Tuesday, July 2, 2019

ಮಾನವೀಯತೆಗೆ ಇನ್ನೊಂದು ಹೆಸರು ವಿಶು ಶೆಟ್ಟಿ ಅಂಬಲಪಾಡಿ

ಸದಾ ಸಾಮಾಜಿಕ ಕೆಲಸದಲ್ಲಿ ನಿರತರಾಗಿರುವ ವಿಶು ಶೆಟ್ಟಿ ಅಂಬಲಪಾಡಿ ಅವರು ಈ ಬಾರಿ ಅನಾರೋಗ್ಯದಿಂದ ಜಿಲ್ಲಾಸ್ಪತ್ರೆಗೆ ದಾಖಲಾದ ಗೀತಾ ಪೂಜಾರಿಯವರ ಅಂತ್ಯ ಸಂಸ್ಕಾರಕ್ಕೆ ಪತಿಯು ಅಸಹಾಯಕನಾದಾಗ ಶವ ಸಂಸ್ಕಾರ ನಡೆಸಿಕೊಟ್ಟ ಮಾನವೀಯ ಘಟನೆ ಜುಲೈ 2 ರಂದು ಬೀಡಿನಗುಡ್ಡೆ ಸ್ಮಶಾನದಲ್ಲಿ ನಡೆಯಿತು.ಕಳೆದ ಆರು ತಿಂಗಳಿಂದ ನಿರಂತರ ಚಿಕಿತ್ಸೆ ಪಡೆಯುತ್ತಿದ್ದ ಗೀತಾ ಪೂಜಾರಿಯವರು ಜುಲೈ 1 ರಂದು ಚಿಕಿತ್ಸೆ ಪಲಿಸದೆ ನಿಧನ ಹೊಂದಿದ್ದರು. ಪತಿ ನಾರಾಯಣ ಪೂಜಾರಿ ಪತ್ನಿಯ ಅಂತ್ಯ ಸಂಸ್ಕಾರಕ್ಕೆ ಚಿಕ್ಕಾಸು ಹಣವಿಲ್ಲದೆ ಶವವನ್ನು ಶವಗಾರದಲ್ಲಿ ಇರಿಸಿ ಅಸಹಾಯಕರಾಗಿ ದುಃಖಿಸುತ್ತಿದ್ದರು. ವಿಷಯ ತಿಳಿದ ವಿಶು ಶೆಟ್ಟಿಯವರು ನಾರಾಯಣ ಪೂಜಾರಿಯವರನ್ನು ಸಂತೈಸಿ, ಶವದ ಅಂತ್ಯಕ್ರೀಯೆಯ ಎಲ್ಲಾ ವೆಚ್ಚಗಳನ್ನು ಭರಿಸಿ, ತಾವೇ ನಿಂತು ಜುಲೈ 2 ರಂದು ಮದ್ಯಾಹ್ನ ಬೀಡಿನಗುಡ್ಡೆಯ ರುದ್ರಭೂಮಿಯಲ್ಲಿ ಶವ ಸಂಸ್ಕಾರ ನಡೆಸಿಕೊಟ್ಟಿದ್ದಾರೆ. ಪ್ರದೀಪ್ ಕುಮಾರ್ ಶ್ರಮದಾನದ ಮೂಲಕ ಅಂತ್ಯಕ್ರೀಯೆಗೆ ಸಹಕರಿಸಿದ್ದಾರೆ.

0 comments: