Tuesday, July 9, 2019

ಪ್ರಚಾರವಿಲ್ಲದೆ ನಿಸ್ವಾರ್ಥ ಸೇವೆ ಮಾಡುತ್ತಿರುವ ಚೇತು ಕುಂಟಾಡಿ

ಜನರಿಗೆ ಸಹಾಯ ಮಾಡಿ ಅಂದ್ರೆ ಹಣ ಸನ್ಮಾನ ಸಾಮಾಜಿಕ ಸೇವೆ ಎಂದು ಹೇಳಿ ಕ್ಲಬ್ ಸದಸ್ಯರುಗಳನ್ನು ಮಾಡಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸ್ಟೇಜ್ ಮೇಲೆ ನಿಂತು ಮಾತನಾಡಿ ಚಪ್ಪಾಳೆ ಗಿಟ್ಟಿಸಿಕೊಳ್ಳುವ ಬರುವ ಜಾಯಮಾನ ಹೆಚ್ಚಿನವರಲ್ಲಿ, ಅದರಲ್ಲೂ ಪೇಪರ್ ಗಳಿಗೆ ಪ್ರಚಾರ ಸಿಗೋ ಪುಕ್ಕಟ್ಟೆ ಜನರು ಸಿಗುತ್ತಾರೆ.ಆದರೆ ಇಲ್ಲೊಬ್ಬ ವ್ಯಕ್ತಿ ತನ್ನ ಮೊಬೈಲ್ ವಾಟ್ಸಾಪ್ ಮೆಸೇಜ್ನಲ್ಲಿ ಗಿರವಿ ಹೊಡೆಯುತ್ತಾ ಇರುತ್ತಾರೆ. ಯಾವ ಪೇಪರ್ ಪ್ರಚಾರವಿಲ್ಲದೆ ನಿಸ್ವಾರ್ಥ ಸೇವೆಯಲ್ಲಿ ರಕ್ತದ ತೀವ್ರ ಅವಶ್ಯಕತೆ ಇರುವವರಿಗೆ ನೆರವಾಗುವ ಮೂಲಕ ಬೆಂಗಳೂರಿನಿಂದ ಹಿಡಿದು ಕರಾವಳಿ ಬೀದರ್ ನಿಂದ ಹಿಡಿದು ಚಾಮರಾಜನಗರ ತನಕ ಎಲ್ಲೆಲ್ಲೂ ಈತನ ಹೆಸರು ಚಲಾವಣೆಯಲ್ಲಿ ಇರುತ್ತದೆ. ಈತ ಬೇರೆ ಯಾರೂ ಅಲ್ಲ ಚೇತು ಕುಂಟಾಡಿ .ಕಾರ್ಕಳದ ಕುಂಟಾಡಿ ಶೇಖರ್ ಪೂಜಾರಿ ಹಾಗೂ ಲಲಿತಾ ಪೂಜಾರಿಯ ಮುದ್ದಿನ ಮಗ

ಬೆಂಗಳೂರಿನಲ್ಲಿ ಇರುವಾಗಲೇ ಹಲವಾರು ಸಂಘ ಸಂಸ್ಥೆಗಳಲ್ಲಿ ತನ್ನನ್ನು ತೊಡಗಿಸಿಕೊಂಡು ಸಮಾಜಕ್ಕೆ ತನ್ನಿಂದ ಒಂದು ಚಿಕ್ಕ ಸೇವೆ ನೀಡಬೇಕು ಎಂಬ ಉದ್ದೇಶವಿದೆಯೇ ಹಾಗೆಯೇ ಎರಡು ಸಾವಿರಕ್ಕೂ ಹೆಚ್ಚು ಯುನಿಟ್ ರಕ್ತವನ್ನು ಏರ್ಪಾಡು ಮಾಡಿದ್ದಾರೆ. ಸತತ ಎಂಟು ವರ್ಷಗಳ ಕಾಲ ಇದೇ ಪ್ರಯತ್ನದ ಮೂಲಕ ಜನರ ನಾಡಿ ಮಿಡಿತ ಗಳಲ್ಲೂ ಇವರಿದ್ದಾರೆ. ಚೇತನ್ ಹೆಸರಲ್ಲಿ ತನ್ನ ಊರಿನ ಹೆಸರನ್ನು ತಳುಕು ಹಾಕಿಕೊಂಡು ರಾಜ್ಯದಾದ್ಯಂತ ಯಾರಿಗಾದರೂ ರಕ್ತ ಬೇಕಾದರೂ ಮೆಸೇಜ್ ಮಾಡಿ ರಕ್ತಕ್ಕೆ ರಕ್ತದಾನಿಗಳಿಗೆ ಕೈ ಕೈ ಚಾಚುತ್ತಾರೆ. ಮಣಿಪಾಲದ ಉಡುಪಿ ಮಂಗಳೂರು ಪುತ್ತೂರು ಬೆಂಗಳೂರು ಹುಬ್ಬಳ್ಳಿ ಆಸ್ಪತ್ರೆಗಳ ಪೈಕಿ ಎಲ್ಲರೂ ಈತನ ಹೆಸರನ್ನು ಗುರುತಿಸಿದ್ದಾರೆ. ಆದರೆ ಈ ಆತನನ್ನು ನೋಡದವರು ಹೆಚ್ಚು ,ಆದರೆ ವಾಟ್ಸಪ್ ಗಳಲ್ಲಿ ಮಾತ್ರ ವೈರಲ್ ವ್ಯಕ್ತಿ, ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಮೇಲ್ವಿಚಾರಕ ಆಗಿ ಕೆಲಸ ಮಾಡುತ್ತಿದ್ದ ಸಂದರ್ಭ ಕೆಲಸದ ಒತ್ತಡದ ನಡುವೆಯೂ ಮೆಸೇಜ್ ಮಾಡಿ ತನ್ನ ಗುಂಪಿನ ರಕ್ತದಾನಿಗಳಿಗೆ ಎಚ್ಚರಗೊಳಿಸುತಿದ್ದರು. ಈಗ ಅಲ್ಲಿಂದ ಹೊರಟು ಉಡುಪಿಯಲ್ಲಿ ಕೆಲಸ ಮಾಡುತ್ತಾ ಸ್ಥಳೀಯ ಯುವಕರ ಗುಂಪನ್ನು ಕಟ್ಟಿಕೊಂಡು ರಕ್ತದಾನಕ್ಕೆ ಪ್ರೇರೇಪಿಸುತ್ತಿದ್ದಾರೆ .ಮೊಬೈಲ್ ವಾಟ್ಸಾಪ್ ಗ್ರೂಪ್ ಗಳಲ್ಲಿ ರಕ್ತ ದಾನಿಗಳ ನೆರವು ಪಡೆದು ರೋಗಿಗಳಿಗೆ ರಕ್ತ ನೀಡಿಯೇ ಸಿದ್ದ ಯಾರಿಗೆ ಯಾವ ರೋಗಿಗೂ ರಕ್ತದ ಅವಶ್ಯಕತೆ ಇದ್ದಾಗ ಜನರು ನೆನಪು ಮಾಡುವ ಹೆಸರು ಚೇತು ಕುಂಟಾಡಿ. ಇತ್ತೀಚೆಗೆ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ಹೋಗಿದ್ದಾಗ ಬೆಳಗಾವಿಯ ಅನಾರೋಗ್ಯದಿಂದ ಬಳಲುತ್ತಿದ್ದ ಲಕ್ಷ್ಮೀಬಾಯಿ ಅವರಿಗೆ ಎರಡು ಬಾಟಲ್ ರಕ್ತ ಬೇಕಾಗಿತ್ತು ರಕ್ತ ನೀಡುವ ಸಲುವಾಗಿ ಹೋದಾಗ ಸಿಕ್ಕಿದ್ದವರೂ ಅವರಿಗೆ ಮಾತಿಗೆ ಸಿಕ್ಕಾಗ ಚೇತು ಕುಂಟಾಡಿ ರಕ್ತದ ವ್ಯವಸ್ಥೆ ಮಾಡಿದ್ದಾರೆ ಎಂದು ಹೇಳಿದ್ದು ಕೇಳಿ ಖುಷಿಯಾಯಿತು. ಎಲ್ಲೆಡೆಯೂ ಆತನ ನಿಸ್ವಾರ್ಥ ಸೇವೆಯನ್ನು ನೋಡಿದಾಗ ಹೆಮ್ಮೆ ಅನ್ನಿಸುತ್ತದೆ ತನ್ನ ಹುಟ್ಟುಹಬ್ಬದ ದಿನದಂದು ಹದಿನೇಳು ಬಾರಿ ರಕ್ತದಾನ ಹನ್ನೆರಡು ಬಾರಿ ಪೆಟ್ ಲೆಟ್ಸ್ ನೀಡಿದ್ದ ಚೇತನ್ ಜೀವ ಉಳಿಸಿ ಕಣ್ಣೀರು ಒರೆಸಿದ ಪುಣ್ಯಾತ್ಮ. ಅದೇ ರಕ್ತದಾನ ರೋಗಿಯ ಪಾಲಿಗೆ ಅಪತ್ಭಾಂಧವವಾಗಿದ್ದ ಚೇತು ಕುಂಟಾಡಿ ಹಲವರಿಗೆ ಮಾದರಿಯಾಗಿದ್ದಾರೆ ಲಕ್ಷಾಂತರ ಮಂದಿಯ ಜೀವ ಉಳಿಸಿದ ಕೀರ್ತಿಯನ್ನು ಪಡೆದಿದ್ದಾರೆ. ಇವರ ನಿಸ್ವಾರ್ಥ ಸೇವೆ ನಿರಂತರವಾಗಿ ಸಾಗಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಆಶೀರ್ವಾದ ಇವರಿಗೆ ಇರಲಿ

0 comments: