Thursday, June 3, 2021

ಬಿಲ್ಲವ ಪ್ರತಿಭೆ ಲಿಖಿತ್ ಪುತ್ತೂರು

 ಕರಾವಳಿಯಲ್ಲಿ ಪ್ರತಿಭೆಗಳಿಗೇನು ಕೊರತೆಯಿಲ್ಲ. ಈಗಾಗಲೇ ಅಸಂಖ್ಯಾತ ಕಲಾವಿದರನ್ನು ಕಿರುತೆರೆ ಹಾಗೂ ಬೆಳ್ಳಿತೆರೆಗೆ ಕೊಡುಗೆಯಾಗಿ ನೀಡಿದೆ. ಈ ಕಲಾವಿದರು ಬಾಲಿವುಡ್ ಸೇರಿದಂತೆ ಸ್ಯಾಂಡಲ್ ವುಡ್, ಕೋಸ್ಟಲ್ ವುಡ್ ಗಳಲ್ಲಿ ತಮ್ಮದೇ ಛಾಪು ಮೂಡಿಸುತ್ತಿದ್ದಾರೆ. ಇಂತಹ ಕಲಾವಿದರಲ್ಲಿ ಲಿಖಿತ್ ಪುತ್ತೂರು ಕೂಡ ಒಬ್ಬರು.



ಇವರು ಪುತ್ತೂರು ತಾಲೂಕಿನ ಬಲ್ನಾಡು ಗ್ರಾಮದ ಮಲೆತ್ತಿಕಲ್ಲು ಆನಂದ ಪೂಜಾರಿ ಹಾಗೂ ಶಶಿಕಲಾ ದಂಪತಿಗಳ ಪುತ್ರ.ಇವರಿಗೆ ಸಂಗೀತ ಎಂದರೆ ಅದೇನೋ ಹುಚ್ಚು ಪ್ರೀತಿ.ಸಣ್ಣ ವಯಸ್ಸಿನಿಂದಲೇ ಸಂಗೀತದ ಕಡೆ ತನ್ನ ಆಸಕ್ತಿ ತೋರಿಸಿದ ಇವರು, ಯಾವುದೇ ಗುರುವಿನ ಬಳಿ ಹೋಗದೆ ತಮ್ಮಲ್ಲಿರುವ ಪ್ರತಿಭೆಯನ್ನು ತಾವೇ ಗುರುತಿಸಿಕೊಂಡು, ಸಂಗೀತಾಭ್ಯಾಸವನ್ನು ಮಾಡುತ್ತಿದ್ದಾರೆ. .



ಲಿಖಿತ್ ಇವರು ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಶ್ರೀ ಲಕ್ಷೀ ವೆಂಕಟರಮಣ ಹಿರಿಯ ಪ್ರಾಥಮಿಕ ಶಾಲೆ ಸಾರ್ಯ, ಪ್ರೌಢಶಾಲಾ ಶಿಕ್ಷಣ ಹಾಗೂ ಪದವಿ ಪೂರ್ವ ಶಿಕ್ಷಣವನ್ನು ಸರಕಾರಿ ಪದವಿಪೂರ್ವ ಕಾಲೇಜು ಬೆಳಿಯೂರು ಕಟ್ಟೆ, ಪದವಿ ಶಿಕ್ಷಣವನ್ನು ಸರಕಾರಿ ಪ್ರಥಮ ದರ್ಜೆ ಕಾಲೇಜು ಪುತ್ತೂರಿನಲ್ಲಿ ಮುಗಿಸಿ, ಇದೀಗ ಪ್ರಸ್ತುತ ಪೆರುವಾಜೆ ಕಾಲೇಜಿನಲ್ಲಿ ಪ್ರಥಮ ವರ್ಷದ ಎಂ.ಕಾಂ ವಿಧ್ಯಾರ್ಥಿಯಾಗಿದ್ದಾರೆ.



ಇವರು ಹಾಡಿರುವ ಹಾಡುಗಳು ಇಡೀ ರಾಜ್ಯದಲ್ಲೇ ಬಾರಿ ಸದ್ದು ಮಾಡುತ್ತಿದೆ. ಚಂದನ ಬೊಂಬೆ,ಪೊಸರಾಗ, ಶ್ರೀ ರಾಮೇಶ್ವರ, ಮೋಸದ ಚೂರಿ, ಮೋಕೆದ ಉಲು೯, ಮಾಯಾವಿ ಪ್ರೀತಿ, ಎನ್ನ ಕಿನ್ನರಿ, ಮೋಕೆದ ಅರಮನೆ, ಮೋಕೆದ ಪನಿ, ಎನ್ನಾಸೆ, ಈಯೇ ಎನ್ನಾಲ್, ಮೋಕೆ ಶುರು, ಪಪ್ಪಾ I Love You, ಮೌನದ ಮೋಕೆ, 100% ಲವ್, ಮೋಕೆದ ಪನಿ, ಕನಸಿನ ಕಣ್ಮಣಿ, ಮೋಕೆದ ಸಾಲ, ಈಯೇ ಎನ್ನ ಪೊಣ್ಣು, ಕುರುಡು ಪ್ರೀತಿ, ಎನ್ನ ಒಡತಿ, ನೊಂದ ಹೃದಯ, ಕಾನೇಶ್ವರ, ಒಡೆದ ಹೃದಯ, ಅಪ್ಪೆ ಓ ದುಗಾ೯ಂಬೆ ಹೀಗೆ ಸುಮಾರು ಅರವತ್ತಕ್ಕಿಂತಲೂ ಹೆಚ್ಚು ಆಲ್ಬಮ್ ಸಾಂಗ್ ಗಳಲ್ಲಿ ಹಾಡಿದ್ದಾರೆ.


ಸಂಗೀತ ಎಂದ ಮೇಲೆ ಸಾಹಿತ್ಯ ರಚನೆ ಇರಲೇಬೇಕು. ಇವರು ಒಬ್ಬ ಸಾಹಿತಿ ಕೂಡ ಹೌದು. ಸ್ವತಃ ತಾವೇ ಸಾಹಿತ್ಯವನ್ನು ಕೂಡ ಬರೆಯುತ್ತಾರೆ. ಇವರು ಬರೆದ ಸಾಹಿತ್ಯಕ್ಕೆ ಇವರೇ ಧ್ವನಿಯನ್ನು ಕೊಡುತ್ತಾರೆ. ಮೋಕೆದ ಉಡಲ್, ಎನ್ನಾಸೆ, ಎನ್ನ ಕಿನ್ನರಿ, ಈಯೇ ಎನ್ನ ಪೊಣ್ಣು, ಉಡಲ್ದರಸಿ ಹೀಗೆ ಮಲಯಾಳಂ,ತುಳು,ಕನ್ನಡ ಭಾಷೆಗಳಲ್ಲಿ ಹಾಡಿರುತ್ತಾರೆ.

ಇವರ ಕಲೆಯನ್ನು ಗುರುತಿಸಿ ಪ್ರಶಸ್ತಿಗಳು ಸಿಕ್ಕಿವೆ.


"ನನಗೆ ನನ್ನ ತಂದೆ ತಾಯಿ ಹಾಗೂ ಸ್ನೇಹಿತರು ತುಂಬಾ ಪ್ರೋತ್ಸಾಹ ನೀಡುತ್ತಾರೆ. ಸಂಗೀತವನ್ನು ಮುಂದುವರಿಸಿ, ಸಿನಿಮಾಗಳಲ್ಲಿ ಹಾಡಬೇಕೆಂಬುದು ನನ್ನ ಕನಸು. ಪ್ರಯತ್ನ ಒಂದಿದ್ದರೆ ಎಲ್ಲವೂ ಸಾಧ್ಯ " ಎಂಬುದು ಲಿಖಿತ್ ಅವರ ಮಾತಾಗಿದೆ.


ಇನ್ ಸ್ಟಗ್ರಾಮ್ ನಲ್ಲಿ ಇವರಿಗೆ ಸಾವಿರಾರು ಸಂಗೀತಾಭಿಮಾನಿಗಳಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹವಾ ಸೃಷ್ಟಿಸುತ್ತಿದ್ದಾರೆ. ಮಾಯಾವಿ ಪ್ರೀತಿ, ಪ್ರಯತ್ನ, ಹೀಗೆ ಹಲವಾರು ಆಲ್ಬಮ್ ಸಾಂಗ್ ಗಳು ಸಧ್ಯದಲ್ಲೇ ಬಿಡುಗಡೆಗೊಳ್ಳಲಿದೆ. ತನ್ನ ಜೀವನದಲ್ಲಿ ಸಂಗೀತದ ಕಡೆ ಹೆಚ್ಚು ಒಲವು ತೋರಿಸುವ ಈತನಿಗೆ ಇನ್ನು ಹೆಚ್ಚಿನ ಅವಕಾಶಗಳು ದೊರೆಯಲಿ. ನಿಮ್ಮ ಕನಸು ನನಸಾಗಲಿ ಎನ್ನುವ ಹಾರೈಕೆ ನಮ್ಮದು.


✍ಶ್ರದ್ಧಾ.ಶೆಟ್ಟಿ

ಸಾರ್ಯಬೀಡು.ಪುತ್ತೂರು 

0 comments: