ಬರಹ:- ಶ್ರವಣ್ ಬಿ.ಸಿ.ರೋಡ್
ತುಳುನಾಡು ಅದೆಷ್ಟೋ ಪ್ರತಿಭೆಗಳ ತವರೂರು ಇಂತಹ ತುಳುನಾಡಿನಲ್ಲಿ ಕಲಾಜೀವನ ಆರಂಭಿಸಿ ಇಂದಿಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದ್ದಾರೆ.ಇಂತಹ ತುಳುನಾಡಿನಲ್ಲಿ ಬಹುಮುಖ ಪ್ರತಿಭೆಯಾಗಿ ಗುರುತಿಸಿಕೊಂಡವರೇ ಮಧುರ ಆರ್.ಜೆ. ಮಂಗಳೂರು ಮೂಲದ ನಿವಾಸಿಯಾದ ಇವರು ದಿ||ರತ್ನಾಕರ ಮತ್ತು ಜಲಜಾಕ್ಷಿ ದಂಪತಿಗಳ ಸುಪುತ್ರಿ 2013 ರಲ್ಲಿ ರಂಗಭೂಮಿ ಮೂಲಕ ಕಲಾ ಜೀವನ ಆರಂಭಿಸಿದ ಇವರು ಬಾರ್ಬರಿಕ, ನೆಮ್ಮದಿ ಅಪಾರ್ಟ್ಮೆಂಟ್, ಕೇಳೆ ಸಖಿ ಚಂದ್ರಮುಖಿ,ಮಹಾಮಯಿ, ಕಾತ್ಯಾಯಿನಿ, ಗಿಡ ಮರ ಬಳ್ಳಿ, ನಾಟಕಗಳಲ್ಲಿ ಬಣ್ಣ ಹಚ್ಚಿ ಸೈ ಎನಿಸಿಕೊಂಡಿದ್ದಾರೆ.
ರಂಗಭೂಮಿ ನಟನೆಯ ಜೊತೆಗೆ ಕಾರ್ಯಕ್ರಮ ನಿರೂಪಣೆ, ಮೆಹೆಂದಿ ಕಲಾವಿದೆ,ವಧುವಿನ ಅಲಂಕಾರ, ಜೊತೆಗೆ ವಾಯ್ಸ್- ಓವರ್ ಕಲಾವಿದೆಯಾಗಿದ್ದಾರೆ.ವಿಶೇಷ ಕಾರ್ಯಕ್ರಮಗಳಿಗೆ ದೇಸಿ ಕಾಡಿ ಉಡುಪುಗಳನ್ನು ಇವರು ವಿನ್ಯಾಸಗೊಳ್ಳಿಸುತ್ತಾರೆ.ಅರ್ಜುನ್ ಕಾಪಿಕಾಡ್ ನಟನೆಯ "ಜಬರ್ದಸ್ತ್ ಶಂಕರ" ಚಿತ್ರದ "ಅಲೆನ್ ತೂಲೆ ಪೊರ್ಲು ತೂಲೆ" ಹಾಡಿಗೆ ಸಂಪೂರ್ಣ ವಸ್ತ್ರವಿನ್ಯಾಸ ಮಾಡಿದ ಖ್ಯಾತಿ ಇವರಿಗೀದೆ .
"Aalayam" ಪ್ಲಾಟ್ ಫಾರ್ಮ್ ಮೂಲಕ ತಾವೂ ತಯಾರಿಸಿದ ಕಾಡಿ ಉಡುಪುಗಳನ್ನು ಪ್ರರ್ದಶನ ಮತ್ತು ಮಾರಾಟ ಮಾಡುತ್ತಾರೆ."quran - time," "monika", "kaha chale gayi tum" ಪುಸ್ತಕಗಳಿಗೆ ಸಹ ಲೇಖಕಿ ಮತ್ತು ಸಂಕಲನಗಾರ್ತಿಯಾಗಿ ಕಾರ್ಯನಿರ್ವಹಿಸಿದ್ದಾರೆ,ಇತ್ತೀಚೆಗೆ ಬಿಡುಗಡೆಯಾದ ಟೆಲಿ ಚಿತ್ರ "ಕನಸಿನ ಮಳೆಯಾದಳು" ಚಿತ್ರದಲ್ಲಿನಾಯಕಿಯಾಗಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.ಪ್ರಸ್ತುತ "ಯಕ್ಷಮಾಣ್ಯಿಕ" ಬಿರುದಾಂಕಿತ ರಾಕೇಶ್ ರೈ ಅಡ್ಕ ಅವರ ನೇತೃತ್ವದಲ್ಲಿ ಯಕ್ಷಗಾನ ತರಬೇತಿ ಪಡೆಯುತ್ತಿದ್ದಾರೆ. ಈ ಬಹುಮುಖ ಪ್ರತಿಭೆಯ ಸಾಧನೆ ಇನ್ನೂ ಉತ್ತುಂಗಕ್ಕೆ ಏರಲಿ.ಇವರಿಗೆ ಇನ್ನಷ್ಟು ಆವಕಾಶಗಳು ಒದಗಿ ಬರಲಿ ಎಂಬುದೇ ನಮ್ಮ ಆಶಯ..
ಟೀಮ್ ನಮ್ಮ ಬಿಲ್ಲವೆರ್
ಸೊಲ್ಮೆಲು ನಮ್ಮ ಬಿಲ್ಲವೆರ್💛
ReplyDelete