Thursday, June 10, 2021

ತುಳುನಾಡಿನ ಯುವ ಬಹುಪ್ರತಿಭೆ ಕಾರ್ಕಳ ಮಾಳದ ಕೃತಿಕ ಪೂಜಾರಿ

 ನಾವು ಇಂದು ಪರಿಚಯಿಸುತ್ತಿರುವ ತುಳುನಾಡಿನ ಯುವ  ಪ್ರತಿಭೆಯೆ ಕಾರ್ಕಳ ಮಾಳದ ಕೃತಿಕ ಪೂಜಾರಿ





ಅದೆಷ್ಟೋ ತುಳುನಾಡಿನ ಯುವ ಪ್ರತಿಭೆಗಳು ತಮ್ಮದೇ ಆದ ವಿಶಿಷ್ಟ ಶೈಲಿ ಯಲ್ಲಿ ಒಂದಲ್ಲಾ ಒಂದು ಕ್ಷೇತ್ರದಲ್ಲಿ ಸಾಧಕರಾಗಿ ಹೊರ ಹೊಮ್ಮುತ್ತಿದ್ದಾರೆ.ಅಂತೆಯೇ ನಾವಿಂದು ಪರಿಚಯಿಸಲು ಹೊರಟಿರುವ ಯುವ ಪ್ರತಿಭೆ ಕೃತಿಕಾ ಪೂಜಾರಿ..ಕಾರ್ಕಳ ತಾಲೂಕಿನ ಪುಟ್ಟ ಗ್ರಾಮ ಮಾಳದ ನಿವಾಸಿಯಾದ ಕೃಷ್ಣಪ್ಪ ಪೂಜಾರಿ ಹಾಗೂ ವಸಂತಿ ಪೂಜಾರಿಯವರ ಮುದ್ದಿನ ಮಗಳು..ತುಳುನಾಡಿನ ಬರ್ಕೆ ಮನೆತನದಲ್ಲಿ ಒಂದಾದ  ಕಾರ್ಕಳ ತಾಲೂಕಿನ ಬಡಕಾರ್ ಬರ್ಕೆ ಮನೆತನದವರಾದ ಇವರಿಗೆ  ಬಾಲ್ಯದಿಂದಲೇ ಆಟೋಟ,ಹಾಡುಗಾರಿಕೆ,ನಟನೆಯಲ್ಲಿ ಆಸಕ್ತಿ ಇದ್ದು ಆವಾಗಲೇ ಅನೇಕ ವೇದಿಕೆಯಲ್ಲಿ ಭಾಗವಹಿಸಿ ಬಹುಮಾನ ತನ್ನದಾಗಿರಿಸಿಕೊಂಡಿರುತ್ತಾರೆ. ಬಜಗೋಳಿಯಲ್ಲಿ ಪದವಿ ಶಿಕ್ಷಣ ಮುಗಿಸಿದ ಇವರು ರಾಜ್ಯಮಟ್ಟದ ..400 ಮೀಟರ್ ಓಟದ ಸ್ಪರ್ಧೆಯಲ್ಲಿ ತೃತೀಯ ಬಹುಮಾನ ಪಡೆದಿರುವ ರಾಜ್ಯಮಟ್ಟದ ಕ್ರೀಡಾಪಟುವೂ ಹೌದು. ತದನಂತರ ಇವರು  ಆಯ್ಕೆ ಮಾಡಿದ್ದು ನಟನಾ ಕ್ಷೇತ್ರ ಮತ್ತು ಹಾಡುಗಾರಿಕೆಯನ್ನು...ಹಲವಾರು ನಾಟಕದಲ್ಲಿ ಬಣ್ಣ ಹಚ್ಚಿರುವ ಇವರು ಪಲ್ಲವಿ ಹಾಗೂ ಕುಸಲ್ ಕಲಾವಿದೆರ್ ಬೆದ್ರ ನಾಟಕ ತಂಡದಲ್ಲಿ ಕೂಡಾ ಅಭಿನಯಿಸಿ ಸೈ ಎನಿಸಿಕೊಂಡಿರುತ್ತಾರೆ..ಸುಮಧುರ ಸುಶ್ರಾವ್ಯ ಕಂಠ ಹೊಂದಿರುವ ಇವರು ಟೀಮ್ ಸಾಯಿರಾಮ್,ಕಲಾಕರ್ ವೇಣೂರು ಹಾಗೂ ಸಪ್ತ ಸ್ವರ ಮೆಲೋಡಿಸ್ ವಾಮದಪದವು ತಂಡದೊಂದಿಗೆ ನೂರಾರು ವೇದಿಕೆಯಲ್ಲಿ ಸಾವಿರಾರು ಜನರ ಎದುರಿಗೆ ಅನೇಕ ಕಾರ್ಯಕ್ರಮದಲ್ಲಿ ಹಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿರುತ್ತಾರೆ..ಇವರು ಹಾಡಿರುವ ಆಲ್ಬಮ್ ಹಾಡುಗಳು *ಮಾಳದ ಉಳ್ಳಾಯೇ ಹಾಗೂ ಅರ್ತಿದ ಮೋಕೆ*  ಇನ್ನೂ ಕೂಡಾ ಅನೇಕ ಹಾಡು ಹಾಡಿದ್ದು ರೆಕಾರ್ಡಿಂಗ್ ಬಾಕಿ ಇದೆ...ಮುಳಿಯ ಗಾನರಥ ಎಂಬ ಹಾಡುಗಾರಿಕೆ ಸ್ಪರ್ಧೆಯಲ್ಲಿ ಸೆಮಿ ಪೈನಲಿಸ್ಟ್ ಆಗಿರುವ ಇವರು ಇನ್ನೂ ಮುಂದಿನ ದಿನಗಳಲ್ಲಿ ಹೆಚ್ಚಿನ ಸಾಧನೆಗಳನ್ನು ಮಾಡಲಿ...... ದೈವ ದೇವರ ಅನುಗ್ರಹ ಸದಾ ಇರಲಿ ಎಂದು ಆಶಿಸುವ ಟೀಮ್ ನಮ್ಮ ಬಿಲ್ಲವೆರ್

0 comments: