Tuesday, June 8, 2021

ಬರಹ ,ನಟನೆಯಲ್ಲಿ ಮೇಲುಗೈ ಸಾಧಿಸಿದ ಉಮಾನಾಥ್ ಕೋಟ್ಯಾನ್ ತೆಂಕಕಾರಂದೂರು





ಸಫಲತೆಯ ಪ್ರಥಮ ರಹಸ್ಯ ಆತ್ಮವಿಶ್ವಾಸ ಎಂಬ ಮಾತಿನಂತೆ ತಮ್ಮ ಅದ್ಭುತ ಬರವಣಿಗೆ ಮತ್ತು ನಟನೆಯ ಮೂಲಕ ಜನಮನವನ್ನು ಗೆದ್ದಿರುವ ಉಮಾನಾಥ್ ಕೋಟ್ಯಾನ್ ರವರು ಶ್ರೀ ಓಬಯ್ಯ ಪೂಜಾರಿ ಮತ್ತು ಶ್ರೀಮತಿ ಚಂದ್ರಾವತಿ ದಂಪತಿಗಳ ಮುದ್ದಿನ ಮಗನಾಗಿ ಜೂನ್ 10, 1996 ರಂದು ಬೆಳ್ತಂಗಡಿ ತಾಲೂಕಿನ ತೆಂಕಕಾರಂದೂರು ಗ್ರಾಮದ ಪುಣ್ಕೆದಡಿ ಮನೆಯಲ್ಲಿ ಜನಿಸಿದರು. ಉಮಾನಾಥ್ ಕೋಟ್ಯಾನ್ ರವರು ತಮ್ಮ ಪ್ರಾರ್ಥಮಿಕ ಶಿಕ್ಷಣವನ್ನು ಸರಕಾರಿ ಹಿರಿಯ ಪ್ರಾರ್ಥಮಿಕ ಶಾಲೆ ಪೆರೋಡಿತ್ತಾಯಕಟ್ಟೆ ಹಾಗೂ ಪದವಿ ಶಿಕ್ಷಣವನ್ನು ಸರಕಾರಿ ಪ್ರಥಮ ದರ್ಜೆ ಕಾಲೇಜು ಪುಂಜಾಲಕಟ್ಟೆಯಲ್ಲಿ ಪೂರೈಸಿದರು.

ನಟನೆಯಲ್ಲಿ ಆಸಕ್ತಿಯನ್ನು ಹೊಂದಿರುವ ಇವರು "ಎದುರುಡು ಇಪ್ಪಾಯೇ, ಪಿರಾವುಡು ತಪ್ಪಾಯೇ " ಎಂಬ ನಾಟಕದಲ್ಲಿ ನಿರ್ವಹಿಸಿದ ಪೊಲೀಸ್ ಪಾತ್ರಕ್ಕೆ ಊರಿನವರ ಮೆಚ್ಚುಗೆ ಪಡೆದ್ದಿದಾರೆ ಹಾಗೂ ಪೌರಾಣಿಕ ನಾಟಕಗಳಲ್ಲಿಯೂ ಮಿಂಚಿದವರು.

ಕೇವಲ ನಟನೆ ಮಾತ್ರವಲ್ಲದೆ ಬರವಣಿಗೆಯ ಹವ್ಯಾಸವನ್ನು ಬೆಳಸಿಕೊಂಡು ಬಂದಿದ್ದಾರೆ. "ಪೊರ್ಲ ಮನಸ್", "ಗೆಳೆತನ ನನ್ನುಸಿರು", "ಆರಿಕೋಡಿ ಶ್ರೀ ಚಾಮುಂಡೇಶ್ವರಿ ಬ್ರಹ್ಮಕಲಶೋತ್ಸವದ ಭಕ್ತಿ ಸುಗಿಪು, ಆರಿಕೋಡಿದ ಸರ್ವಮಂಗಳೇ ", "ಮೋಕೆದ ಪೊಪ್ಪ ", "ಪುಣ್ಯದ ಭೂಮಿ ತುಳುನಾಡು ", "ಮೋಕೆದ ಅಮ್ಮ " "ನಿನ್ನದೆ ನೆನಪು" ಹೀಗೆ ಹಲವಾರು ಹಾಡುಗಳ ಸಾಹಿತ್ಯ ಬರೆದಿರುವ ಅದ್ಭುತ ಪ್ರತಿಭೆ ಉಮಾನಾಥ್ ಕೋಟ್ಯಾನ್ ಎಂದೇ ಹೇಳಬಹುದು.ಇವರು ಬರೆದ ಮೊದಲ ಸಾಹಿತ್ಯ 'ಎನ್ನ ತೇಲಿಕೆದ ಮಲ್ಲಿಗೆ'. ಸದಾ ನಗುಮುಖದಿಂದಿರುವ ಇವರು ಎಲ್ಲರ ಬಳಿ ಅತಿ ವಿನಯತೆಯಿಂದ ನಡೆದುಕೊಳ್ಳುತ್ತಾರೆ. ಸರಳ ವ್ಯಕ್ತಿತ್ವವನ್ನು ಹೊಂದಿರುವ ಉಮಾನಾಥ್ ಕೋಟ್ಯಾನ್ರವರು ಜೀವನದಲ್ಲಿ ಏನನ್ನಾದರೂ ಸಾಧಿಸಬೇಕೆಂಬ ಗುರಿ ಮತ್ತು ಛಲವನ್ನು ಹೊಂದಿದ್ದಾರೆ. ನಾಟಕದ ಹಾಡುಗಳು, ಭಕ್ತಿ ಗೀತೆಗಳು, ಆಲ್ಬಮ್ ಸಾಂಗ್ಸ್ ಮುಂತಾದವುಗಳಿಗೆ ಕನ್ನಡ ಮತ್ತು ತುಳು ಭಾಷೆಯಲ್ಲಿ ಸಾಹಿತ್ಯ ರಚಿಸಿ ಸಂಗೀತ ಪ್ರಿಯರನ್ನು ಮನರಂಜಿಸುತಿದ್ದಾರೆ.

ಇವರ ಈ ಸಾಧನೆಗೆ ಶ್ರೀ ಚಾಮುಂಡೇಶ್ವರಿ ದೇವಸ್ಥಾನ ಆರಿಕೋಡಿ, ಗೆಜ್ಜೆ ಬ್ರಹ್ಮ ಕಲಾವಿದರು ನೆಲ್ಲಿಕಾರು,ತಾನು ಕಲಿತ ಪೆರೋಡಿತ್ತಾಯಕಟ್ಟೆ ಶಾಲೆ ಮತ್ತು ತುಳುನಾಡ ಬೊಳ್ಳಿ ಚಾವಡಿ ಬಜ್ಪೆ ಇವರಿಂದ ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿರುತ್ತಾರೆ. ಉಮಾನಾಥ್ ಕೋಟ್ಯಾನ್ರವರ ಈ ಸಾಧನೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಮತ್ತು ಇನಷ್ಟು ಸಾಧಿಸುವ ಧೈರ್ಯವನ್ನು ದೇವರು ನಿಮಗೆ ನೀಡಲಿ ಎಂಬುದು ನಮ್ಮೆಲ್ಲರ ಆಶಯ #ಕಲಶ ಇದುಕರಾವಳಿಕಲಾವಿದರ_ಸ್ಪರ್ಶ #ಬರಹ - #ಕಾವ್ಯಶ್ರೀ

0 comments: