Saturday, September 19, 2020

ಅಪ್ಪಣ್ಣನ ಕಟ್ಟೆ ಹಂಪನಕಟ್ಟೆಯಾದ ಕಥೆ


 

ಅಪ್ಪಣ್ಣನ ಕಟ್ಟೆಗೂ ನಿನ್ನೆ ಪತ್ತೆಯಾದ ಬಾವಿಗೂ ಇತ್ತು ಭಾವನಾತ್ಮಕ ನಂಟು.

ಮಂಗಳೂರು ನಗರದ ಹೃದಯ ಭಾಗ ಹಂಪನಕಟ್ಟೆಯ ಸಿಗ್ನಲ್‌ ಬಳಿಯಿರುವ ರಿಕ್ಷಾ ಪಾರ್ಕಿಂಗ್‌ ಹತ್ತಿರದಲ್ಲಿ ಹಳೆ ಕಾಲದ ಈ ಬಾವಿ ಪತ್ತೆಯಾಗಿದೆ. ಇಲ್ಲಿ ಕೆಲವು ದಿನಗಳಿಂದ ಸ್ಮಾರ್ಟ್‌ಸಿಟಿ ಯೋಜನೆಯಡಿ ಜಂಕ್ಷನ್‌ ಅಭಿವೃದ್ಧಿಪಡಿಸುವ ಹಿನ್ನೆಲೆಯಲ್ಲಿ ರಸ್ತೆ ಅಗೆಯುವ ಕಾಮಗಾರಿ ನಡೆಯುತ್ತಿತ್ತು. ಈ ವೇಳೆ ಕಾಂಕ್ರೀಟ್‌ ಸ್ಲಾಬ್‌ ಕಾಣಿಸಿತ್ತು. ಆಗ ಸ್ಲಾಬ್‌ ಮೇಲೆತ್ತಿ ನೋಡಿದಾಗ ಆಳವಾದ ಬಾವಿ ಇರುವುದು ಗೊತ್ತಾಗಿದೆ. ಈ ವಿಚಾರವನ್ನು ಅಲ್ಲಿ ನೆಲೆಸಿರುವ ಜನರೊಂದಿಗೆ ಚರ್ಚಿಸಿದಾಗ ಶತಮಾನದಷ್ಟು ಹಳೆಯ ಬಾವಿ ಇದು ಎನ್ನುವುದು ಖಚಿತಗೊಂಡಿದೆ.


ಅಂದಹಾಗೆ, ಈ ಬಾವಿಗೂ ಹಂಪನಕಟ್ಟೆ ಪ್ರದೇಶಕ್ಕೂ ಭಾವನಾತ್ಮಕ ಸಂಬಂಧವಿದೆ. ಶತಮಾನದ ಹಿಂದೆ ಮಂಗಳೂರಿಗೆ ದೂರದಿಂದ ಬಂದವರಿಗೆ ಬಾಯಾರಿಕೆಗಾಗಿ ಸ್ಥಳೀಯರಾದ ಅಪ್ಪಣ್ಣ ಅವರು ಈಗಿನ ಹಂಪನಕಟ್ಟೆಯ ಅಶ್ವತ್ಥ ಮರದ ಕಟ್ಟೆಯ ಮೇಲೆ ಕುಳಿತು ನೀರು ಕೊಡುತ್ತಿದ್ದರು ಎನ್ನುವ ಪ್ರತೀತಿ ಇದೆ. ಆ ಕಾಲದಲ್ಲಿ ಅಪ್ಪಣ್ಣ ಅವರು ಇದೇ ಬಾವಿಯಿಂದ ನೀರು ತೆಗೆದುಕೊಂಡು ಬಂದು ನೀಡುತ್ತಿದ್ದರು ಎನ್ನಲಾಗುತ್ತಿದೆ. ಈ ರೀತಿ ಹಿಂದೆ ಅಪ್ಪಣ್ಣ ಕಟ್ಟೆ ಯಾಗಿದ್ದ ಆ ಪ್ರದೇಶ ಅನಂತರದಲ್ಲಿ ಹಂಪನಕಟ್ಟೆ ಯಾಗಿ ಹೆಸರು ಪಡೆದುಕೊಂಡಿದೆ. ಹೀಗಿರುವಾಗ ಆ ಕಾಲದಲ್ಲಿ ಈ ಬಾವಿ ಕೂಡ ಅಪ್ಪಣ್ಣನಬಾವಿ ಎಂದೇ ಪ್ರಸಿದ್ಧಿ ಪಡೆದಿತ್ತು ಎನ್ನುತ್ತಾರೆ ಸ್ಥಳೀಯ ನಿವಾಸಿಗಳು.


ಸುಮಾರು ನೂರು ವರ್ಷಗಳ ಇತಿಹಾಸ ಹೊಂದಿದ ಈ ಬಾವಿಯ ನೀರನ್ನು ಈ ಹಿಂದೆ ಸುತ್ತಮುತ್ತಲಿನ ಜನರು ಉಪಯೋಗಿಸುತ್ತಿದ್ದರು. 1962ರ ಸಮಯದಲ್ಲಿ ನಗರದಲ್ಲಿ ಸ್ಥಳೀಯಾಡಳಿತದಿಂದ ನೀರು ಸರಬರಾಜು ಆರಂಭವಾಗಿತ್ತು. ಆ ಬಳಿಕ ರಸ್ತೆ ಅಭಿವೃದ್ಧಿ ಕಾಮಗಾರಿ ವೇಳೆ ಈ ಬಾವಿಯನ್ನು ಮುಚ್ಚಲು ನಿರ್ಧರಿಸಲಾಗಿತ್ತು. ಆಗ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದರು. ಆ ಕಾರಣದಿಂದ ಬಾವಿ ಮುಚ್ಚದೆ, ಮುನ್ನೆಚ್ಚರಿಕೆ ಕ್ರಮವಾಗಿ ಬಾವಿಗೆ ಕಾಂಕ್ರೀಟ್‌ ಸ್ಲಾಬ್‌ ಹಾಕಿ ಇಡಲಾಗಿದೆ. ಕಾಲ ಕ್ರಮೇಣ ಆ ಸ್ಲಾಬ್‌ ಮೇಲೆ ಡಾಮರು ಹಾಕಲಾಗಿದ್ದು, ಬಾವಿ ಇದ್ದ ಕುರುಹು ಕೂಡ ಕಣ್ಮರೆಯಾಗಿ ಹೋಗಿತ್ತು. ಇದೀಗ ರಸ್ತೆ ಅಗೆಯುವ ವೇಳೆ ಆ ಬಾವಿ ಗೋಚರಿಸಿರುವುದು ಹಂಪನ ಕಟ್ಟೆಯ ಇತಿಹಾಸದ ಪುಟಗಳನ್ನು ನೆನಪಿಸುವಂತೆ ಮಾಡಿರುವುದು ವಿಶೇಷ’ ಎನ್ನುತ್ತಾರೆ ಸ್ಥಳೀಯರು.


ಈ ಹಿಂದೆ ಬಾವಿ ಇತ್ತು

ಬಾವಿ ಪತ್ತೆ ಬಗ್ಗೆ ಹಂಪನಕಟ್ಟೆ ಬಳಿಯ ಕೆನರಾ ಜುವೆಲರ್ಸ್‌ ಮಾಲಕ ಧನಂಜಯ ಪಾಲ್ಕೆ ರವರ ಮಳಿಗೆಯ ಎದುರು ಬಾವಿ ಇತ್ತು. ಈ ಬಾವಿ ನೀರನ್ನು ನಾವೂ ಉಪಯೋಗಿಸುತ್ತಿದ್ದೆವು. ಈ ಬಾವಿ ಸುಮಾರು 100 ಅಡಿ ಆಳ ಹೊಂದಿದೆ. ಈ ಹಿಂದೆ ಬಾವಿಯ ಸುತ್ತಲೂ ಕಟ್ಟೆ ಇತ್ತು. ಆ ಬಾವಿಗೆ ಮೂರು ರಾಟೆ ಇದ್ದು, ಹಗ್ಗದ ಮೂಲಕ ಸ್ಥಳೀಯರು ನೀರು ಎಳೆಯುತ್ತಿದ್ದರು. ಅಭಿವೃದ್ಧಿ ಕಾರಣ ಈ ಬಾವಿ ಮುಚ್ಚುವ ಸಂದರ್ಭ ಬಂದಾಗ ನನ್ನ ತಂದೆ ದಿ| ಪಾಲ್ಕೆ ಬಾಬುರಾಯ ಆಚಾರ್ಯ ಅವರು ಬಾವಿಗೆ ಸ್ಲಾ ಬ್‌ ಹಾಕಿ ಮುಚ್ಚಳ ಅಳವಡಿಸಿದ್ದರು. ಬಳಿಕ ಸ್ಲಾಬ್‌ ಮೇಲೆ ಡಾಮರು ಹಾಕಲಾಗಿತ್ತು. ಇದೀಗ ರಸ್ತೆ ಕಾಮಗಾರಿ ವೇಳೆ ಬಾವಿ ಕಂಡಿದೆ. ಈ ಬಾವಿಯಲ್ಲಿನ ನೀರು ಈಗಲೂ ಉತ್ತಮವಾಗಿದ್ದು, ಮುಂದಿನ ಪೀಳಿಗೆ ಈ ಬಾವಿಯನ್ನು ಸಂರಕ್ಷಿಸಬೇಕು’ ಎನ್ನುತ್ತಾರೆ.


1962 ಸಂದರ್ಭದಲ್ಲಿ ಅಂದಿನ ಪೀಳಿಗೆ ರಸ್ತೆ ನಿರ್ಮಾಣ ಸಂದರ್ಭದಲ್ಲಿ ಬಾವಿ ಮುಚ್ಚುವುದಕ್ಕೆ ವಿರೋಧ ವ್ಯಕ್ತಪಡಿಸಿದ ಕಾರಣ ಪುಣ್ಯಾತ್ಮರೊಬ್ಬರು ಬಾವಿಗೆ ಸ್ಲಾಬ್ ಹಾಕಿ ಉಳಿಸಿದರು. 

1975 ರ ಪೀಳಿಗೆ ಅದರ ಮೇಲೆ ಡಾಂಬರ್ ಹಾಕಿ ಬಾವಿ ಇದ್ದ ಕುರುಹು ಸಂಪೂರ್ಣ ಮಾಯ ಮಾಡಲಾಯಿತು ಈಗ 2020 ಪೀಳಿಗೆಯ ನರೇಂದ್ರ ಮೋದಿ ಯವರ ಮಹತ್ವಾಕಾಂಕ್ಷೆ ಯೋಜನೆಯಲ್ಲೊಂದಾದ ಸ್ಮಾರ್ಟ್ ಸಿಟಿ ಯೋಜನೆ ಯ ಕಾಮಗಾರಿ ಸಂದರ್ಭದಲ್ಲಿ ಆ ಬಾವಿ ಮತ್ತೆ ಪತ್ತೆಯಾಗಿದೆ 2020 ರ ಈ ಬಾವಿಯನ್ನು ಏನು ಮಾಡಲಿದೆ ಎಂದು ಕಾದು ನೋಡಬೇಕು.


Add

ಭವಿಷ್ಯದ ಕನಸು ನನಸಾಗಲು ಇಂದೇ ಸಂಪರ್ಕಿಸಿ ಶ್ರೀ ದೈವಜ್ಞ ಕೃಷ್ಣಪ್ಪ : 9880877747

 ನಿಮ್ಮ ಸಮಸ್ಯೆ ಯಾವುದೇ ಇದ್ದರೂ ಅಖಂಡ ಬಲಿಷ್ಠ ಪೂಜೆಯಿಂದ ಮೋಡಿ ಪದ್ದತಿಯಿಂದ ಗ್ಯಾರಂಟಿ ಪರಿಹಾರಕ್ಕೆ ಸಂಪರ್ಕಿಸಿ. 

ಹಣಕಾಸು ವ್ಯಾಪಾರ ಅಭಿವೃದ್ಧಿ, ಗಂಡ ಹೆಂಡತಿ ಸಮಸ್ಯೆ, ದೃಷ್ಟಿದೋಷ, ಶತ್ರುಗಳ ತೊಂದರೆ, ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ಶ್ರೀ ಭದ್ರಕಾಳಿ ದೇವಿಯ ಆರಾಧನೆಯಿಂದ, ಶಕ್ತಿಯ ವಿಶೇಷ ಪೂಜೆಯಿಂದ 2 ದಿನದಲ್ಲಿ ಶ್ರೀ ಕ್ಷೇತ್ರದಂದ ಪರಿಹಾರ ಮಾಡಿಕೊದಲಾಗುತ್ತದೆ. 

ಫೋನಿನ ಮೂಲಕವು ಪರಿಹಾರ ತಿಳಿಸುತ್ತಾರೆ.ಶ್ರೀ ದೈವಜ್ಞ ಕೃಷ್ಣಪ್ಪ 9880877747

0 comments: