ಅಂದು ಅವರು ಚೇತನ ಇಂದು ಅವರು ಇಂದುಚೇತನ.. ಅರೆರೆ..! ಇದೇನಿದು ಈ ತರ ವಿಭಿನ್ನವಾದ ಹೆಸರು ಅಂತೀರಾ? ಹಾ ಹೌದು ಆ ಹೆಸರಿನ ವೈಶಿಷ್ಟ್ಯ ಅಂತದ್ದು
…..ಚೇತನ್ಆಗಿದ್ದವರುಕತೆಕವನಗಳಲ್ಲಿ ಕಾವ್ಯನಾಮವಾಗಿಉಪಯೋಗಿಸಿ ಇದೀಗ ಇಂದುಚೇತನ ಬೋರುಗುಡ್ಡೆ ಎಂಬನಾಮಧೇಯದಿಂದಲೇಕರೆಯಲ್ಪಡುತ್ತಿದ್ದಾರೆ.ಇವರು 1 ಜುಲೈ 1992 ರಂದು ಪಾಡಿಮನೆ ಬಲೆಂಜ, ನೆಲ್ಲಿಕಾರುಗ್ರಾಮದಬೋರುಗುಡ್ಡೆಯ ಶೇಖರ ಪೂಜಾರಿ ಹಾಗು ಪದ್ಮಿನಿ ಶೇಖರಪೂಜಾರಿದಂಪತಿಗಳ ಎರಡನೇಸುಪುತ್ರನಾಗಿಜನಿಸಿದರು .ಒಬ್ಬ ಪ್ರೀತಿಯ ಸಹೋದರನ ತಮ್ಮನಾಗಿ ಹಾಗೂ ಬಬ್ಬಳು ಸಹೋದರಿ ಯ ಮುದ್ದಿನ ಅಣ್ಣನಾಗಿ ಐದು ಮಂದಿಯ ಚಿಕ್ಕ ಹಾಗೂ ಚೊಕ್ಕ ಸಂಸಾರ.ಇವರು ಪ್ರಾಥಮಿಕ ವಿದ್ಯಾಭ್ಯಾಸವನ್ನು ಸಂತ ವಿಕ್ಟರರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ನೆಲ್ಲಿಕಾರು ಹಾಗೂ ಸರಕಾರಿ ಹಿರಿಯಪ್ರಾಥಮಿಕಶಾಲೆಬೋರುಗುಡ್ಡೆಯಲ್ಲಿಹಾಗೂಪ್ರೌಢವಿದ್ಯಾಭ್ಯಾಸವನ್ನುಸರಕಾರಿಪ್ರೌಢಶಾಲೆಅಳಿಯೂರಿನಲ್ಲಿ ಹಾಗೂ ಪದವಿ ಪೂರ್ವ ವಿದ್ಯಾಭ್ಯಾಸವನ್ನು ಸೈಂಟ್ ಆಂಟೋನಿ ಪದವಿಪೂರ್ವ ಕಾಲೇಜು ನಾರಾವಿ ಹಾಗೂ ಪದವಿ ಶಿಕ್ಷಣ ಬಿ.ಬಿ.ಎಂ ಅನ್ನು ಮಂಜುನಾಥ ಪೈ ಸ್ಮಾರಕ ಪ್ರಥಮ ದರ್ಜೆ ಕಾಲೇಜು ಕಾಬೆಟ್ಟು ಕಾರ್ಕಳ ಹಾಗೂ ಸ್ನಾತಕೋತ್ತರ ಪದವಿ ಶಿಕ್ಷಣವನ್ನು (ಎಂಕಾಂ) ಅನ್ನು ಆಳ್ವಾಸ್ ಇನ್ಸ್ಟಿಟ್ಯೂಟ್ ನಲ್ಲಿ ಮಾಡಿದ್ದಾರೆ. ಪ್ರಸ್ತುತ ಬೋಳ ಸುರೇಂದ್ರ ಕಾಮತ್ & ಸೈನ್ಸ್ ಕೆದಿಂಜೆ ಮಂಜರಪಲ್ಕೆಯಲ್ಲಿ ಹೆಚ್ ಆರ್(HR) ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇವರು ಪ್ರೌಢ ಬರಹಗಾರ ಹಾಗೂ ಉತ್ತಮ ನಾಟಕ ಕಲಾವಿದನಾಗಿ ಗಮನ ಸೆಳೆಯುತ್ತಾರೆ.. ಶಾಲಾ ದಿನಗಳಿಂದಲೇ ನಾಟಕದಲ್ಲಿ ಆಸಕ್ತಿಯುಳ್ಳವರಾಗಿದ್ದು ಶಾಲಾ ಪ್ರತಿಭಾ ಕಾರಂಜಿಯಲ್ಲಿ ಶ್ರೀ ಮಹಾದೇವ ಮೂಡುಕೊಣಾಜೆ ಅವರ ನಿರ್ದೇಶನದಲ್ಲಿ ಮೂಡಿಬಂದ ಅಂಗುಲಿಮಾಲ ನಾಟಕದಲ್ಲಿ ಅಂಗುಲಿಮಾಲ ಎಂಬ ಪಾತ್ರಧಾರಿಯಾಗಿ ಪ್ರೇಕ್ಷಕರ ಮನಗೆಲ್ಲುವಂತೆ ಅಭಿನಯಿಸಿದ್ದು ಇಂದಿಗೂ ಕೆಲವರು ಅಂಗುಲಿಮಾಲ ಎಂದೇ ಕರೆಯುತ್ತಿದ್ದಾರೆ..ಎಕ್ಸಲೆಂಟ್ ಕಾಲೇಜ್ ಮೂಡಬಿದ್ರೆಯಲ್ಲಿ ನಡೆದ ಪ್ರತಿಷ್ಠಿತ ‘ಕನ್ನಡ ಹಬ್ಬ 2019’ಎಂಬಕಾರ್ಯಕ್ರಮದಲ್ಲಿಕರ್ನಾಟಕದಾದಂತ್ಯದಿಂದ ಆರಿಸಲ್ಪಟ್ಟ 25 ಮಂದಿಯಲ್ಲಿ ಇವರ ಕವನವೂ ಒಂದಾಗಿರುತ್ತದೆ. ನಮ್ಮಬೆದ್ರ ಮಾಸಿಕ ಪತ್ರಿಕೆಯಲ್ಲಿ ಇಂದು ವಿಹಾರ ಎಂಬ ಅಂಕಣದೊಂದಿಗೆ, ಅನೇಕ ಲೇಖನಗಳ ಸರಣಿಯಲ್ಲಿ ತಮ್ಮ ಬರವಣಿಗೆಯ ಛಾಪು ಮೂಡಿಸಿರುತ್ತಾರೆ. ಆಕಾಶವಾಣಿ ಮಂಗಳೂರು ಕೇಂದ್ರದಿಂದಪ್ರಸಾರವಾಗುವಯುವವಾಣಿಯಲ್ಲಿ ಇವರ ಹಲವು ಕಥೆ-ಕವನಗಳು ಧ್ವನಿಮುದ್ರಣಗೊಂಡುಅನೇಕಬಾರಿಪ್ರಸಾರಮತ್ತುಮರುಪ್ರಸಾರವಾಗಿದೆ.ನಾವು ದಿನನಿತ್ಯ ಓದುವಂತಹ ನಾಡಿನ ಹೆಸರಾಂತ ಮಂಗಳ, ನಿರಂತರ ಮುಂತಾದ ಹಲವಾರು ಪತ್ರಿಕೆಗಳಲ್ಲಿ ಕಥೆ ಕವನಗಳು ಮೂಡಿಬಂದಿವೆ. ಇವರುಉತ್ತಮಭಾಷಣಕಾರರಾಗಿ,ನಾಟಕಕಾರರಾಗಿ,ನಿರೂಪಕನಾಗಿ, ತುಳುನಾಡಿನ ಗಂಡುಕಲೆ ಯಕ್ಷಗಾನ ತಾಳಮದ್ದಳೆಯಲ್ಲಿ ಹವ್ಯಾಸಿ ಅರ್ಥದಾರಿಯಾಗಿ ತಮ್ಮ ಬಹುಮುಖ ಪ್ರತಿಭೆಯ ಮೂಲಕ ನಮ್ಮೆದುರು ಪ್ರತ್ಯೇಕವಾಗಿ ನಿಲ್ಲುತ್ತಾರೆ. ದೇಯಿ ಬೈದೆತಿ ಕಲಾತಂಡ ಅಳಿಯೂರು ಇದರ ಸಹ ಕಲಾವಿದನಾಗಿ, ಅಕ್ಕರೆ ರಂಗ ಶಿಕ್ಷಣ ಕೇಂದ್ರದ ಕಲಾವಿದನಾಗಿ ಪ್ರೇಕ್ಷಕರ ಗಮನಸೆಳೆದಿದ್ದಾರೆ. ಅಷ್ಟೇ ಅಲ್ಲದೆ ನಾಡಿನ ಹಲವಾರು ಭಾಗದಲ್ಲಿ ರಾಜ್ಯಮಟ್ಟದ ಕವಿಗೋಷ್ಠಿಗಳಿಗೆ ಆಹ್ವಾನಿತರಾಗಿ ತಮ್ಮ ಊರಿನ ಹೆಸರು ನಾಡಿನುದ್ದಗಲಕ್ಕೂ ಪಸರಿಸಲಿ
0 comments: