Sunday, July 7, 2019

ನೊಂದ ಬಡ ಕುಟುಂಬಕ್ಕೆ ಸ್ಪಂದಿಸಿದ ವಿಶ್ವ ಬಿಲ್ಲವರ ಸೇವಾ ಛಾವಡಿ

ಮಂಗಳೂರು ಸುರತ್ಕಲ್ ಚೊಕ್ಕಬೆಟ್ಟುವಿನ ಬಾಡಿಗೆ ಮನೆಯಲ್ಲಿರುವ ಶ್ರೀಮತಿ ತುಳಸಿ ಇವರ ಪತಿ ಹರೀಶ್ ಬಂಗೇರ ತಲೆಯಲ್ಲಿ ಕ್ಯಾನ್ಸರ್ ಗೆಡ್ಡೆ ಬೆಳೆದು ಅದನ್ನು ಕೆ.ಎಂ.ಸಿ ಅತ್ತಾವರ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಿ ತೆಗೆಯಲಾಗಿದೆ. ಅದಕ್ಕೆ ಲಕ್ಷಾಂತರ ರೂಪಾಯಿ ವೆಚ್ಚವಾಗಿದೆ. ಈಗ ಕೆ.ಎಮ್.ಸಿ ಆಸ್ಪತ್ರೆಯಲ್ಲಿ ರೇಡಿಯೇಶನ್ ಮತ್ತು ಕಿಮೋಥೆರಪಿ ಚಿಕಿತ್ಸೆ ನಡೆಯುತ್ತಿದ್ದು, ಅದಕ್ಕೆ ಲಕ್ಷಾಂತರ ರೂಪಾಯಿ ಬೇಕಾಗುತ್ತದೆ ಎಂದು ವೈದ್ಯರು ಸಲಹೆ ನೀಡಿರುತ್ತಾರೆ. ತುಳಸಿ ಈಗಾಗಲೇ ಸಾಲ ಸೋಲ ಮಾಡಿ ಹಣ ಹೊಂದಿಸಲು ಪರದಾಡುತ್ತಿದ್ದಾರೆ. ‌ಅಲ್ಲದೆ ಇಬ್ಬರು ಪುತ್ರಿಯರಲ್ಲಿ ಒಬ್ಬಳು ಅಂಗವಿಕಲತೆ ಹಾಗೂ ಬುದ್ದಿಮಾಂದ್ಯತೆ ಖಾಯಿಲೆಯಿಂದ ಬಳಲುತ್ತಿದ್ದಾಳೆ. ಇವಳಿಗೆ ಸುಮಾರು 10,000/- ರೂಪಾಯಿಗಳ ಹಣ ಔಷದಿಗಳಿಗೆ ಬೇಕಾಗುತ್ತದೆ.ಚಿಂತಾಜನಕ ಪರಿಸ್ಥಿತಿ ಯನ್ನು ಮನಗಂಡು ದಾನಿಗಳ ನೆರವಿನಿಂದ ಒಟ್ಟಾದ ಮೊತ್ತವನ್ನು ವಿಶ್ವ ಬಿಲ್ಲವರ ಸೇವಾ ಚಾವಡಿ ವತಿಯಿಂದ 10,000 ರೂ ಗಳನ್ನು ಈ ದಿನ 07.07.2019 ರಂದು ಈ ದಿನ ಹಸ್ತಾಂತರ ಮಾಡಲಾಯಿತು.ಈ ಸಂದರ್ಭದಲ್ಲಿ ಅಜಿತ್ ಪೂಜಾರಿ ಪಜಿರು,ಸೌಜನ್ಯ ಪೂಜಾರಿ ಮತ್ತು ವಿಜಯ್ ಕುಮಾರ್ ಆಮ್ಟಾಡಿ ಉಪಸ್ಥಿತರಿದ್ದರು.

0 comments: