ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಸದ್ದಿಲ್ಲದೆ ಮಿಂಚುತ್ತಿರುವ ಕರಾವಳಿಯ ಬಾಲನಟ #V.J#ಅಮನ್#ಎಸ್# ಕರ್ಕೆರ#
✍️#ಅರ್ಚನಾ. ಎಂ. ಬಂಗೇರ#
#ಕುಂಪಲ#
ದಿ ನ್ಯೂಯಾರ್ಕ್ ನಲ್ಲಿ ನಡೆಯುವ ಫಿಲಂ ಫೆಸ್ಟಿವಲ್ ಗೆ ಇಂಡಿಯನ್ ವತಿಯಿಂದ ಆಯ್ಕೆಯಾದ ಎಲ್ಲಾ ಭಾಷೆಗಳ ಚಲನಚಿತ್ರಗಳ ನಡುವೆ #ನೀಲಿಹಕ್ಕಿ# ಶಿರಸಿ ಭಾಷೆ ಚಿತ್ರ ಕೂಡ ಆಯ್ಕೆಯಾಗಿರುತ್ತದೆ.ನೀಲಿಹಕ್ಕಿಚಿತ್ರದಲ್ಲಿ ಸಿದ್ದ ಎಂಬ ಹೆಸರಿನ ಪಾತ್ರದಾರಿಯಾಗಿ ಮಂಗಳೂರಿನ ಅಮನ್. ಎಸ್. ಕರ್ಕೇರಾ ಅವರು ಬಾಲನಟನಾಗಿ ಬಣ್ಣಹಚ್ಚಿ ಅದರಲ್ಲೂ ಬೆಸ್ಟ್ ಚೈಲ್ಡ್ ಆರ್ಟಿಸ್ಟ್ ಗೆ ನೊಮಿನೇಟ್ ಆಗಿರುವುದು ಭಾರತ ದೇಶಕ್ಕೆ ಹೆಮ್ಮೆಯ ವಿಷಯವಾಗಿದೆ. ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಸದ್ದಿಲ್ಲದೆ ಮಿಂಚುತ್ತಿದ್ದರೂ ಇನ್ನೂ ತೆರಮರೆಯಲ್ಲಿರುವ ಕರಾವಳಿಯ ನವಿರಾದ ಕೇಶ ರಾಶಿಯ ಹಾಲುಗೆನ್ನೆ ಸವಿ ಅಕ್ಕರೆಯ ಮುದ್ದುಮುಖದ ಸೌಂದರ್ಯಗಣಿ,ತುಳುನಾಡಿನ ಬಹುಮುಖ ಬಾಲಪ್ರತಿಭೆ,ಬಾಲನಟ, V.J ಅಮನ್.ಎಸ್.ಕರ್ಕೇರ ಅವರ ಸಾಧನೆಯ ಯಶೋಗಾಥೆ.
#ನೀರಿಗಿಂತ ತಿಳಿಯಾದದ್ದು-ಜ್ಞಾನ# ಪ್ರತಿಭೆ ಎನ್ನುವುದು ದೇವರು ಕೊಟ್ಟ ವರ,ದೇವರ ಅಪ್ಪಣೆ ವಿನಹಃ ಹುಲ್ಲು ಕಡ್ಡಿಯೂ ಅಲುಗಾಡದು. ಸಾಧನೆ ಎಂಬುವುದು ಸಾಗರವಿದ್ದಂತೆ,ಬಗೆದಷ್ಟು ಮುಗಿಯದು.ಮನಸ್ಸಿದ್ದರೆ ಮಾರ್ಗವೆಂಬಂತೆ ಸಾಧನೆ ಫಲಪ್ರದವಾಗಲು ಗುರು, ನಿರ್ದಿಷ್ಟ ಗುರಿ,ಕಠಿಣ ಪರಿಶ್ರಮ,ಧ್ಯೇಯ,ಮಾರ್ಗದರ್ಶನ ಅತ್ಯಗತ್ಯ.
ಬೆಳೆಯುವ ಸಿರಿಮೊಳಕೆಯಲ್ಲಿ ಎಂಬಂತೆ ಎಳೆ ವಯಸ್ಸಿನಲ್ಲೇ ಜನಮಾನಸದ ಹೃದಯದೀ ಮನಸೂರೆಗೊಂಡ ಪ್ರತಿಭೆಗೆ ಸರಿಸಾಟಿಯೇ ಇಲ್ಲವೆಂಬಂತೆ ವಿಭಿನ್ನ ಶೈಲಿಯಲ್ಲಿ ಛಾಪು ಮೂಡಿಸಿಹ ಕಿನ್ನರಲೋಕದ ಕಿನ್ನರಿ,ಚೈತನ್ಯದ ಚಿಲುಮೆ, ಯಶಸ್ವಿ ನಿರೂಪಕ,ತ್ರಿಭಾಷಾ ಬಾಲನಟ,ನೃತ್ಯಗಾರ,ಸಂಗೀತಗಾರ,ಚಿತ್ರಕಲೆಗಾರ,
ರೂಪದರ್ಶಿ,ಈಜುಪಟು,ಭಾಷಣಗಾರ,ಸ್ವರ ಹಿನ್ನಲೆಗಾರ,ಕ್ರೀಡಾಪಟು,
ಸಂಗೀತವಾದಕ,ಅಂತರ್ರಾಷ್ಟ್ರೀಯ ಮಕ್ಕಳ ಚಲನಚಿತ್ರದ ಬಾಲನಟನೆ ಪ್ರಶಸ್ತಿಗೆ ಭಾಜನರಾದ ಸ್ಪರ್ಧಾಳು,ತುಳುನಾಡ ಹೆಮ್ಮೆಯ ಸಾಧಕ, ಬಹುಮುಖ ಅರಳು ಪ್ರತಿಭೆ #ವಿ ಜೆ#ಅಮನ್.ಎಸ್.ಕರ್ಕೇರ#.
ದಕ್ಷಿಣಕನ್ನಡ ಜಿಲ್ಲೆಯ ಮಂಗಳೂರು ತಾಲ್ಲೂಕಿನ ಮೂಡುಶೆಡ್ಡೆ ನಿವಾಸಿಗಳಾದ ಶ್ರೀ ಶ್ರೀನಿವಾಸ ಅಮೀನ್ ಮತ್ತು ಶ್ರೀಮತಿ ಬಬಿತಾ.ಎಸ್.ಕರ್ಕೇರ ದಂಪತಿಗಳ ಜೇಷ್ಠ ಸುಪುತ್ರರಾದ ಮಾಸ್ಟರ್ ಅಮನ್.ಎಸ್.ಕರ್ಕೇರರು 2008 ಮೇ 24ರಂದು ಜನಿಸಿದ್ದು,ಇದೀಗ ಹದಿಮೂರರ ಹರೆಯ.ಇವರು ಪ್ರಸ್ತುತ #ಪ್ರಿಸ್ಟೀಜ್ ಇಂಟರ್ ನ್ಯಾಷನಲ್ ಸ್ಕೂಲ್# ಜಪ್ಪಿನಮೊಗರಿನಲ್ಲಿ ಏಳನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು,ಅಮನ್ ಕಲಿಕೆ,ಆಟ,ಪಾಠದಲ್ಲೂ ಸದಾ ಮುಂದಿದ್ದು ,2019-2020ರಲ್ಲಿ ಸ್ಟೂಡೆಂಟ್ ಆಫ್ ದಿ ಇಯರ್ ಪ್ರಶಸ್ತಿಯ ಜೊತೆಗೆ ನಗದನ್ನು ತನ್ನ ಮುಡಿಗೇರಿಸಿ ಕೊಳ್ಳುವುದರ ಜೊತೆಗೆ ಎರಡನೇ ತರಗತಿಯಿಂದ ಹಿಡಿದು ಸತತವಾಗಿ ಪ್ರತಿ ಆರು ವರ್ಷಗಳಿಂದ ಜನರಲ್ ಪ್ರೋಪೆಕೆಸ್ಸಿ ಅಂದರೆ ನಾಲ್ಕು ವಿಭಾಗದಲ್ಲೂ ಪ್ರಥಮ ಸ್ಥಾನ ಪಡೆದರೆ ಮಾತ್ರ ಆ ಸ್ಥಾನಕ್ಕೆ ಅರ್ಹರಾಗುತ್ತಾರೆ.ಇವರ ಇಂತಹ ಅಪೂರ್ವ ಸಾಧನೆಯನ್ನು ಗಮನಿಸಿ ಸನ್ಮಾರ್ಗ ಟಿವಿ ಚಾನೆಲ್ ನವರು ಪ್ರಿಸ್ಟೀಜ್ ಶಾಲೆಗೆ ಬಂದು ಇವರನ್ನು ಸಂದರ್ಶಿಸಿರುವುದು ಶ್ಲಾಘನೀಯ.
