Friday, May 21, 2021

ತುಳು ಚಿತ್ರರಂಗದಲ್ಲಿ ಮಿಂಚುತ್ತಿರುವ ಯುವ ಪ್ರತಿಭೆ ದೀಕ್ಷಿತ್ ಪೊಳಲಿ

 #ತುಳು ಚಿತ್ರರಂಗದಲ್ಲಿ ಮಿಂಚುತ್ತಿರುವ ಯುವ ಪ್ರತಿಭೆ ದೀಕ್ಷಿತ್ ಪೊಳಲಿ#






✍🏻ಬರಹ: ಶ್ರವಣ್ ಬಿ.ಸಿ.ರೋಡ್ 


ರಂಗಭೂಮಿಯಲ್ಲಿ ಹೆಸರು ಮಾಡಿ

 ಪ್ರಸಿದ್ಧ ನಾಟಕ ತಂಡಗಳಲ್ಲಿ ಬಣ್ಣ ಹಚ್ಚಿ ಸೈ ಎನಿಸಿಕೊಂಡಿದ್ದಾರೆ. ಅಷ್ಟು ಮಾತ್ರವಲ್ಲದೆ  #ಮುಖವಾಡ ಮಾಂತ್ರಿಕ# ಅಶೋಕ್ ಪೊಳಲಿ ಅವರ ಜೊತೆ ಅಜ್ಜ ಅಜ್ಜಿ ಹಾಸ್ಯನೃತ್ಯದ ಮೂಲಕ 400 ಮಿಕ್ಕಿ ಪ್ರರ್ದಶನ ನೀಡಿ ಖ್ಯಾತಿಗಳಿಸಿದ್ದಾರೆ. ಪ್ರಸ್ತುತ #ತೆಲಿಕೆದ ಬೊಳ್ಳಿ# ಲ||ಡಿ  ದೇವದಾಸ್ ಕಾಪಿಕಾಡ್ ಅವರ "ಚಾ ಪರ್ಕ" ತಂಡದಲ್ಲಿ ಕಳೆದ ಒಂದು ವರ್ಷಗಳಿಂದ "ನಮಸ್ಕಾರ ಮಾಸ್ಟ್ರೆ," "ಪುಷ್ಪಕನ ಇಮಾನ", "ಬಂಗಾರ್", "ಕೊಡೆ ಬುಡ್ಪಾಲೆ" , "ಕುರೆಪಟ್', ನಾಟಕಗಳಲ್ಲಿ ನಟಿಸುತ್ತಿದ್ದಾರೆ.

ಇವರ ನಟನೆ ರಂಗಭೂಮಿಗೆ ಮಾತ್ರ ಸೀಮಿತವಾಗದೆ ಕಿರುಚಿತ್ರಗಳಾದ "ತಿರಂಗ", "ಮಾನಸ", ಕಿರುಚಿತ್ರಗಳಲ್ಲಿ  ನಟಿಸಿ  "ಮಿನಿಚರ್"  ಆಲ್ಬಮ್ ಸಾಂಗ್ ನಲ್ಲಿ ನಾಯಕ ನಟನಾಗಿ ಮಿಂಚಿದ್ದಾರೆ, ತುಳು ಚಿತ್ರಗಳಾದ ಅರ್ಜುನ್ ಕಾಪಿಕಾಡ್ ನಟನೆಯ " ಏರಾ ಉಲ್ಲೆರ್ಗೆ", "ಜಬರ್ದಸ್ತ್ ಶಂಕರ" ಮತ್ತು "ಬೆಲ್ಚಪ್ಪೆ" ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ ನಟನೆಯ ಜೊತೆಗೆ ಗಂಜಿಮಠದಲ್ಲಿ "ರಾಜ ಕೇಸರಿ" ಎಂಬ ಸಂಸ್ಥೆಯ ಮೂಲಕ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.ಮುಂದಿನ ದಿನಗಳಲ್ಲಿ ಚಿತ್ರರಂಗದಲ್ಲಿ ಇನ್ನೂ ಹೆಚ್ಚು ಸಾಧನೆ ಮಾಡಲಿ. ಹಲವಾರು ಆವಕಾಶ ಇವರನ್ನೂ ಹುಡುಕಿಕೊಂಡು ಬರಲಿ ಎಂಬುದೇ ನನ್ನ ಬರವಣಿಗೆ ಆಶಯ.

0 comments: