Sunday, July 7, 2019

ಬಿಲ್ಲವ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ

ಬಿರುವೆರ್ ಕಡೇಶಿವಾಲಯ ಸೇವಾ ಟ್ರಸ್ಟ್( ರಿ.) ಇದರ ವತಿಯಿಂದ ಬಿಲ್ಲವ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು, ಕಾರ್ಯಕ್ರಮವನ್ನು ದೀಪ ಬೆಳಗಿಸಿ , ಗುರುಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಉದ್ಘಾಟಿಸಲಾಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಆಳ್ವಾಸ್ ಕಾಲೇಜು ಮೂಡಬಿದಿರೆ ಇದರ ಉಪಾನ್ಯಾಸಕರಾದ ಶ್ರೀ.ಡಾ| ಯೋಗೀಶ್ ಕೈರೋಡಿ ಇವರು ಕಾರ್ಯಕ್ರಮವನ್ನು ಉದ್ದೇಶಿಸಿ " ಬಿಲ್ಲವ ಸಮಾಜವು ಎಲ್ಲ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡುತ್ತಿದೆ.

ಯುವಸಮುದಾಯವು ಆಧುನಿಕತೆಯನ್ನು ಅಳವಡಿಸಿಕೊಳ್ಳುವುದರೊಂದಿಗೆ ಹಿಂದಿನ ಸಂಪ್ರದಾಯಗಳನ್ನು ಪಾಲಿಸಬೇಕು ,ತತ್ವಗಳ ಚಿಂತನೆಯಿಂದ ಆಧುನಿಕತೆಯನ್ನು ಹೊಂದಬೇಕು ಎಂದು ಉಪನ್ಯಾಸವನ್ನು ನೀಡಿದರು.ಕಾರ್ಯಕ್ರಮಕ್ಕೆ ಆಗಮಿಸಿದ ಇನ್ನೋರ್ವ ಅತಿಥಿ, ಬಿರುವೆರ್ ಕುಡ್ಲ ಪುತ್ತೂರು ಘಟಕ ಇದರ ಅಧ್ಯಕ್ಷರು ಹಾಗೂ ಚಲನಚಿತ್ರ ನಟರಾದ ಶೈಲೇಶ್ ಬಿರ್ವ ಅಗತ್ತಾಡಿ ಬರ್ಕೆ ಇವರು ಕಾರ್ಯಕ್ರಮವನ್ನು ಉದ್ದೇಶಿಸಿ "ಇನ್ನೊಬ್ಬರ ಅಡಿಯಾಳಾಗಿ ಕೆಲಸ ಮಾಡುವುದಕ್ಕಿಂತ ಸ್ವಉದ್ಯೋಗದಿಂದ ಬಲಾಯುತರಾಗಬೇಕು.ದೀಪ ಬೆಳಗಿದರೆ ಮಾತ್ರ ಬೃಹತ್ ಬೆಳಕನ್ನು ನೀಡುವುದು" ಎಂದು ಹೇಳಿದರು.ಕಾರ್ಯಕ್ರಮದ ಸಭಾಧ್ಯಕ್ಷತೆ ವಹಿಸಿದ್ದ ನಿವೃತ್ತ ಶಿಕ್ಷಕರಾದ ಧರ್ನಪ್ಪ ಪೂಜಾರಿ ಕನ್ನೊಟ್ಟು ಇವರು "ಎಲ್ಲರೊಂದಿಗೆ ಭಾಂದವ್ಯವನ್ನು ಬೆಳೆಸಬೇಕು, ಆಧುನಿಕತೆಯಿಂದ ಸಂಬಂಧಗಳು ಕಡಿದು ಹೋಗುತ್ತಿದೆ" ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಬಿಲ್ಲವ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಯಿತು ಹಾಗೂ ಈ ಸಂದರ್ಭ ಕಳೆದ ಬಾರಿಯ ಮಳೆಗೆ ಹಾನಿಯಾಗಿದ್ದ ಲೀಲಾವತಿ ಬೆದ್ರಿಮಾರು ಎಂಬವರ ಮನೆಯನ್ನು ಟ್ರಸ್ಟ್ ನ ವತಿಯಿಂದ ಸುಮಾರು 85,000 ವೆಚ್ಚದಲ್ಲಿ ದುರಸ್ತಿಗೊಳಿಸಲಾಗಿದ್ದು ಅದರ ಮೊತ್ತದ ಚೆಕ್ಕನ್ನು ಕುಟುಂಬಕ್ಕೆ ಹಸ್ತಾಂತರಿಸಲಾಯಿತು. ಕಾರ್ಯಕ್ರಮದ ಕೊನೆಯಲ್ಲಿ ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದ ವೇದಿಕೆಯಲ್ಲಿ ಉದ್ಯಮಿಗಳಾದ ಶ್ರೀ ನಿತಿನ್ ಪೂಜಾರಿ ಅರ್ಬಿ , ಟ್ರಸ್ಟಿನ ಅಧ್ಯಕ್ಷರಾದ ವಿದ್ಯಾಧರ ಪೂಜಾರಿ, ಗೌರವಾಧ್ಯಕ್ಷರಾದ ಸಂಜೀವ ಪೂಜಾರಿ, ಸಲಹಾ ಸಮಿತಿಯ ಅಧ್ಯಕ್ಷರಾದ ಲೋಕನಾಥ್ ಪೂಜಾರಿ, ವಿದ್ಯಾರ್ಥಿ ಘಟಕದ ಅಧ್ಯಕ್ಷರಾದ ಕೀರ್ತನ್ ಪೂಜಾರಿ ಇವರು ಉಪಸ್ಥಿತರಿದ್ದರು. ಆರಂಭದಲ್ಲಿ ಟ್ರಸ್ಟ್ ನ ಸಂಚಾಲಕರಾದ ಸಂಪತ್ ಕೋಟ್ಯಾನ್ ಕಡೇಶಿವಾಲಯ ಇವರು ಪ್ರಾಸ್ತಾವಿಕ ಮಾತುಗಳನ್ನಾಡಿದರು, ಹಾಗೂ ವಿದ್ಯಾರ್ಥಿ ಘಟಕದ ಸದಸ್ಯರಾದ ಧನಂಜಯ ಪೂಜಾರಿ ರಾಜಾಲು ಇವರು ವಿದ್ಯಾರ್ಥಿ ವೇತನ ಪಡೆದ ವಿದ್ಯಾರ್ಥಿಗಳ ಪರಿಚಯವನ್ನು ತಿಳಿಸಿದರು ಭವ್ಯಶ್ರೀ ಕೋಟ್ಯಾನ್ ಇವರು ಕಾರ್ಯಕ್ರಮ ನಿರೂಪಿಸಿದರು ಹಾಗೂ ಸೌಮ್ಯ ಕೋಟ್ಯಾನ್ ಬೆದ್ರಿಮಾರು ಇವರು ವಂದಿಸಿದರು‌

0 comments: