Sunday, June 30, 2019

ಗೋಕರ್ಣನಾಥ ಕ್ಷೇತ್ರಕ್ಕೆ ಭೇಟಿ ನೀಡಿದ ಜನಾರ್ದನ ಪೂಜಾರಿ

ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರಕ್ಕೆ ಇಂದು ಸಂಜೆ ಮಾಜಿ ಕೇಂದ್ರ ಸಚಿವ ಹಾಗೂ ಮಂಗಳೂರು ದಸರಾ ರೂವಾರಿ ಜನಾರ್ಧನ ಪೂಜಾರಿ ಭೇಟಿ ನೀಡಿ ದೇವರ ದರ್ಶನ ಪಡೆದರು .ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು .ಗೋಕರ್ಣನಾಥ ದೇವರ ಮುಂದೆ ನಿಂತು ಮಾತನಾಡಿದ ಜನಾರ್ಧನ ಪೂಜಾರಿ ನಾನು ತಪ್ಪು ಮಾಡಿದ್ದೇನೆ ನನ್ನನ್ನು ಕ್ಷಮಿಸಿ ಎಂದು ಮೊರೆಯಿಟ್ಟರು. ಶ್ರೀ ಗೋಕರ್ಣನಾಥ ಕ್ಷೇತ್ರಕ್ಕೆ ದೇವರ ಪ್ರೇರಣೆ ಯಂತೆ ತಕ್ಷಣವಾಗಿ ಯಾರಿಗೂ ತಿಳಿಸದ್ದೆ ಬಂದಿದ್ದೇನೆ ಎಂದರು. ಸುದ್ಧಿ ತಿಳಿದ ತಕ್ಷಣ ಕ್ಷೇತ್ರಕ್ಕೆ ಆಗಮಿಸಿದ ಪೂಜಾರಿಯವರ ಹಿತೈಷಿಗಳಾದ ಜಿಲ್ಲಾ ಉಸ್ತುವಾರಿ ಸಚಿವ ಯು. ಟಿ. ಖಾದರ್, ಮಾಜಿ ಶಾಸಕ ವಿಜಯಕುಮಾರ್ ಶೆಟ್ಟಿ, ಪುರುಷೋತ್ತಮ ಚಿತ್ರಾಪುರ, ಕಳ್ಳಿಗೆ ತಾರಾನಾಥ ಶೆಟ್ಟಿ,ಹಾಗೂ ಇನ್ನಿತರ ಪ್ರಮುಖರು ದೇವಸ್ಥಾನ ಕ್ಕೆ ಆಗಮಿಸಿ ಪೂಜಾರಿಯವರನ್ನು ಸ್ವಾಗತಿಸಿದರು.

1 comment:

  1. ಗೋಕರ್ಣ ಕ್ಷೇತ್ರಕ್ಕೆ ಜನಾರ್ಧನ ಪೂಜಾರಿಯವರ ಕೊಡುಗೆ ಅಪಾರ

    ReplyDelete