#ವಿ. ಜೆ. ಅಮನ್. ಎಸ್. ಕರ್ಕೇರ# ನಿರೂಪಣೆಯಲ್ಲಿ ಖ್ಯಾತ ಕರ್ನಾಟಕ ತುಳು ಸಾಹಿತ್ಯ ಆಕಾಡೆಮಿ ಅಧ್ಯಕ್ಷರು # ಸನ್ಮಾನ್ಯ ಶ್ರೀ ದಯಾನಂದ್ ಕತ್ತಲ್ ಸಾರ್# ಅವರ ಮುದ್ದಿನ ಶಿಷ್ಯನಾಗಿದ್ದು,ಇವರ ಪ್ರಜ್ವಲ ಭವಿಷ್ಯಕ್ಕೆ ಬೆನ್ನಲುಬಾಗಿ ದಾರಿದೀಪವಾಗಿರುತ್ತಾರೆ. ಅಮನ್ ನಿರೂಪಣೆ ಮಾಡುತ್ತಿದ್ದರೆ ಹರಳು ಹುರಿದಂತೆ ನೆರೆದ ಜನಸ್ತೋಮವನ್ನು ಕ್ಷಣಾರ್ಧದಲ್ಲಿ ತನ್ನೆಡೆಗೆ ಸೆಳೆದುಕೊಂಡು ಮೂಕವಿಸ್ಮಿತರನ್ನಾಗಿಸುವ ಉದಯ್ಯೋನ್ಮುಖ ಅನನ್ಯ ಪ್ರತಿಭೆ.ಇವರು ಮೊಂಟೆಸ್ಸೆರಿ ತರಗತಿಯಿಂದಲೇ ಸರಾಗವಾಗಿ ನಿರೂಪಣೆಗೈದ ಅಧ್ಭುತ ಕಲೆಗಾರ.#ನಮ್ಮ ಟಿವಿ# ಸ್ಥಳೀಯ ವಾಹಿನಿಯಲ್ಲಿ #ನಮ್ಮಶುಭಾಶಯ#
ನೇರಪ್ರಸಾರ ಕಾರ್ಯಕ್ರಮ ಬೆಳಿಗ್ಗೆ 9 ರಿಂದ 10 ಘಂಟೆವರೆಗೆ ನಡೆಸಿಕೊಡುವ ಪೋರ.ಮಾತಿನ ಮೋಡಿಯಲ್ಲಿ ಮಂತ್ರ ಮುಗ್ದರನ್ನಾಗಿಸಿ ತನ್ನೆಡೆಗೆ ಅವೆಷ್ಟೋ ಅಭಿಮಾನಿಗಳನ್ನು ಸೆಳೆದುಕೊಂಡ ಪ್ರತಿಭಾನ್ವಿತ.ಇವರು ಗುರುಹಿರಿಯರಿಗೆ ಗೌರವ ಕೊಟ್ಟು ಮಾತನಾಡಿಸುವುದರ ಜೊತೆಗೆ ಉತ್ತಮ ಸಂಸ್ಕಾರ,ಸದ್ಗುಣ,
ಸದಾಚಾರ ಪಾಲಿಸುವ ಬಾಲಕ.ಬೆಂಗಳೂರಿನ ಅರಳು ಟಿವಿ ವಾಹಿನಿಯಲ್ಲಿ ಮುಖ್ಯ ನಿರೂಪಣೆಗೆ ಆಯ್ಕೆ ಆದ ಚಿತ್ತಚೋರ. ದಯಾನಂದ್ ಕತ್ತಲ್ ಸಾರ್ ಅವರು ಗುರುವಾಗಿ ಸದಾ ಶಿಷ್ಯನ ಏಳಿಗೆಗೆ ಪೂರಕವಾಗಿ,ನಿತ್ಯವೂ ಸುಜ್ಞಾನದ ಹಾದಿಗೆ ಆಧಾರಸ್ತಂಭವೆಂಬಂತೆ,ಶಿಷ್ಯನ ಅದೆಷ್ಟೋ ನಿರೂಪಣೆಗೆ,ಭಾಷಣಕ್ಕೆ ವಿಷಯವನ್ನು ಬರೆದುಕೊಟ್ಟು ಬಹುಮಾನ ಪಡೆಯುವಲ್ಲಿ ಶ್ರಮವಹಿಸಿದವರು.
ಅದರಲ್ಲೂ ಇವರು #ಭಾರತದ ಪ್ರಧಾನಿ ಮಂತ್ರಿ ಸನ್ಮಾನ್ಯ ನರೇಂದ್ರ ಮೋದಿ# ಹಾಗೇ #ತುಳುನಾಡು# ವಿಷಯದ ಕುರಿತು ಮಾಡಿದ ಸಂಭಾಷಣೆ ವಿಡಿಯೋ ಬಲು ದೊಡ್ಡ ಮಟ್ಟಕ್ಕೆ ವೈರಲ್ ಮತ್ತು ಶೇರ್ ಆಗಿರುವ ಸಾರ್ಥಕತೆ ಇವರದು. #ಮುಗ್ದ ಮನಸ್ಸುಗಳ ಮಾತು# ಹೀಗೆ ನೂರಕ್ಕಿಂತಲೂ ಹೆಚ್ಚು ವಿಭಿನ್ನ ಪರಿಕಲ್ಪನೆಗಳ ವಿಡಿಯೋವನ್ನು ಮಾಡಿರುತ್ತಾರೆ,ಅದಲ್ಲದೆ ಇವರದೇ ಹೆಸರಿನ ಯೂಟ್ಯೂಬ್ ಚಾನೆಲ್ ಮುಖಾಂತರವೂ ತನ್ನ ವಾಕ್ ಚಾತುರ್ಯತೆಯಿಂದ ಅಪಾರ ಅಭಿಮಾನಿಗಳನ್ನು ಹೊಂದಿ ಮೆಚ್ಚುಗೆ ಗಳಿಸಿರುತ್ತಾರೆ. #ಇಂಡಿಯಾ ಗಾಟ್ ಟ್ಯಾಲೆಂಟ್# ಎಂಬ #ಮುಂಬೈ#ನ ಕಲರ್ಸ್ ಟಿವಿ ಚಾನೆಲ್ ನವರು ಆಯೋಜಿಸಿರುವ ಕಾರ್ಯಕ್ರಮದಲ್ಲಿ ನೃತ್ಯ ಮಾಡಿದ ಅಮೋಘ ನೃತ್ಯಗಾರ, #ಡಾನ್ಸ್ ಕರ್ನಾಟಕ ಡಾನ್ಸ್ # ಕನ್ನಡ ಚಾನೆಲ್ ನ ಆಯ್ಕೆ ಸುತ್ತಿನಲ್ಲಿ ಭಾಗವಹಿಸಿರುವರು.ಹಾಗೇಭರತನಾಟ್ಯ ನೃತ್ಯವನ್ನು ಕರಗತ ಗೊಳಿಸಿಹರು.
ರಾಜ್ಯ ಮತ್ತು ರಾಷ್ಟ್ರಮಟ್ಟದ ಕರಾಟೆ ಟೂರ್ನ್ ಮೆಂಟ್ ನಲ್ಲಿ ಭಾಗವಹಿಸಿ ಕಂಚು ಗೆದ್ದಿರುವ ಹೆಮ್ಮೆಯ ಕರಾಟೆಪಟು.ಇವರುಚಿತ್ರಕಲೆಗಾರನಾಗಿದ್ದು, ಚಿತ್ರ ಪರೀಕ್ಷೆಯಲ್ಲೂ ಬಹುಮಾನ ಗಳಿಸಿದ ಹೆಗ್ಗಳಿಕೆ ಇವರದು. ಸಂಗೀತದ ಸುಸ್ವರ ಪ್ರತಿಭೆಯಾಗಿದ್ದು,ತರಬೇತಿಯಿಲ್ಲದೇ ಸಂಗೀತ ಸಾಧನವಾದ ಕೀಬೋರ್ಡ್ ಹಾಗೇ ಡ್ರಮ್ಸ್ ನುಡಿಸುವುದರಲ್ಲೂ ಚತುರರು.
ನಂತೂರಿನ ಸಂದೇಶ ರೇಡಿಯೋವೊಂದರಲ್ಲಿ ಅಮ್ಮನಕಥೆ ಮತ್ತು ಶಿಕ್ಷಣ ಎಂಬ ಕಾರ್ಯಕ್ರಮಕ್ಕೆ ಸ್ವರ ಸಂಯೋಜಕರಾಗಿದ್ದು ಹೀಗೆ ಪರಿಚಿತರಾಗಿ ಮಗನ ಕ್ರಿಯಾಶೀಲ ಚಟುವಟಿಕೆ ಮುಖಾಂತರ ಅಮ್ಮನಿಗೆ ಸ್ಥಳೀಯ ಟಿವಿ ವಾಹಿನಿಯೊಂದರಲ್ಲಿ ನ್ಯೂಸ್ ರಿಪೋರ್ಟರ್ ಆಗಿ ಅವಕಾಶ ದೊರಕಿಸಿಕೊಟ್ಟ ಪುಣ್ಯವಂತ ಮಗ. ಇಂತಹ ಪುತ್ರನನ್ನು ಪಡೆಯಲು ನಾವು ಪುಣ್ಯ ಮಾಡಿದ್ದೇವೆ ಎಂಬುವುದು ಇವರ ಅಮ್ಮನ ಮನದ ಮಾತಾಗಿದೆ.ಹೆತ್ತವರು ಮಗನ ಸಾಧನೆಗೆ ಸದಾ ಶ್ರಮಿಸುತ್ತಿದ್ದು,ಇವರ ಏಳಿಗೆಗೆ ವರದಹಸ್ತರಾಗಿರುತ್ತಾರೆ.ಹಾಗೇ ಅಮನ್ ನ ಸಾಧನೆಯ ಬೆನ್ನ ಹಿಂದೆ ಅನೇಕ ಕಾಣದ ಕೈಗಳ ಪರಿಶ್ರಮ ಮತ್ತು ಸಹಕಾರದಿಂದ ಇಂದಿನ ಯಶಸ್ವಿಗೆ ಕಾರಣಿಕರ್ತವಾಗಿರುತ್ತದೆ ಎಂದು ಹೆತ್ತವರು ಬಾವುಕರಾಗಿ ಸ್ಮರಣೆ ಮಾಡುತ್ತಿರುತ್ತಾರೆ.
V-4 ಚಾನೆಲ್ ನಲ್ಲಿ ಕಾಮಿಡಿ ಪ್ರೀಮಿಯರ್ ಲೀಗ್ 3ನೇ ಸಂಚಿಕೆವರೆಗೆ ಪಾತ್ರವಹಿಸಿರುವರು ಹಾಗೇನಮ್ಮಟಿವಿ ಚಾನೆಲ್ ನ-ಕುಸಲ್ದ್ ಒಸರ್ -ಸ್ಟಾಂಡ್ ಆಫ್ ಕಾಮಿಡಿ ದೊಡ್ಡ ಕಲಾವಿದರ ಜೊತೆ ಪೈನಲ್ ಗೂ ಆಯ್ಕೆಯಾಗಿರುತ್ತಾರೆ.
ಸಾಮಾಜಿಕ ಜಾಲತಾಣದ ಟಿಕ್ ಟಾಕ್ ನಲ್ಲೂ ಬಲು ಜೋರಾಗಿ ಸದ್ದು ಮಾಡಿರುವ ಇವರು ಪ್ರಸ್ತುತ ಕೋಡಿಂಗ್ ಕೋರ್ಸ್ ನ್ನು ಆನ್‌ಲೈನ್ ಕ್ಲಾಸ್ ನಲ್ಲಿ ತರಬೇತಿ ಪಡೆಯುತ್ತಿದ್ದಾರೆ.ಇವರು ರೂಪದರ್ಶಿಯಾಗಿರುವ ನಂದಿನಿ ಕಷಾಯ,ಮಹೇಂದ್ರ ಕಾರ್ ಬೋಲೆರೋ ಹಾಗೇ ಇಮುನೋ ಆಯುರ್ವೇದಿಕ್ ಜಾಹೀರಾತು ಇಮ್ಯುನಿಟಿ ಪವರ್ ಜಾಸ್ತಿ ಮಾಡುವ ಮದ್ದಿನ ಜಾಹೀರಾತಿನಲ್ಲೂ ಪ್ರಮುಖ ಪಾತ್ರ ನಿರ್ವಹಿಸಿರುತ್ತಾರೆ.
ಅಮನ್ ತ್ರಿಭಾಷಾ ಬಾಲನಟನಾಗಿದ್ದು,ಪ್ರಥಮವಾಗಿ ಪಾದಾರ್ಪಣೆ ಮಾಡಿದ ತುಳುಚಿತ್ರರಂಗದ #ಪೆಪ್ಪೆರೆರೆ ಪೆರೆರೆರೆ# ಎಂಬ ಚಿತ್ರದ ಮುಖಾಂತರ ಚಿಕ್ಕ ಪಾತ್ರದಲ್ಲಿ ಬಣ್ಣ ಹಚ್ಚಿ,ಮುಂದೆ#ರೂಪಾಂತರ# ಶೀರ್ಷಿಕೆಯ ಕನ್ನಡ ಚಲನಚಿತ್ರದಲ್ಲಿ ಪ್ರಮುಖ ಬಾಲನಟನಾಗಿ ಅಭಿನಯಿಸಿರುವರು.
ಅನಂತರದ #ನೀಲಿಹಕ್ಕಿ#ಎಂಬ ಶಿರಸಿ ಭಾಷೆಯ ಚಲನಚಿತ್ರದಲ್ಲಿ ಸಿದ್ಧಾರ್ಥ ಎಂಬ ಪಾತ್ರದಾರಿಯಾಗಿ ಮುಖ್ಯ ಭೂಮಿಕೆಯಲ್ಲಿ ಬಣ್ಣಹಚ್ಚಿರುವರು. #ನೀಲಿಹಕ್ಕಿ# ಎಂಬ ಶಿರಸಿ ಭಾಷಾ ಚಲನಚಿತ್ರ ದಿ ನ್ಯೂಯಾರ್ಕ್ ನಲ್ಲಿ ನಡೆಯುವ 'ಫಿಲಂ ಫೆಸ್ಟಿವಲ್ 'ಗೆ ಇಂಡಿಯನ್ ಫಿಲಂವತಿಯಿಂದ ಆಯ್ಕೆಯಾದ ಎಲ್ಲಾ ಭಾಷೆಗಳ ಚಲನಚಿತ್ರಗಳ ನಡುವೆ ನೀಲಿಹಕ್ಕಿ ಶಿರಸಿ ಭಾಷೆಯ ಚಲನಚಿತ್ರ ಕೂಡ ಆಯ್ಕೆ ಕಂಡಿತ್ತು.ಇದರಲ್ಲಿ ಅಮನ್.ಎಸ್.ಕರ್ಕೇರಾ ಬೆಸ್ಟ್ ಚೈಲ್ಡ್ ಆರ್ಟಿಸ್ಟ್ ಗೆ ನೊಮಿನೇಟ್ ಆಗಿರುವುದೇ ತುಳುನಾಡಿಗೆ ಹೆಮ್ಮೆಯ ವಿಷಯ.ಹಾಗೇ ಈ ಪ್ರಶಸ್ತಿ ಅವರ ತೆಕ್ಕೆಗೆ ಸೇರಲಿ ಎಂದೂ ನಾವೆಲ್ಲರೂ ಆಶೀರ್ವದಿಸಿ ಪ್ರಾರ್ಥಿಸೋಣ.
#ಜಿಷ್ಣು# ಎಂಬ ಕನ್ನಡ ಚಲನಚಿತ್ರದಲ್ಲಿ ಬಿಕ್ಷುಕನ ಪಾತ್ರ #ಸಪ್ತಸಾಗರದಾಚೆ ಎಲ್ಲೊ# ಕನ್ನಡ ಚಲನಚಿತ್ರದಲ್ಲಿ ನಾಯಕನಟ ರಕ್ಷಿತ್ ಶೆಟ್ಟಿ ಬ್ಯಾನರ್ ನ ಚಿತ್ರದ ನಾಯಕಿ ನಟಿಯ ತಮ್ಮನಾಗಿ ವಿನೋದ್ ನ ಪಾತ್ರ ನಿರ್ವಹಿಸಿರುತ್ತಾರೆ.
ಇವರಿಗೆ ಖ್ಯಾತ ಕನ್ನಡ ಚಲನಚಿತ್ರ ನಟರಾದ ರಕ್ಷಿತ್ ಶೆಟ್ಟಿಯವರ ಸಂಪೂರ್ಣ ಸಹಕಾರದ ಬೆಂಬಲ ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರವನ್ನು ನೀಡಿರುತ್ತಾರೆ.ಅಂದರೆ ಅಮನ್ ನಲ್ಲಿ ಇಷ್ಟು ಪ್ರತಿಭೆ,ಕಲಾಚಾತುರ್ಯತೆ ಇದ್ದರೂ ಇನ್ನೂ ತೆರೆಮರೆಯಲ್ಲಿರುವ ನವಕಲಾವಿದನ ಪರಿಚಯ ಜಗದಲಿ ಅನಾವರಣ ಗೊಳ್ಳಬೇಕೆಂಬುವುದೇ ಇವರ ಆಶಯ.
ಈಗಾಗಲೇ ಸದ್ದಿಲ್ಲದೆ ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿರುವ ಬಾಲತಾರೆಗೆ ಎಲ್ಲಾ ಕ್ಷೇತ್ರಗಳಲ್ಲೂ ಆಸಕ್ತಿ ಇದ್ದು ,ರಾಜ್ಯಮಟ್ಟ ಅಷ್ಟೇ ಅಲ್ಲದೆ ರಾಷ್ಟ್ರಮಟ್ಟದ ಪ್ರಶಸ್ತಿಗೂ ಭಾಜನರಾಗಿರುತ್ತಾರೆ.ಬಳ್ಳಾರಿಯಲ್ಲಿ- #ಪ್ರತಿಭಾ ರತ್ನ ಪ್ರಶಸ್ತಿ# ಧಾರವಾಡದಲ್ಲಿ-#ಕರುನಾಡ ರಾಜ್ಯೋತ್ಸವ ಪ್ರಶಸ್ತಿ# ಮೈಸೂರಿನಲ್ಲಿ- #ವಿಶ್ವಮಾನ್ಯ ಕನ್ನಡಿಗರ ಪ್ರಶಸ್ತಿ# ಹಾಗೇ ಬೆಂಗಳೂರಿನಲ್ಲಿ-#ರಾಷ್ಟ್ರ ಮಟ್ಟದ ಪ್ರಶಸ್ತಿ#ಗಳನ್ನು ಎಳೆಯ ಹರೆಯದಲ್ಲೇ ಮುಡಿಗೇರಿಸಿಗೊಂಡ ಬಹು ಪ್ರತಿಭಾನ್ವಿತ.ಅಬ್ಬಾಬ್ಬಾ ಈ ಪುಟ್ಟ ಪೋರನ ಇಷ್ಟೊಂದು ಪ್ರತಿಭೆ,ಅಧ್ಭುತ ಸಾಧನೆಗಳನ್ನು ನೋಡುವಾಗ ''ಆಡು ಮುಟ್ಟದ ಸೊಪ್ಪಿಲ್ಲ,ಈ ಬಾಲಕ ಏರದ ಸಭಾವೇದಿಕೆಗಳಿಲ್ಲ ಎಂದೆನಿಸುತ್ತದೆ.
ಕರಾವಳಿಯ ಅಪರೂಪದ ಮಾಣಿಕ್ಯ,ರಾಷ್ಟೀಯ ದ್ಯೋತಕ, ಅಸಾಧಾರಣ ಬಾಲಚತುರ, ಹೆಮ್ಮೆಯ ಬಹುಮುಖ ಸಾಧಕ, ತುಳುನಾಡ ಹೊನ್ನ ಶಿಖರ, ಸಾಧನೆಗರಿಯ ಕೀರ್ತಿ ಪತಾಕೆ ದೇಶ-ವಿದೇಶದಲ್ಲೂ ಪಸರಿಸಲಿ,ಎಲೆಮರೆ ಕಾಯಿಯಂತಿರುವ ಅಪ್ಪಟ ರತ್ನದ ಕಂಪು ಅನಾವರಣವಾಗಲಿ,ಅಮನ್ ನಾಮಧೇಯ ಬಾನಂಗಳದ ಅಷ್ಟದಿಕ್ಕಿನಲ್ಲೂ ರಾರಾಜಿಸಲಿ ಹಾಗೇ ಗುರುಹಿರಿಯರ, ದೈವದೇವರ ಆಶೀರ್ವಾದವಿರಲಿ #ವಿ.ಜೆ.ಅಮನ್.ಎಸ್.ಕರ್ಕೇರ#ನಂತಹ ಅಧ್ಭುತ ಸಾಧಕನಿಗೆ ಬರೆದ ನನ್ನೀ ಕೈ,ಲೇಖನಿಗೂ ಅಭಿಮಾನ,ಗೌರವದ ಧನ್ಯತಾಭಾವ ಮೂಡಿದ್ದು, ಬರಹರೂಪದ ಒಲವಿನ ಸವಿಜೇನ ರಸಧಾರೆಯ ಪದಗಳ ಚಿತ್ತಾರಮಾಲೆ ಅರ್ಪಣೆಯಾಗಲಿ...
ಶುಭಾಂಶನಗಳೊಂದಿಗೆ 🙏🏻
🖊️#ಅರ್ಚನಾ. ಎಂ. ಬಂಗೇರ#
#ಕುಂಪಲ#
0 comments: