“ಮಾನವರೆಲ್ಲರೂ ಮಾನವ ತಳಿಯ ಸಂತತಿಗಳು. ಮನುಷ್ಯರ ಸ್ಧಾನಮಾನಗಳಲ್ಲಿ ವ್ಯತ್ಯಾಸವಿದ್ದರೂ, ಜಾತಿಯಲ್ಲಿರಲು ಸಾಧ್ಯವಿಲ್ಲ. ಕೆಲವರು ಶ್ರೀಮಂತರಿರಬಹುದು. ಕೆಲವರು ಇಲ್ಲದೆ ಇರಬಹುದು. ಬಣ್ಣದಲ್ಲಿಯೂವ್ಯತ್ಯಾಸವಿರಬಹುದು. ಇದು ಬಿಟ್ಟರೆ ಬೇರೇನೂ ವ್ಯತ್ಯಾಸವಿಲ್ಲ.
ಶಿಕ್ಷಣದ ಕೊರತೆ, ಹಣದ ಕೊರತೆಯನ್ನು ನೀವೇ ಮಾಡಿಕೊಂಡಿದ್ದೀರಿ. ಶಿಕ್ಷಣ ಪ್ರತಿಯೋರ್ವನ ಬದುಕಿನಲ್ಲಿ ಅತಿ ಪ್ರಾಮುಖ್ಯವಾದುದು. ಒಮ್ಮೆ ನಿವು ವಿದ್ಯಾವಂತರಾದರೆ ಶ್ರೀಮಂತಿಕೆ, ಹಣ, ಅಧಿಕಾರ ಶುಚಿತ್ವ ನಿಮ್ಮ ಹಿಂದೆಯೇ ಬರುತ್ತದೆ. ನಿಮ್ಮಲ್ಲಿ ಶ್ರೀಮಂತಿಕೆ ಇಲ್ಲವೆನ್ನುವುದು ಸರಿಯಲ್ಲ. ನಿಮಗೆ ನೀವೇ ಸಿರಿವಂತರು.
ಪ್ರತಿದಿನ ನೀವು ದುಡಿಯುತ್ತೀರಿ, ಹಣ ಸಂಪಾದನೆ ಮಾಡುತ್ತೀರಿ ಆದರೆ ಅದನ್ನು ದುರುಪಯೋಗ ಪಡಿಸುತ್ತೀರಿ. ಅಂದರೆ ಮದ್ಯಪಾನ ಮಾಡುತ್ತೀರಿ. ದಿನಾಲೂ ಒಂದು ಆಣೆ ಪ್ರತ್ಯೇಕ ಇಟ್ಟುಬಿಡಿ. ಹದಿನಾರು ದಿನಗಳಲ್ಲಿ ಒಂದು ರೂಪಾಯಿಯಾಗುತ್ತದೆ. ಬಿಡದೆ ಈ ರೀತಿಯ ಉಳಿತಾಯವನ್ನು ಮುಂದುವರೆಸಿರಿ. ನೀವು ಕೂಡಿಟ್ಟ ಹಣದಿಂದ ನಿಮ್ಮ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿ. ಸ್ವಾವಲಂಬಿಗಳಾಗರಿ. ಹೊರಗಿನವರ ನೆರವಿಲ್ಲದೆ ನೀವು ಇದನ್ನು ಯಾಕೆ ಸಾಧಿಸಬಾರದು? ತಿಂಗಳಿಗೊಮ್ಮೆ ನಿಮ್ಮವರೆಲ್ಲ ಒಂದುಗೂಡಿಸಿ ಸಮಸ್ಯೆಗಳ ಬಗ್ಗೆ ಚರ್ಚಿಸಿರಿ. ಸಮಸ್ಯಗಳಿಗೆ ಪರಿಹಾರ ತನ್ನಿಂದ ತಾನಾಗಿಯೇ ದೊರಕುತ್ತದೆ.
ನನಗೆ ಗೊತ್ತು ನಿಮ್ಮ ಮಕ್ಕಳೂ ಮದ್ಯವ್ಯಸನಿಗಳಾಗಿದ್ದಾರೆ. ದಯವಿಟ್ಟು ನಿಮ್ಮ ಮಕ್ಕಳನ್ನು ದುರಾಭ್ಯಾಸದ ಸಂಕೋಲೆಯಿಂದ ಬಿಡಿಸಿರಿ. ನೀವು ಸಾಧ್ಯವಿದ್ದಷ್ಟು ಮದ್ಯಪಾನದಿಂದ ದೂರವಿರಿ.”
0 comments: