Tuesday, May 25, 2021

ನಟನಾ ಕ್ಷೇತ್ರದಲ್ಲಿ ಸಾಧನೆಗೈದ ಯುವ ಪ್ರತಿಭೆ ನಯನ ಸಾಲಿಯಾನ್ಸಾಧನೆ ಎಂದರೆ ಅದು ಆಡುವ ಮಾತಲ್ಲ,ಬದಲಿಗೆ ಮಾಡುವ ಕಾರ್ಯಗಳು ಎಂಬ ಹರಿವು ಮೂಡಿದಾಗ ಸಾಧನೆಯ ಹಾದಿ ಅರ್ಥಪೂರ್ಣವಾಗುವುದು ಎಂಬ ಮಾತಿನಂತೆ ನಟನಾ ಕ್ಷೇತ್ರದಲ್ಲಿ ಸಾಧನೆಗೈಯುತ್ತಿರುವ ಯುವ ಪ್ರತಿಭೆ ನಯನ ಸಾಲಿಯಾನ್ ಶಾಲಾ ದಿನಗಳಲ್ಲಿ ನೃತ್ಯದೊಂದಿಗೆ ವೇದಿಕೆ ಹತ್ತಿದ ಇವರು .ನಂತರ ನಟನಾ ಕ್ಷೇತ್ರ ಇವರನ್ನೂ ಕೈ ಬೀಸಿ ಕರೆಯಿತು.ಇವರ ಪ್ರತಿಭೆಯನ್ನು ಹರಸಿ ಆವಕಾಶಗಳು ಇವರನ್ನು ಹುಡುಕಿಕೊಂಡು ಬಂದವು .#ಕಾಮಿಡಿ ಪ್ರೀಮಿಯರ್ ಲೀಗ್ ಖ್ಯಾತಿಯ ಪ್ರಶಸ್ತಿ ವಿಜೇತ ತಂಡ ವೈಷ್ಣವಿ ಕಲಾವಿದೆರ್ ತಂಡದಲ್ಲಿ ನಟಿಯಾಗಿ ಗುರುತಿಸಿಕೊಂಡು.ನಂತರ #ಹಲವಾರು ಕಿರುಚಿತ್ರ, ಅಲ್ಬಮ್ ಸಾಂಗ್,ನಾಟಕಗಳಲ್ಲಿ ನಾಯಕಿಯಾಗಿ ಬಣ್ಣ ಹಚ್ಚಿ ಸೈ ಎನಿಸಿಕೊಂಡಿದ್ದಾರೆ.


 #"ಬಿನ್ನೆರ್ ಬರ್ಪೆರ್" ಎಂಬ ರಿಯಾಲಿಟಿ ಶೋ ಕಾರ್ಯಕ್ರಮದಲ್ಲಿ ಇವರ ಪ್ರಾತವು ಜನ ಮೆಚ್ಚುಗೆಗೆ ಪಾತ್ರವಾಗಿದೆ.. # ಇತ್ತೀಚೆಗೆ ಬಿಡುಗಡೆಯಾದ "ಗಮ್ಜಾಲ್" ತುಳು ಸಿನಿಮಾದಲ್ಲಿ ಅಭಿನಯಿಸಿ ಜನಪ್ರಿಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ.ಇನ್ನೂ ಹಲವಾರು ಸಿನಿಮಾಗಳು ಬಿಡುಗಡೆಗೆ ಸಿಧ್ಧವಾಗಿವೆ. ಇವರ ಸಾಧನೆಯ ಹಾದಿ ಹೀಗೆ ಮುಂದುವರಿಯಲ್ಲಿ. ಸಿನಿರಂಗದಲ್ಲಿ ಸಾಧನೆ ಮಾಡುತ್ತಿರುವ ಇವರಿಗೆ ಇನಷ್ಟು ಆವಕಾಶಗಳು ಹುಡುಕುತ್ತಾ ಬರಲಿ ಎಂಬುದೇ ನನ್ನ ಬರವಣಿಗೆಯ ಆಶಯವಾಗಿದೆ.
ಶ್ರವಣ್ ಬಿ.ಸಿ.ರೋಡ್

0 comments: