Friday, June 4, 2021

ಯಕ್ಷಗಾನ ಮತ್ತು ಮೊಡಲಿಂಗ್ ಕ್ಷೇತ್ರದಲ್ಲಿ ಮಿಂಚುತ್ತಿರುವ ಯುವಪ್ರತಿಭೆ ರವಿಕಾಂತ್ ಪೂಜಾರಿ

 ✍🏻ಶ್ರವಣ್ ಬಿ.ಸಿ.ರೋಡ್

ಒಂದು ಬಣ್ಣದ ಲೋಕ ಇನ್ನೊಂದು ಫ್ಯಾಶನ್ ಲೋಕ ಇಂತಹ ಎರಡು ವಿಭಿನ್ನ ಕ್ಷೇತ್ರಗಳಲ್ಲಿ ಸಾಧನೆಗೈಯುತ್ತಿರುವ ಇವರು ರವಿಕಾಂತ್ ಪೂಜಾರಿ.ಇವರು ತಮ್ಮ12ನೇ ವಯಸ್ಸಿನಲ್ಲಿ ಯಕ್ಷಗಾನ ಕ್ಷೇತ್ರಕ್ಕೆ ಕಾಲಿಟ್ಟ ಇವರು.100 ಕ್ಕೂ ಹೆಚ್ಚು ವೇದಿಕೆಯಲ್ಲಿ ಯಕ್ಷಗಾನಕ್ಕೆ ಬಣ್ಣ ಹಚ್ಚಿದ್ದಾರೆ. ರಾಜ್ಯ ಮಟ್ಟದ ಯಕ್ಷೋತ್ಸವ ಸ್ಪರ್ಧೆಯಲ್ಲಿ  "ಇಂದ್ರಜಿತ್ ಕಾಳಗ"ಪ್ರಸಂಗದಲ್ಲಿ ಹನುಮಂತನ ಪ್ರಾತಕ್ಕೆ ದ್ವಿತೀಯ ಬಹುಮಾನಕ್ಕೆ ಭಾಜನರಾಗಿದ್ದಾರೆ. 


ಮೊಡಲಿಂಗ್ ಕ್ಷೇತ್ರದಲ್ಲಿ  2008 ರಲ್ಲಿ ಅಡ್ಯಾರ್ ನಲ್ಲಿ ನಡೆದ ಮಿಸ್ಟರ್ ಅಂಡ್ ಮಿಸಸ್ ಫೇಸ್ ಆಫ್ ತರಮ್,ಮಿಸ್ಟರ್ ಫೇಸ್ ಆಫ್ ತರಮ್ ಮತ್ತು ರ‌್ಯಾಂಪ್ ಬೆಸ್ಟ್  ವಾಕ್ ಪ್ರಶಸ್ತಿ,2019ರಲ್ಲಿ ಮಂಗಳೂರಿನಲ್ಲಿ ನಡೆದ ಮಿಸ್ಟರ್ ಆಂಡ್ ಮಿಸ್ ಬಿಲ್ಲವ ಮೊಡಲಿಂಗ್ ಸ್ಪರ್ಧೆಯಲ್ಲಿ ಪ್ರಥಮ ರನ್ನರ್ ಆಫ್ ಹಾಗೂ ಬೆಸ್ಟ್  ರ‌್ಯಾಂಪ್ ವಾಕ್ ಪ್ರಶಸ್ತಿ ಪಡೆದುಕೊಂಡಿದ್ದಾರೆ.ಜೊತೆಗೆ "ಅಪರಾಧಿ ನಾನಲ್ಲ" ಕನ್ನಡ ಕಿರುಚಿತ್ರ ಮತ್ತು "ಮೋಕೆದ ತುಡರ್"ಎಂಬ ತುಳು ಆಲ್ಬಮ್ ಸಾಂಗ್ ನಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇವರ ಸಾಧನೆಯ ಹಾದಿ ಹೀಗೆ ಮುಂದುವರಿಯಲ್ಲಿ.ಇನ್ನೂ ಹೆಚ್ಚಿನ ಸಾಧನೆ ಮಾಡಲಿ ಎಂಬುದು ನಮ್ಮ ಆಶಯ.

ಟೀಮ್ ನಮ್ಮ ಬಿಲ್ಲವೆರ್.

0 comments: