲ್ಲಿ ಒಬ್ಬರಿಗೊಬ್ಬರನ್ನು ಕಾಲು ಎಳೆಯಲು ಪ್ರಯತ್ನ ಪಡುತ್ತಾರೆ. ಆ ಮಾತುಗಳು ತುಳುವಿನಲ್ಲಿ ಈ ರೀತಿಯಾಗಿದೆ. ಆಕಾಶ ಮಿತರಿಯರೆ ಲೆಂಚಿ, ಭೂಮಿ ಪೊಲ್ಯರೆ ಸೂಜಿ ಕನವೊಡು, ಉಜ್ಜೆರುದ ಉಲನಾರ್ ದೆಪ್ಪೊಡು, ತಡ್ಪೆದಾತ್ ಅಗಲದ ಬಂದನಿಗೆ, ಪೇರ್ದ ಪೊದಿಕೆ ಬೆಂಙನದ ಮುಡಿ ಕನವೊಡು, ಕಪ್ಪು ಕಕ್ಕೆದ ಬೊಲ್ದು ಸೂಯಿ, ಬೊಲ್ದು ಕಕ್ಕೆದ ಕಪ್ಪು ಸೂಯಿ ಕನವೊಡು ಅಪಂಡ ಎಂಕ್ಲೆನ ಪೊಣ್ಣನು ಕೊರುವ ಅಂತ ಹುಡುಗಿಯ ಕಡೆಯವರು ಹೇಳುವಾಗ ಅದಕ್ಕೆ ಪ್ರತಿಯಾಗಿ ಗಂಡಿನ ಕಡೆಯವರು ಪಾಂಡಿತ್ಯ ಪ್ರದರ್ಶನ ಮಾಡುತ್ತಾರೆ. ತದನಂತರ ನಿಶ್ಚಿತಾರ್ಥದ ಮಾತುಕತೆ ಮುಂದುವರೆಯುತ್ತದೆ. ಚೌಕದ ಕಳದಲ್ಲಿ ಕೂತ ಎಲ್ಲರು ತಲೆಗೆ ಮುಂಡಾಸು ಕಟ್ಟುತ್ತಾರೆ. ಪೂರ್ವದಿಂದ ಪಶ್ಚಿಮಾಭಿಮುಖವಾಗಿ ಹೆಣ್ಣಿನ ಸೋದರ ಮಾವ ನಿಲ್ಲುತ್ತಾನೆ ಪಶ್ಚಿಮದಿಂದ ಪೂರ್ವಾಭಿಮುಖವಾಗಿ ಗಂಡಿನ ಸೋದರ ಮಾವ ನಿಲ್ಲುತ್ತಾನೆ.
ಹೆಣ್ಣಿನ ಸೋದರ ಮಾವ ಕೈಯಲ್ಲಿ ಐದು ವೀಳ್ಯದೆಲೆ ಒಂದು ಅಡಿಕೆ ಹಿಡಿದು ಕೊಂಡು ಈ ರೀತಿ ಹೇಳುತ್ತಾನೆ. ಇಂಚಿನ ಪೊಣ್ಣನ್ ಇಂಚಿನ ಆನಗ್ ಕೊರ್ಪಿನೆಡ್ ದಾಲ ತಪ್ಪಿಜ್ಜಿ ಅಂತ ಮೂರು ಸಲ ಹೇಳಿ ಮೂರು ಸಲ ವೀಳ್ಯ ಅಡಿಕೆಯನ್ನು ಗಂಡಿನ ಮಾವನ ಕೈಯಲ್ಲಿ ಬದಲಾಯಿಸಿಕೊಳ್ಳುತ್ತಾರೆ. ಅದೇ ರೀತಿ ಗಂಡಿನ ಮಾವ ಹೇಳುತ್ತಾನೆ ಇಂಚಿನ ಆನಗ್ ಇಂಚಿನ ಪೊಣ್ಣನ್ ಕನಪಿನೆಡ್ ದಾಲ ತಪ್ಪಿಜ್ಜಿ ಅಂತ ಹೇಳಿ ವೀಳ್ಯ ಬದಲಾಯಿಸಿಕೊಳ್ಳುತ್ತಾರೆ ತದನಂತರ ಗಂಡಿನ ಮನೆಯ ಗುರಿಕಾರ ಮದುವೆ ಮಾತನ್ನು ಅಧಿಕೃತ ಪಡಿಸಿ ದಿನ ನಿಗದಿ ಪಡಿಸಿ ಸಭೆಯಲ್ಲಿ ಅರುಹುತ್ತಾರೆ. ತದನಂತರ ಗಂಡಿನ ಕಡೆಯ ಗುರಿಕಾರ ಮತ್ತು ಹೆಣ್ಣಿನ ಕಡೆಯ ಗುರಿಕಾರ ತಬ್ಬಿಕೊಂಡು ತಬ್ಬಿಕೊಳ್ಳುವ ಸಂಪ್ರದಾಯವಿದೆ ಇದು ಸಂಬಂಧ ಗಟ್ಟಿಯಾದ ದ್ಯೋತಕ. ಅಲ್ಲಿಂದ ಬಂದವರಿಗೆ ಊಟ ಉಪಚಾರ ನಡೆಯುತ್ತೆ. ಇಂದಿನ ರೀತಿಯಲ್ಲಿ ಉಂಗುರ ಬದಲಾಯಿಸಿಕೊಳ್ಳುವ ಸಂಪ್ರದಾಯವಿಲ್ಲ. ಅದೆಲ್ಲ ಬ್ರಿಟಿಷರು ಭಾರತಕ್ಕೆ ಬಂದ ಮೇಲೆ ಅವರ ಸಂಪ್ರದಾಯಗಳು ನಮ್ಮ ಸಂಪ್ರದಾಯಗಳ ಮೇಲೆ ಬೀರಿದ ಪರಿಣಾಮವಾಗಿ ಈಗಿನ ದುಂದು ವೆಚ್ಚದ ನಿಶ್ಚಿತಾರ್ಥಗಳು. ಆ ನಂತರ ಬಂದವರಿಗೆ ಕಡ್ಲೆ ಮತ್ತು ಬಲ್ಯಾರ್ ಮೀನಿನ ಊಟ ನೀಡಲಾಗುತ್ತೆ. ಇಂದಿನ ಕಾಲದ ರೀತಿಯಲ್ಲಿ ಆವಾಗ ಕೋಳಿ ಪದಾರ್ಥಗಳು ಕಮ್ಮಿನೆ, ಏನಿದ್ದರು ಕಡ್ಲೆ ಬಲ್ಯಾರಿನ ಸಮಾರಾಧನೆ. ಈ ರೀತಿಯಾಗಿ ಸಂಪ್ರದಾಯ ಬದ್ಧವಾಗಿ ಕಮ್ಮಿ ಖರ್ಚಿನಲ್ಲಿ ಶೀಫ್ರವಾಗಿ ಮುಗಿಯುತ್ತಾ ಇತ್ತು. ಇಲ್ಲಿ ಬಂದ ಕೆಲವು ವಿಷಯಗಳು ಪ್ರಾದೇಶಿಕವಾಗಿ ಭಿನ್ನತೆಯನ್ನು ಹೊಂದಿದೆ. ಬರಹ:- ಶೈಲು ಬಿರ್ವ ಅಗತ್ತಾಡಿ ದೋಲ ಬಾರಿಕೆ.
ಹಳೆಯ ನೆನಪುಗಳು ಮರುಕಳಿಸಿದಂತಾಯಿತು.
ReplyDeleteಇಂತಹ ಲೇಖನಗಳನ್ನು ಇನ್ನೂ ಹೆಚ್ಚಾಗಿ ಪ್ರಕಟಿಸಿ. ನಮ್ಮ ಯುವ ಪೀಳಿಗೆಗೆ ಹಳೆಯ ಪದ್ಧತಿಗಳು ಗೊತ್ತಾಗಲಿ.
ReplyDeleteಅತ್ಯುತ್ತಮ ಬರಹದೊಂದಿಗೆ ಉಪಯುಕ್ತ ಮಾಹಿತಿಯನ್ನು ನೀಡಿದ್ದೀರಾ, ಈ ಪ್ರಯತ್ನ ಸದಾ ಮುಂದುವರೆಯಲಿ.
ReplyDelete