Thursday, May 20, 2021

ನಟನಾ ಕ್ಷೇತ್ರದಲ್ಲಿ ಪ್ರಜ್ವಲಿಸುತ್ತಿರುವ ಯುವ ಪ್ರತಿಭೆ ಪ್ರಜ್ವಲಿ ಸುವರ್ಣ

 ಸಾಧನೆಯ ಛಲವನ್ನು ತೊಟ್ಟು ನಿಂತು ತನ್ನ ಪ್ರಯತ್ನವನ್ನೇ ಕವಚವನ್ನಾಗಿ ಧರಿಸಿ ಹಠದಿಂದ ಮುನ್ನುಗ್ಗಿ ನಟನಾಕ್ಷೆತ್ರದಲ್ಲಿ ಇಂದು ಪ್ರಜ್ವಲಿಸುತ್ತಿರುವ ಯುವ ಪ್ರತಿಭೆಯೇ #ಪ್ರಜ್ವಲಿ #ಸುವರ್ಣ 

🖍️ಟೀಮ್ ನಮ್ಮ ಬಿಲ್ಲವೆರ್


ಗಡಿನಾಡು ಕಾಸರಗೋಡು ಜಿಲ್ಲೆ ಮಂಜೇಶ್ವರ ತಾಲೂಕಿನ 'ಮುಗು ಎನ್ನುವ ಪುಟ್ಟ ಗ್ರಾಮದ ದಿವಂಗತ ನಾರಾಯಣ ಪೂಜಾರಿ ಮತ್ತು ತಾಯಿ ಉಮಲತಾರವರ ಮುದ್ದಿನ ಮಗಳೇ #ಪ್ರಜ್ವಲಿ ಸುವರ್ಣ #.ಬಿ.ಎಸ್ಸಿ MLT ವ್ಯಾಸಂಗ ಮಾಡಿರುವ ಇವರು ತಾನು 7ನೇ ವಯಸ್ಸಿನಲ್ಲಿರುವಾಗಲೇ ತಂದೆಯನ್ನು ಕಳೆದುಕೊಂಡ ಇವರಿಗೆ ನಂತರ ತನ್ನ ತಾಯಿಯ ಪ್ರೋತ್ಸಾಹ, ಬೆಂಬಲ  ಬಿಟ್ಟರೆ ಬೇರೆ ಯಾರ ಪ್ರೋತ್ಸಾಹವು ಸಿಗದೆ ಸಣ್ಣ ವಯಸ್ಸಿನಲ್ಲಿ ಭರತನಾಟ್ಯ, ಯಕ್ಷಗಾನ, ಸಂಗೀತ ಕ್ಲಾಸ್ಗೆ ತೆರಳಿ ಅಭ್ಯಾವಿಸುತ್ತಿರುವಾಗ ಕಾರಣಾಂತರಗಳಿಂದ ಈ ಎಲ್ಲಾ ತರಗತಿಗಳನ್ನು ಅರ್ಧಕ್ಕೆ ಕೈ ಬಿಡುವ ಸನ್ನಿವೇಶ ಬಂದ್ದೊದಗಿತು. ಬಾಲ್ಯ ದಿಂದಲೇ ಹಲವಾರು ಕಷ್ಟ, ಸಮಸ್ಯೆಗಳನ್ನು ಎದುರಿಸಿದ ಇವರಿಗೆ ಕಲಾಕ್ಷೇತ್ರದಲ್ಲಿನ ವ್ಯಾಮೋಹ ಕಿಂಚಿತ್ತು ಕಡಿಮೆ ಆಗಲಿಲ್ಲ. ಏನಾದರೂ ಆಗಲಿ ತಾನು ಕಲಾ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು ಎನ್ನುವ ಛಲ ತೊಟ್ಟು ಹಠದಿಂದ ಕಲಿತು ಹಲವಾರು ವೇದಿಕೆಗಳಲ್ಲಿ ನೃತ್ಯ ಪ್ರದರ್ಶನ ನೀಡಿ ಶಾಲಾ ಮಟ್ಟ, ಜಿಲ್ಲಾ ಮಟ್ಟದ ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಿ ಅನೇಕ ಪ್ರಶಸ್ತಿ, ಪುರಸ್ಕಾರಗಳನ್ನು ತನ್ನ ಮುಡಿಗೇರಿಸಿಕೊಂಡರು. ಕೇವಲ ಕಲಾ ಕ್ಷೇತ್ರದಲ್ಲಿ ಮಾತ್ರ ತನ್ನ ಪ್ರತಿಭೆ ತೋರಿದ್ದು ಮಾತ್ರವಲ್ಲದೆ ಇವರಿಗೆ ಬರವಣಿಗೆ, ಚಿತ್ರ ರಚನೆಯಲ್ಲೂ ತುಂಬಾ ಆಸಕ್ತಿ.... 


ಕಲಾಂಜಲಿ ಕ್ರಿಯೇಷನ್ಗೆ ಪಾದಾರ್ಪಣೆ ಮಾಡಿ ಅಲ್ಲಿ ತಾನು ನಿರೂಪಣೆಗೈದು ಸೈ ಎನಿಸಿಕೊಂಡವರು. ಕನತ ದಿಬ್ಬಣ, ಉಡಲ ರಾಣಿ, ನೀನೆ ಕೊನೆವರೆಗೂ, ಏಳ್ ಪಜ್ಜೆ ನನ ನಿನ್ನೊಟ್ಟುಗು ಇತ್ಯಾದಿ ತುಳು ಮತ್ತು ಕನ್ನಡ ಆಲ್ಬಮ್ ಸಾಂಗ್ ನಲ್ಲಿ ನಟನೆ ಅಷ್ಟು ಮಾತ್ರ ಅಲ್ಲದೇ 'ಆಯೆ ಎನನ್ ರಿಜೆಕ್ಟ್ ಮಲ್ತೆ 'ಎನ್ನುವ ಒಂದು ತುಳು ಸಣ್ಣ ಮೂವಿ ಯಲ್ಲೂ ನಾಯಕಿಯಾಗಿ ನಟನೆಗೈದು ನಟನಾಕ್ಷೇತ್ರದಲ್ಲೂ ಎಲ್ಲರ ಮೆಚ್ಚುಗೆಗೆ ಪಾತ್ರರಾದವರು.


ಬಹುಮುಖ ಪ್ರತಿಭೆಯಾಗಿರುವ #ಪ್ರಜ್ವಲಿ ಸುವರ್ಣ #ಇವರು ಇನ್ನಷ್ಟು ಕಲಾ ಕ್ಷೇತ್ರದಲ್ಲಿ ತನ್ನ ಛಾಪನ್ನು ಮೂಡಿಸಲಿ...ಇವರು ಕಂಡ ಕನಸೆಲ್ಲಾ ಬೇಗನೆ ನೆರವೇರಲಿ....ಇವರಿಗೆ ಇನ್ನಷ್ಟು ಅವಕಾಶಗಳು ಒದಗಿ ಬರಲಿ.... ಇವರ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸೋಣ....

🖍️ಟೀಮ್ ನಮ್ಮ ಬಿಲ್ಲವೆರ್










2 comments:

  1. ಶುಭವಾಗಲಿ ,ಸಾಧನೆಯ ಹಾದಿಯ ಹಿಡಿದು ಅಭಿನಯರಂಗದಲ್ಲಿ ಪ್ರಜ್ವಲಿಸುತ್ತಾ ಇರಿ ಪ್ರಜ್ವಾಲಿ...ಸದಾ ನಗುನಗುತ..ಜನಮನಸ ಗೆಲ್ಲುತ್ತಾ....👍🔥👌💐🙏❤️🙏ದೇವರ ಆಶೀರ್ವಾದ ವಿರಲಿ🙏

    ReplyDelete