ಬನ್ನಂಜೆ ಬಾಬು ಸಾಹಿತ್ಯ ಕ್ಷೇತದಲ್ಲಿ ಈ ಹೆಸರು ಬಹಳ ಜನಪ್ರಿಯ.ತುಳುನಾಡಿನ ವಿಶಿಷ್ಟವೂ ದೈವಾರಾಧನೆಯ ಕುರಿತಾದ ಬನ್ನಂಜೆ ಅವರ ವಿಶೇಷ ಆಸ್ತಕಿ ಮುಂದೆ ಅವರನ್ನೂ ಪ್ರಬುದ್ಧ ಜಾನಪದ ಪಂಡಿತನಾಗಿ ರೂಪಿಸುವಲ್ಲಿ ಅಡಿಗಲ್ಲಾಯಿತು. ಕರ್ನಾಟಕ ಮಲ್ಲ ದಲ್ಲಿ ಸುಮಾರು ಒಂದುವರೆ ವರ್ಷಗಳ ಕಾಲ 'ತುಳು ತುಡರ್' ಅಂಕಣಕಾರನಾಗಿ ತುಳುನಾಡಿನ ಜನಪದೀಯ ನೆಲೆಯಲ್ಲಿ ಪ್ರಚಲಿತವಿರುವ ಅನೇಕ ದೈವಗಳ ಐತಿಹ್ಯವನ್ನು, ವಸ್ತು ವಿಶೇಷತೆಗಳ ಕುರಿತಾದ ವಿವರವಾದ ಲೇಖನವನ್ನು ಬರೆದಿದ್ದಾರೆ. ಯಕ್ಷಗಾನ ಕ್ಷೇತ್ರದಲೂ ಬಣ್ಣ ಹಚ್ಚಿದ ಇವರು. ತುಳು ಕಾದಂಬರಿ, ಮಾನೆಚ್ಚಿ ತುಳು ಕಾದಂಬರಿ ,ನುಡಿಕಟ್ಟ್ ಜಾನಪದೀಯ ಪ್ರಾರ್ಥನೆಗಳು , ತುಳುನಾಡ ದೈವಗಳು , ತುಳುವೆರೆ ಮದಿಮೆ ,ತುಳುನಾಡ ದೈವಗಳು ಗರೋಡಿ: ಒಂದು ಚಿಂತನೆ
ದೈವ ನೆಲೆ , ಆಟಿ- ಸೋಣ, ಸಮಗ್ರ ಕೋಟಿ ಚೆನ್ನಯ, ಸಂಸ್ಕೃತಿ ಸಂಪನ್ನ ಸಿರಿ ಮೊದಲಾದ 20 ಕೃತಿಗಳನ್ನು ಬನ್ನಂಜೆಯವರು ಸಾಹಿತ್ಯ ಲೋಕಕ್ಕೆ ಸಮರ್ಪಣೆ ಮಾಡಿದ್ದಾರೆ.
ಕೃತಿಕಾರ ರಾಗಿ ,ಸಾಹಿತಿಯಾಗಿ, ಯಕ್ಷಗಾನ ಕಲಾವಿದರಾಗಿ, ಸಂಘಟಕರಾಗಿ, ಶನಿ ಗ್ರಂಥದ ಅರ್ಥಧಾರಿಯಾಗಿ, ವಾಗ್ಮಿಯಾಗಿ ,ಸಮಾಜ ಸೇವಕರಾಗಿ ಹೀಗೆ ಬಹುಮುಖ ಪ್ರತಿಭೆಯನ್ನು ಮೈಗೂಡಿಸಿಕೊಂಡು ತನ್ನ ಬದುಕನ್ನು ಬನ್ನಂಜೆಯವರು ಸಾರ್ಥಕಗೊಳಿಸಿ ರುವರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ರಾಜ್ಯ ಪ್ರಶಸ್ತಿ, ಬಿಲ್ಲವರ ಅಸೋಸಿಯೇಷನ್ ಮುಂಬೈ ಕೊಡಮಾಡುವ 2019ನೇ ಸಾಲಿನ ಶ್ರೀ ಗುರುನಾರಾಯಣ ಸಾಹಿತ್ಯ ಪ್ರಶಸ್ತಿ, ಮಂಗಳೂರು ಕ್ರಿಶ್ಚಿಯನ್ ಸೊಸೈಟಿ ಆಶ್ರಯದಲ್ಲಿ ಸಂದೇಶ ಪ್ರಶಸ್ತಿ,ಕುಸಿ ಜಾನಪದ ಪ್ರಶಸ್ತಿ ಮುಂತಾದ ಅನೇಕ ಪ್ರಶಸ್ತಿ ಸನ್ಮಾನಗಳನ್ನು ಇವರನ್ನೂ ಹುಡುಕಿಕೊಂಡು ಬಂದಿವೆ.
ಬಿಲ್ಲವ ಸಮಾಜ ಹೆಮ್ಮೆ ಬನ್ನಂಜೆ ಅಮೀನ್ ಅವರ ಸಾಧನೆ ಯುವ ಸಾಹಿತಿಗಳಿಗೆ ಮಾದರಿಯಾಗಲ್ಲಿ ಎಂಬುದೇ ನಮ್ಮ ಆಶಯ.
ಟೀಮ್ ನಮ್ಮ ಬಿಲ್ಲವೆರ್
0 comments: