Friday, May 28, 2021

ಕಾಸರಗೋಡು ಜಿಲ್ಲೆಯ ಪುಟ್ಟ ಗ್ರಾಮವಾದ "ಬೆಜ್ಜ"ದ ಯುವ ಪ್ರತಿಭೆಯೇ ಶ್ರಮಿತಾ ಬೆಜ್ಜ

ಬೆಜ್ಜ ಗ್ರಾಮದ ಶಶಿಧರ್ ಪೂಜಾರಿ ಹಾಗೂ ವಿಜಯ ದಂಪತಿಗಳ ಮಗಳೆ ಶ್ರಮಿತಾ ಬೆಜ್ಜ. ಬಾಲ್ಯಾದಿಂದಲೇ ಸಾಂಸ್ಕೃತಿಕ ಕ್ಷೇತ್ರದಲ್ಲಿ ನಿರಂತರವಾಗಿ ಭಾಗವಹಿಸಿ ತನ್ನದೇ ಆದ ಛಾಪನ್ನು ಮೂಡಿಸಿ ಹಾಡುಗಾರಿಕೆಯಲ್ಲಿ ಅನೇಕ ಬಹುಮಾನಗಳನ್ನು ತನ್ನ ಮುಡಿಗೇರಿಸಿಕೊಂಡಿರುತ್ತಾರೆ. ಬಿಎಸ್ಸಿ ಪದವಿದರರಾಗಿರುವ ಇವರು ಕಲಾ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂಬ ಆಸೆ ಹೊತ್ತುಕೊಂಡ ಇವರು ಪ್ರಪ್ರಥಮವಾಗಿ ಹಾಡಿದ್ದು" ಮೆಹಂದಿ ರಂಗ್ "ಎನ್ನುವ ಆಲ್ಬಮ್ ಹಾಡಿಗೆ. ನಂತರ ಆತ್ಮ ಸ್ವರೂಪಿನಿ,ನಮೋ ವಕ್ರತುಂಡ,ಆಸೆದ ಕಣ್ಣು,ಕಾಣಿಲ ಗಿರಿ ಹಾಡಿಗೆ ಹಾಡನ್ನು ಹಾಡಿ ಸೈ ಎನಿಸಿಕೊಂಡಿರುವ ಇವರು ಪ್ರಥಮವಾಗಿ ಇಂಚರ ಮೆಲೋಡಿಸ್ ತಂಡ, ರಿಧಮ್ ಕಲ್ಚರಲ್ ವಿಂಗ್ಸ್,ಕಲಾಂಜಲಿ ಕ್ರಿಯೇಷನ್ ಟೀಮ್ ಹೀಗೆ ನೂರಕ್ಕೂ ಅಧಿಕ ವೇದಿಕೆಯಲ್ಲಿ ಹಾಡಿ ತನ್ನಲ್ಲಿರುವ ಸಂಗೀತ ಮೋಹವನ್ನು ಎಲ್ಲೆಡೆ ಪಸರಿಸಿ ಜನಮಾನಸರ ಹೃದಯ ಗೆದ್ದ ಹಾಡುಗಾರ್ತಿ..

ಮುಂದೆಯೂ ಕೂಡಾ ಹೆಚ್ಚಿನ ಅವಕಾಶ ಇವರ ಪಾಲಿಗೆ ಒದಗಿ ಬರಲಿ ಎಂಬುದು ನಮ್ಮ ತಂಡದ ಹಾರೈಕೆ

ಟೀಮ್ ನಮ್ಮ ಬಿಲ್ಲವೆರ್

0 comments: