Tuesday, July 21, 2020

ಯೋಗ ಕ್ಷೇತ್ರ ಮತ್ತು ಬಣ್ಣದ ಲೋಕದಲ್ಲಿ ತೊಡಗಿಸಿಕೊಂಡಿರುವ ಕಾವ್ಯಶ್ರೀ ಜೋಡುಕಲ್ಲು

ಯೋಗ ಕ್ಷೇತ್ರದಲ್ಲಿ ರಾಷ್ಟ್ರ ಮಟ್ಟದಲ್ಲಿ ಕೀರ್ತಿ, ರೇಂಜರ್ ವಿಭಾಗದಲ್ಲಿ ರಾಜ್ಯ ಮಟ್ಟದ ಪ್ರಶಸ್ತಿ ಪುರಸ್ಕೃತೆ, ಬಣ್ಣದ ಲೋಕವಾದ ರಂಗಭೂಮಿಯಲ್ಲೂ ತನ್ನನ್ನು ತಾನು
ತೊಡಗಿಸಿಕೊಂಡಿರುವ ಪ್ರತಿಭೆ  ಕಾವ್ಯಶ್ರೀ ಜೋಡುಕಲ್ಲು.

 ಇವರು ಬಟ್ಯಪೂಜಾರಿ ಹಾಗೂ ಶ್ರೀಮತಿ ವಿಜಯ ಪೂಜಾರಿ ದಂಪತಿಗಳ ಪುತ್ರಿ. ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸ‌.ಹಿ.ಪ್ರಾ ಶಾಲೆ ಕಾಯರ್ ಕಟ್ಟೆಯಲ್ಲಿ ಹಾಗೂ ಪ್ರೌಢ ಶಿಕ್ಷಣವನ್ನು ಸರ್ಕಾರಿ  ಪ್ರೌಢ  ಶಾಲೆ ಕಾಯರ್ ಕಟ್ಟೆಯಲ್ಲಿ ಪೂರೈಸಿದ್ದಾರೆ.ಪದವಿ ಪೂರ್ವ ಶಿಕ್ಷಣವನ್ನು ಸರೋಜಿನಿ ಮದುಸೂದನ್ ಪಿ ಯು ಕಾಲೇಜು ಅತ್ತಾವರದಲ್ಲಿ ಪಡೆದು, ನಾರಾಯಣ ಗುರು ಪ್ರಥಮ ದರ್ಜೆ ಕಾಲೇಜಿನಲ್ಲಿ BBM ಪದವಿಯನ್ನು ಪೂರ್ಣಗೊಳಿಸಿದ್ದಾರೆ.

 ಯೋಗ ಕ್ಷೇತ್ರದಲ್ಲಿ ಅಪಾರವಾದ ಆಸಕ್ತಿ ಹೊಂದಿದ್ದು ಶ್ರೀ ಪಥಿಮ್ ಕುಮಾರ್ ಕೆ, ಶ್ರೀ ವಿಜಿವಾಲ್ ಹಾಗೂ ಕೇರಳ ರಾಜ್ಯಯೋಗ ತರಬೇತುದಾರ ಶ್ರೀ ಕೃಷ್ಣದಾಸ್ ರವರಿಂದ ಯೋಗ ಶಿಕ್ಷಣವನ್ನು ಪಡೆದುಕೊಂಡಿದ್ದಾರೆ.ಚೆನ್ನರಾಯಣ ಪಟ್ಟಣದಲ್ಲಿ ನಡೆದ ರಾಷ್ಟ್ರೀಯ ಮಟ್ಟದ "ಅಖಿಲ ಭಾರತ ಯೋಗ ಚಾಂಪಿಯನ್ಶಿಪ್ 2017" ಇದರಲ್ಲಿ ಪ್ರಥಮ ಸ್ಥಾನವನ್ನು ಪಡೆದು ಕೇರಳವು ತೃತೀಯ ಚಾಂಪಿಯನ್ ಶಿಪ್ ಪಡೆದಿದೆ. ರಾಜ್ಯಮಟ್ಟದಲ್ಲಿ ನಡೆದ "ಯೋಗ ಅಸೋಸಿಯೇಷನ್" ಹಾಗೂ "ಯೋಗ ಫೆಡರೇಶನ್" ಗಳಲ್ಲಿ ಭಾಗವಹಿಸಿ ಹಲವಾರು ಬಹುಮಾನಗಳನ್ನು ಗಳಿಸಿದ್ದಾರೆ.

 2018 ರಲ್ಲಿ ತ್ರಿಶ್ಯೂರ್ ನಲ್ಲಿ ನಡೆದ ರಾಜ್ಯಮಟ್ಟದ ಯೋಗಸ್ಪರ್ದೆಯಲ್ಲಿ ಬಹುಮಾನ ಗಳಿಸಿ, ಎಪ್ರಿಲ್ 6,7,8 , 2018 ರಂದು ಹರಿಯಾಣದ ಪರೀದಾ ಬಾದ್ ನಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಯೋಗ ಸ್ಪರ್ಧೆಯಲ್ಲಿ ಟಾಫ್ 11ನೇ ಸ್ಥಾನವನ್ನು ಪಡೆದಿದ್ದಾರೆ. 2019ರ ಸಾಲಿನಲ್ಲಿ ಯೋಗ ಅಸೋಸಿಯೇಷನ್ ಆಯೋಜಿಸಿದ್ದ ಜಿಲ್ಲಾ ಮಟ್ಟದ ಯೋಗ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ರಾಜ್ಯ ಮಟ್ಟದಲ್ಲಿ ದ್ವಿತೀಯ ಸ್ಥಾನ ಹಾಗೂ ರಾಷ್ಟ್ರೀಯ ಮಟ್ಟದ ಯೋಗ ಸ್ಪರ್ಧೆಯು 2019 ಡಿಸೆಂಬರ್ ನಲ್ಲಿ ನಡೆದಿದ್ದು ಅದರಲ್ಲಿ ಟಾಫ್ 15ನೇ ಸ್ಥಾನ ಪಡೆದಿದ್ದಾರೆ.


ಯೋಗ "ಅಸೋಸಿಯೇಷನ್ ಆಫ್ ಪಾಂಡಿಚೇರಿ" ಯಲ್ಲಿ ಆಯೋಜಿಸಿದ್ದ ರಾಷ್ಟ್ರ ಮಟ್ಟದ ಮುಕ್ತ ಯೋಗ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ. 2019 ಅಕ್ಟೋಬರ್ 26 ರಿಂದ ನವೆಂಬರ್ 12 ರವೆರೆಗೆ ರಾಜಸ್ಥಾನದ ಜೈಪುರದಲ್ಲಿ ಯೋಗ ಫೆಡರೇಶನ್ ಆಯೋಜಿಸಿದ್ದ ರಾಷ್ಟ್ರ ಮಟ್ಟದ ಯೋಗ ಸ್ಪರ್ಧೆಯಲ್ಲಿ ಟಾಫ್ 11ನೇ ಸ್ಥಾನವನ್ನು ಪಡೆದಿದ್ದಾರೆ. ಹೀಗೆ ಅನೇಕ ಯೋಗ ಸ್ಪರ್ಧೆಯಲ್ಲಿ ಭಾಗವಹಿಸಿ ಹಲವಾರು ಬಹುಮಾನಗಳನ್ನು ತನ್ನದಾಗಿಸಿಕೊಂಡಿದ್ದಾರೆ.

 The Bharath Scouts and Guides Karnataka ಇದರ ಸ್ಟೇಟ್ ಯೂತ್ ಕಮಿಟಿಯಲ್ಲಿ ರೆಪ್ರೆಸೆಂಟೇಟಿವ್ ಮೆಂಬರ್ ಆಗಿದ್ದಾರೆ. ಅಲ್ಲದೆ  "ರಾಜ್ಯಪುರಸ್ಕಾರ" ರೇಂಜರ್ ಅವಾರ್ಡ್ ಪಡೆದ ಹೆಗ್ಗಳಿಕೆಗೆ ಇವರದ್ದಾಗಿದೆ. ದಿ ಭಾರತ್ ಸ್ಕೌಟ್ಸ್ ಆಂಡ್ ಗೈಡ್ಸ್ ಕರ್ನಾಟಕ ಇದರ ವತಿಯಿಂದ ಉತ್ತರಖಂಡ್, ಹರಿಯಾಣ, ದೆಹಲಿಯಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಶಿಬಿರಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ.


2016 - 17 ಸಾಲಿನ ಮೈಸೂರಿನಲ್ಲಿ ನಡೆದ ರಾಷ್ಟ್ರೀಯ ಜಂಬೂರಿಯಲ್ಲಿ "ನ್ಯಾಷನಲ್ ಅವಾರ್ಡ್" ಎಂದು ಕರೆಯಲ್ಪಡುವ " ಸರ್ವೀಸ್ ಎಕ್ಸಲೆನ್ಸಿ" ಅವಾರ್ಡ್ ಪಡೆದುಕೊಂಡಿದ್ದಾರೆ‌. ಇವರು ರಂಗಭೂಮಿ ಕಲಾವಿದೆಯೂ ಆಗಿದ್ದು 2013-14ರಲ್ಲಿ "ಶಾರದ ಆರ್ಟ್ಸ್ ಕಲಾವಿದರು ಮಂಜೇಶ್ವರ" ತಂಡದ ಮುಖಾಂತರ ರಂಗಭೂಮಿಗೆ ಪಾದಾರ್ಪಣೆ ಮಾಡಿ ಹಲವಾರು  ನಾಟಕಗಳಲ್ಲಿ ಅಭಿನಯಿಸಿ ಜನರ ಮೆಚ್ಚುಗೆಗೆ ಪಾತ್ರರಾಗಿರುವ ಇವರು KCN plus ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ "ತೆಲಿಕೆ ಬಂಜಿನಿಲಿಕೆ" ಕಾರ್ಯಕ್ರಮದಲ್ಲೂ ಭಾಗವಹಿಸಿದ್ದಾರೆ. 

ಟೈಲರಿಂಗ್, ಡ್ರಾಯಿಂಗ್, ವಾಲ್ ಪೆಯಿಟಿಂಗ್ ಹವ್ಯಾಸವನ್ನು ಹೊಂದಿದ್ದಾರೆ.ಕೇಂದ್ರೀಯ ವಿದ್ಯಾಲಯ ಎಜಿ಼ಮಾಲ ಪಯ್ಯನ್ನೂರ್, ಶ್ರೀರಾಮ ಎ.ಯು.ಪಿ ಶಾಲೆ ಕುಬಣೂರು ಇಲ್ಲಿ ಅತಿಥಿ ಶಿಕ್ಷಕಿಯಾಗಿ ಯೋಗ ಕಲಿಸಿದ್ದಾರೆ. ಪ್ರಸ್ತುತ ಕಳೆದ 4 ವರ್ಷಗಳಿಂದ ವಿದ್ಯಶ್ರೀ ಶಿಕ್ಷಣ ಕೇಂದ್ರ ಮುಳ್ಕೇರಿಯಲ್ಲಿ ಯೋಗ ಶಿಕ್ಷಕಿಯಾಗಿ ದುಡಿಯುತ್ತಿರುವ ಇವರ ಸಾಧನೆಯ ಶಿಖರ ಇನ್ನಷ್ಟು ಎತ್ತರಕ್ಕೆ ಏರಲಿ ಎಂಬುದು ನಮ್ಮೆಲ್ಲರ ಆಶಯ....

ನಮ್ಮ ಬಿಲ್ಲವೆರ್

0 comments: