ಸಮಾಜ ಸುಧಾರಕ ಬ್ರಹ್ಮಶ್ರೀ ನಾರಾಯಣ ಗುರುಗಳು v/s ಲೇಡಿಹಿಲ್
ಭಾರತ ಬ್ರಿಟೀಷ್ ಆಡಳಿತದಿಂದ ಸ್ವತಂತ್ರಗೊಂಡರೂ ಆಂಗ್ಲತನದ ಗುಲಾಮಿ ಮಾನಸೀಕತೆ ಇಂದಿಗೂ ಹಾಗೆಯೇ ಇದೆ. ಕೇವಲ ವ್ಯಾಪಾರಕ್ಕಾಗಿ ದೂರದ ಇಂಡ್ಲೆಂಡಿನಿಂದ ಭಾರತದೆಡೆಗೆ ಬಂದ ಬ್ರಿಟೀಷರು ಹಂತ ಹಂತವಾಗಿ ಭಾರತವನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡು ದೆಹಲಿಯ ಲಾಲ್ ಕಿಲ್ಲೆಯ ಮೇಲೆ ತಮ್ಮ ಯೂನಿಯನ್ ಜ್ಯಾಕ್ ಧ್ವಜ ಹಾರಿಸುವವರೆಗೆ ಭಾರತೀಯರಲ್ಲಿ ವಿಭಜನೆ ಸೃಷ್ಟಿಸಿ ತಮ್ಮತನವನ್ನು ಮುರಿದು ಬಿಟ್ಟರು. ಆಗಲೂ ಕೂಡ ತಮ್ಮ ಸ್ವಾಭಿಮಾನವನ್ನು ಅಡವಿಟ್ಟು ಬ್ರಿಟೀಷ್ ಸಾಮ್ರಾಜ್ಯಶಾಹಿ ಆಳ್ವಿಕೆಗೆ ಮುಜರೆ ಸಲ್ಲಿಸಿದ ಅನೇಕರಿದ್ದರು. ಭಾರತ ಪೂರ್ಣವಾಗಿ ಬ್ರಿಟೀಷರ ಆಡಳಿತಕ್ಕೆ ಒಳಪಟ್ಟು ಭಾರತೀಯರು ಅನುಭವಿಸಿದ ಯಮ ಯಾತನೆಯ ಬಗ್ಗೆ ಇತಿಹಾಸ ಸಾರುತ್ತದೆ.
ಮೇಲಿನ ತಲೆಬರಹಕ್ಕೂ ಕೆಳಗಿರುವ ವಿಚಾರಕ್ಕೂ ಸಂಬಂಧವೇ ಇಲ್ಲ ಎನ್ನುತ್ತೀರಾ ??
ಹಾಗಾದರೆ ಮುಂದೆ ಓದಿ. ಮಂಗಳೂರಿನ ಪ್ರಮುಖ ವೃತ್ತವಾಗಿರುವ ಲೇಡಿಹಿಲ್ ಸರ್ಕಲ್ ಗೆ ನಮ್ಮ ನಂಬುಗೆಯ ಪ್ರತೀಕ, ನಮ್ಮೊಳಗಿನ ತಾರತಮ್ಯಗಳನ್ನು ತೊಡೆದು ಧರ್ಮದ ಉಳಿವಿಗಾಗಿ ಅವತರಿಸಿದ ಬ್ರಹ್ಮ ಶ್ರೀ ನಾರಾಯಣ ಗುರುಗಳ ಹೆಸರಿಡುವ ಕುರಿತು ಈಗಾಗಲೇ ನಾವು ಸರ್ವರ ಪರವಾಗಿ ಕೂಗೆಬ್ಬಿಸಿದ್ದೇವೆ. ಈ ಆಂದೋಲನಕ್ಕೆ ಬಹುಮುಖ್ಯ ಕಾರಣವೆಂದರೆ ನಮ್ಮತನವನ್ನು ಉಳಿಸಬೇಕೆನ್ನುವುದು. ಭಾರತದ ಸ್ವತಂತ್ರ ಸಂಗ್ರಾಮದಲ್ಲಿ ತಮ್ಮ ನೆತ್ತರು ಹರಿಸಿದ ಲಕ್ಷಾಂತರ ಜನ ವೀರರಿದ್ದಾರೆ. ಸಂಗ್ರಾಮದ ಜಾಗೃತಿಗಾಗಿ ಸಾವಿರಾರು ಜನ ಸಂತರು ದುಡಿದಿದ್ದಾರೆ. ಅನೇರ ರಾಷ್ಟ್ರಭಕ್ತರು ತಮ್ಮೆಲ್ಲ ಸುಖ ದುಃಖಗಳನ್ನು ಬದುಗಿಟ್ಟು ರಾಷ್ಟ್ರ ಕಲ್ಯಾಣ ಕಾರ್ಯದಲ್ಲಿ ಧುಮುಕುವ ಮೂಲಕ ಈ ದೇಶದ ಅಂತಸತ್ವವನ್ನು ಉಳಿಸಲು ಶ್ರಮಿಸಿದ್ದಾರೆ. ಅದೆಲ್ಲದರ ಫಲವಾಗಿ 200 ವರ್ಷಗಳ ದೌರ್ಜನ್ಯ ಕೊನೆಗೊಂಡು 1947ರಲ್ಲಿ ಭಾರತದಲ್ಲಿ ಸ್ವತಂತ್ರ ಸೂರ್ಯೋದಯ ಕಂಡಿತು. ಆದರೆ ಅಂದು ಈ ನೆಲದ ವೀರರು ಯಾವ ಸಾಮ್ರಾಜ್ಯಶಾಹಿ ಬ್ರಿಟೀಷ್ ಆಡಳಿತದ ವಿರುದ್ಧ ಹೋರಾಡಿದರೋ ಅಂತಹ ಬ್ರಿಟೀಷರ ಹೆಗ್ಗುರುತುಗಳು ಇಂದಿಗೂ ನಮ್ಮ ನೆಲದ ಮೇಲಿದೆ. ಉದಾಹರಣೆಯಾಗಿ ಮಂಗಳೂರಿನ ಹೃದಯ ಭಾಗದಲ್ಲಿರುವ ಲೇಡಿಹಿಲ್ ಸರ್ಕಲ್..
ಯಾರ ನೆನಪಿಗಾಗಿ ಈ ಹೆಸರಿಟ್ಟರೋ, ಯಾವ ಕಾರಣಕ್ಕಾಗಿ ಈ ಹೆಸರಿಟ್ಟರು, ಅಥವ ಇಷ್ಟು ವರ್ಷಗಳ ಕಾಲ ಆಡಳಿತ ವ್ಯವಸ್ಥೆ ಯಾಕೆ ಇವೆಲ್ಲವನ್ನೂ ಬದಲಾಯಿಸುವ ಗೋಜಿಗೆ ಹೊಗಲಿಲ್ಲ ಎಂಬೆಲ್ಲಾ ಪ್ರಶ್ನೆಗಳನ್ನು ತಮ್ಮಲ್ಲೇ ಕೇಳಿಕೊಳ್ಳಿ. ಇನ್ನು ಲೇಡಿಗೋಷನ್, ವೆನ್ಲಾಕ್ ಮುಂತಾದ ಹೆಸರುಗಳ ಬದಲಿಗೆ ರಾಣಿ ಅಬ್ಬಕ್ಕ ಆಸ್ಪತ್ರೆ ಎಂದೋ, ಕಾರ್ನಾಡ್ ಸದಾಶಿವ ರಾಯ ಆಸ್ಪತ್ರೆ ಎಂದೋ, ಡಾ ಅಬ್ದುಲ್ ಕಲಾಂ ಆಸ್ಪತ್ರೆ ಎಂದೋ, ಅಶ್ಪಾಕ್ ಉಲ್ಲಾ ಖಾನ್ ಸರ್ಕಲ್, ಜಾರ್ಜ್ ಫರ್ನಾಂಡೀಸ್ ವೃತ್ತ, ಮಹಾವೀರ ರಸ್ತೆ ಮುಂತಾದ ಹೆಸರುಗಳನ್ನಿಡಬಹುದಿತ್ತು. ನಮ್ಮ ಮುಂದಿನ ಪೀಳಿಗೆಗೆ ಈ ಮಹನೀಯರ ಸಾಧನೆಗಳನ್ನು ನೆನಪಿಸಿಕೊಳ್ಳುವ ನಿಟ್ಟಿನಲ್ಲಿ ಇವೆಲ್ಲವನ್ನೂ ಇಷ್ಟು ವರ್ಷಗಳ ಕಾಲ ಆಳಿದವರಿಗೆ ಮಾಡಬಹುದಿತ್ತು. ಆದರೆ ಜಡತ್ವ ಹಾಗೂ ಮತ್ಯಾವುದೋ ಕಾರಣಗಳಿಂದ ಇವೆಲ್ಲವೂ ನಗಣ್ಯವಾಯ್ತು. ಆದರೆ ಇಂದು ಸಮಯ ಕೂಡಿ ಬಂದಿದೆ. ಬಿರುವೆರ್ ಕುಡ್ಲ ಸಂಸ್ಥೆಯ ಮೂಲಕ ಲೇಡಿಹಿಲ್ ವೃತ್ತಕ್ಕೆ ಸಮಾಜ ಸುಧಾರಕರಾದ ಬ್ರಹ್ಮ ಶ್ರೀ ನಾರಾಯಣ ಗುರುಗಳ ಹೆಸರಿಡುವ ಆಂದೋಲನ ಪ್ರಾರಂಭವಾಗಿದೆ. ಮಂಗಳೂರು ಮಹಾನಗರ ಪಾಲಿಕೆಯ ಮಹಾಪೌರರಲ್ಲಿ ನಮ್ಮ ವಿನಂತಿ ಏನೆಂದರೆ ನಮ್ಮತನವನ್ನು ಉಳಿಸಿಕೊಳ್ಳಲು ನಿಮ್ಮ ಇಚ್ಛಾಶಕ್ತಿಯ ಅವಶ್ಯಕತೆಯಿದೆ. ಇಷ್ಟು ವರ್ಷಗಳ ಜಡ ವ್ಯವಸ್ಥೆಯನ್ನು ತೊಡೆದು ಸ್ವಂತಿಕೆಯನ್ನು ಉಳಿಸುವ ಕಾರ್ಯ ನಿಮ್ಮಿಂದಾಗಲಿ. ಹಾಗೆಯೇ ಮಂಗಳೂರಿನ ಪ್ರಜ್ಞಾವಂತ ನಾಗರಿಕರಲ್ಲಿ ವಿನಂತಿ ಏನೆಂದರೆ ನಮ್ಮ ಈ ಆಂದೋಲನದಲ್ಲಿ ಪಾಲ್ಗೊಳ್ಳಿ. ನಮ್ಮತನವನ್ನು ಉಳಿಸಿಕೊಳ್ಳಲು ಒಂದಾಗಿ ಸಾಗೋಣ..
ಜೈ ಗುರುದೇವಾ..
ನಮ್ಮತನ ಉಳಿಸಿಕೊಳ್ಳೋಣ
Add
ಭವಿಷ್ಯದ ಕನಸು ನನಸಾಗಲು ಇಂದೇ ಸಂಪರ್ಕಿಸಿ ಶ್ರೀ ದೈವಜ್ಞ ಕೃಷ್ಣಪ್ಪ : 9880877747
ನಿಮ್ಮ ಸಮಸ್ಯೆ ಯಾವುದೇ ಇದ್ದರೂ ಅಖಂಡ ಬಲಿಷ್ಠ ಪೂಜೆಯಿಂದ ಮೋಡಿ ಪದ್ದತಿಯಿಂದ ಗ್ಯಾರಂಟಿ ಪರಿಹಾರಕ್ಕೆ ಸಂಪರ್ಕಿಸಿ.
ಹಣಕಾಸು ವ್ಯಾಪಾರ ಅಭಿವೃದ್ಧಿ, ಗಂಡ ಹೆಂಡತಿ ಸಮಸ್ಯೆ, ದೃಷ್ಟಿದೋಷ, ಶತ್ರುಗಳ ತೊಂದರೆ, ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ಶ್ರೀ ಭದ್ರಕಾಳಿ ದೇವಿಯ ಆರಾಧನೆಯಿಂದ, ಶಕ್ತಿಯ ವಿಶೇಷ ಪೂಜೆಯಿಂದ 2 ದಿನದಲ್ಲಿ ಶ್ರೀ ಕ್ಷೇತ್ರದಂದ ಪರಿಹಾರ ಮಾಡಿಕೊದಲಾಗುತ್ತದೆ.
ಫೋನಿನ ಮೂಲಕವು ಪರಿಹಾರ ತಿಳಿಸುತ್ತಾರೆ.ಶ್ರೀ ದೈವಜ್ಞ ಕೃಷ್ಣಪ್ಪ 9880877747
0 comments: