Wednesday, June 9, 2021

ಯುವ ಪ್ರತಿಭೆ ಕಾವ್ಯ ಅಂಚನ್

 ಉಡುಪಿ ತಾಲೂಕಿನ ಕಾಪು ಪರಿಸರದ ನಿವಾಸಿಯಾಗಿರುವ ಕಾವ್ಯ ಅಂಚನ್  ಇವರು ಕೆನರಾ ಕಾಲೇಜು ನಲ್ಲಿ B. C. A ಪದವಿಯನ್ನು  ಮುಗಿಸಿರುತ್ತಾರೆ. ಸುಂದರ ರೂಪದರ್ಶಿಯಾಗಿರುವ ಇವರು ಮಾಡೆಲಿಂಗ್ ಕ್ಷೇತ್ರದಲ್ಲಿ ತನ್ನನ್ನು ತಾನು ಗುರುತಿಸಿಕೊಂಡು "2019ರ ಮಿಸ್ ಬಿಲ್ಲವ "ಎನ್ನುವ ಕಿರೀಟವನ್ನು ತನ್ನ ಮುಡಿಗೇರಿಸಿಕೊಂಡು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದು ಮಾತ್ರವಲ್ಲದೇ 2019 ರಲ್ಲಿ ನಡೆದ ರಾಜ್ಯ ಮಟ್ಟದ" ಮಿಸ್ ಕರ್ನಾಟಕ ಇಂಟರ್ನ್ಯಾಷನಲ್ 2019"ಇದರಲ್ಲಿ ಮೊದಲನೇ ರನ್ನರ್ ಅಪ್ ಸ್ಥಾನವನ್ನು ಬಾಚಿಕೊಂಡವರು. ತದನಂತರ V. K ನವತಾರೆ 2019 ಇದರಲ್ಲೂ ಭಾಗವಹಿಸಿ  2ನೇ ರನ್ನರ್ ಅಪ್ ಪಟ್ಟವನ್ನು ಪಡೆದುಕೊಂಡಿರುತ್ತಾರೆ. 

 ಸತ್ಯನಾತ್ ಸ್ಟೋರ್ ಬ್ರಹ್ಮಾವರ" ಇಲ್ಲಿ BRAND AMBASSADOR ಆಗಿ ಕಾರ್ಯ  ನಿರ್ವಹಿಸುತ್ತಿದ್ದಾರೆ. 

ಕೇವಲ ಮಾಡೆಲಿಂಗ್ ಕ್ಷೇತ್ರದಲ್ಲಿ ತನ್ನ ಛಾಪನ್ನು ಮೂಡಿಸಿಕೊಂಡದ್ದು ಮಾತ್ರವಲ್ಲದೇ ನಟನಾ ಕ್ಷೇತ್ರಕ್ಕೂ ಪಾದಾರ್ಪಣೆ ಮಾಡಲು ಮುಂದಾಗಿದ್ದಾರೆ. ಮುಂದಿನ ದಿನಗಳಲ್ಲಿ ತೆರೆ ಕಾಣಲು ಸಿದ್ಧಗೊಂಡಿರುವ ಕನ್ನಡ ಚಲನಚಿತ್ರ "ಮುಂಬೈ to ಭಟ್ಕಳ "ಇದರಲ್ಲಿ ನಾಯಕಿ ಪಾತ್ರಕ್ಕೆ ಬಣ್ಣಹಚ್ಚಿದ್ದಾರೆ. 

ಕಾವ್ಯ ಅಂಚನ್ ಇವರ ಮುಂದಿನ ಭವಿಷ್ಯದ ಜೀವನದಲ್ಲಿ ಇನ್ನಷ್ಟು ಅವಕಾಶಗಳು ಇವರ ಪಾಲಿಗೆ ಒದಗಿಬರಲಿ. ನಾಯಕಿ ಪಾತ್ರಕ್ಕೆ ಜೀವ ತುಂಬಿ ಬಣ್ಣಹಚ್ಚಿ ಸದ್ಯಕ್ಕೆ ಪರದೆ ಮುಂದೆ ತೆರೆಕಾಣಲು  ಸಿದ್ಧವಾಗಿರುವ ಕನ್ನಡ ಚಲನಚಿತ್ರವು ಎಲ್ಲರ ಮೆಚ್ಚುಗೆಗೆ ಪಾತ್ರವಾಗಲಿ ಎನ್ನುವ ಹಾರೈಕೆಯೊಂದಿಗೆ ಈ ಕಲಾಪ್ರತಿಭೆಗೆ ಇನ್ನಷ್ಟು ಪ್ರೋತ್ಸಾಹವನ್ನು ಕೊಟ್ಟು ಇವರು ದೊಡ್ಡ ಮಟ್ಟದಲ್ಲಿ ನಟಿಯಾಗಿ ಮಿಂಚಲಿ ಎಂದು ಹರಸಿ ಆಶೀರ್ವದಿಸೋಣ.....

ಟೀಮ್ ನಮ್ಮ ಬಿಲ್ಲವೆರ್

0 comments: