Friday, June 11, 2021

ಕಂಚಿನ ಕಂಠದ ಸ್ವರ ಮಾಣಿಕ್ಯ ದಿನೇಶ್ ಸುವರ್ಣ ರಾಯಿ

 ಕಂಚಿನ ಕಂಠದ ಸ್ವರ ಮಾಣಿಕ್ಯ ದಿನೇಶ್ ಸುವರ್ಣ ರಾಯಿ 

ಅನುಷಾ ಪೂಜಾರಿ ✍️


ನಾವು ಮಾಡುವ ಪ್ರತಿಯೊಂದು ಕೆಲಸ ಕಾರ್ಯಗಳು ಬೇರೆಯವರಿಗೆ ಸಂತೋಷ ಕೊಡುವುದರೊಂದಿಗೆ ಮಾರ್ಗದರ್ಶನವನ್ನು ನೀಡಬೇಕು. ಸಾಧನೆ ಮಾಡುವವರಿಗೆ ಛಲದ ಜೊತೆ ಪ್ರೋತ್ಸಾಹ ಕೂಡ ಸಿಗಬೇಕು. ಆವಾಗ ಸಾಧನೆಯ ಮೆಟ್ಟಿಲೇರಿ ಹೊರ ಹೊಮ್ಮುದರಲ್ಲಿ ಯಾವುದೇ ರೀತಿಯ ಸಂಶಯವಿಲ್ಲ.

ತುಳುನಾಡ ಸ್ವರ ಮಾಣಿಕ್ಯ  ಎಂಬ ಹೆಗ್ಗಳಿಕೆ ಪಾತ್ರವಾಗಿರುವ ತುಳುನಾಡಿನ ಅದಷ್ಟೋ ಜನ ಮನದಲ್ಲಿ ನಿರೂಪಣೆಯ ಮೂಲಕ ಎಲ್ಲರನ್ನೂ ಆಕರ್ಷಿಸುವ ವ್ಯಕ್ತಿತ್ವವಿರುವ ದಿನೇಶ್ ಸುವರ್ಣ ರಾಯಿ ತನ್ನ ಕಂಚಿನ ಕಂಠದಿಂದ ಯಾವುದೇ ಕಾರ್ಯಕ್ರಮವಿರಲಿ ಅಚ್ಚುಕಟ್ಟಿನಲ್ಲಿ ಮಾತುಗಳನ್ನಾಡಿ ಕಾರ್ಯಕ್ರಮ ನಿರೂಪಣೆಯನ್ನು ಮಾಡುತ್ತಿದ್ದಾರೆ. ಕರಾವಳಿಯಲ್ಲಿ ಮಾತ್ರವಲ್ಲದೆ ವಿದೇಶದಲ್ಲೂ ಇವರಿಗೆ ಕಾರ್ಯಕ್ರಮವನ್ನು ನಿರೂಪಣೆ ಮಾಡುವ ಅವಕಾಶ ದೊರೆತಿರುತ್ತದೆ. 

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಕುದ್ಕೋಳಿ ರಾಯಿ ಗ್ರಾಮದ ಮೋನಪ್ಪ  ಪೂಜಾರಿ ಹಾಗೂ  ಕುಸುಮಾವತಿ  ದಂಪತಿಗಳ  ಪುತ್ರನಾಗಿದ್ದು, ಎಲೆಕ್ಟ್ರಿಕಲ್ಸ್ ನಲ್ಲಿ ಡಿಪ್ಲೋಮ ಪದವಿದರರೂ, ಬಾಲ್ಯದಿಂದಲೂ ಸಾಂಸ್ಕೃತಿಕ ರಂಗದಲ್ಲಿ ತುಂಬಾನೆ  ಆಸಕ್ತಿ  ಹೊಂದಿದ್ದು. ಇವರು ಮೊದ ಮೊದಲು ನಾಟಕ ರಂಗದಲ್ಲಿ ಪರಿಚಿತಗೊಂಡು ನಂತರದಲ್ಲಿ ರವೀಂದ್ರ ಪೂಜಾರಿಯವರ ಸಂಚಾಲಕತ್ವದಲ್ಲಿ  ಷಣ್ಮುಖ ಕಲಾತಂಡದ  ಕಲಾವಿದರಾಗಿ, ನಿರ್ದೇಶಕರಾಗಿ, ಕಲಾ ರಚನೆಕಾರನಾಗಿ, ಕಲಾವಿದರನ್ನು ಬೆಳೆಸಿದರು. ಅದರ ಬಗ್ಗೆ ಯುವ ಜನತೆಗೆ ತಿಳಿಸುವ ಪ್ರಯತ್ನವನ್ನು ಮಾಡಿರುತ್ತಾರೆ. ಇಷ್ಟೇ ಅಲ್ಲದೆ  ಧಾರ್ಮಿಕ ಕಾರ್ಯಗಳಲ್ಲಿ ಸಕ್ರಿಯರಾಗಿದ್ದು ಎಳವೆಯಲ್ಲಿಯೇ ಟ್ರಸ್ಟಿಯಾಗಿಯೂ ಸೇವೆ ಸಲ್ಲಿಸಿದ ಅನುಭವಿಯಾಗಿರುತ್ತಾರೆ. 

ತುಳುನಾಡ ತುಡರ್ ಹಬ್ಬ ಸಾಮೂಹಿಕ ದೀಪಾವಳಿ ಆಚರಣೆಯ ಸಂದರ್ಭದಲ್ಲಿ ತುಳುನಾಡಿನ ಮಣ್ಣಿನ ಪರಿಮಳ ಪಸರಿಸುವ ದೀಪಾವಳಿ ಆಚರಣೆ ಪ್ರಕೃತಿಯನ್ನು ಪೂಜಿಸುವ ಹಬ್ಬವಾಗಿದೆ.ಪ್ರಕೃತಿ ಬೆಸುಗೆಯ ಜೊತೆಗೆ ಬೇಸಾಯ ಸಂಘಟನೆಯ ಬದುಕನ್ನು ನೆನಪಿಸುವ ಆಚರಣೆ ಶಾಶ್ವತವಾಗಿರಲಿ ಎಂದು ಅತ್ಯುತ್ತಮ ಸಂದೇಶವನ್ನು ನೀಡಿದ್ದಾರೆ.

ಸ್ಪಷ್ಟ ಉಚ್ಚಾರಣೆ  ,ಸಂಧರ್ಭಕ್ಕೆ  ತಕ್ಕಂತೆ ಧ್ವನಿಯಲ್ಲಿ  ಏರು -ಪೇರು  ಮಾಡುವ ಕಲೆ  ಅವರ ಮಾತಿನ ಮೋಡಿಯಲ್ಲಿ ಕೇಳಬಹುದು. ಅವರ ಕಾರ್ಯಕ್ರಮ ಅತ್ಯಂತ ಶಿಸ್ತುಬದ್ದವಾಗಿ ಮೂಡಿ ಬರುತ್ತದೆ ಎಂದರೆ ಅದಕ್ಕೆ ಕಾರಣ ಅವರ ಮಾತಿನ ಸೆಳೆತ .ಅಷ್ಟೆ ಅಲ್ಲದೆ ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆ ಇವರು ಇವರ ಕಂಚಿನ ಕಂಠದ ಮಾತಿನ ಚಾಕ ಚಕ್ಯತೆಗೆ ಬೆರಗಾಗಿ ಮೂಕವಿಸ್ಮಿರಾಗಿದ್ದಾರೆ. ಹಾಗಾದರೆ ಇವರ ಮಾತು ಎಷ್ಟೊಂದು ಅರ್ಥಗರ್ಭಿತವಾಗಿರಬಹುದಲ್ಲವೆ.

ಶ್ರೀ ನಾಗಬ್ರಹ್ಮ  ಸುಬ್ರಮಣ್ಯೇಶ್ವರ  ಭಜನಾ  ಮಂಡಳಿಯಲ್ಲಿ  ಭಜಕರಾಗಿ ಪ್ರಸ್ತುತ ವರ್ಷದ ಅಧ್ಯಕ್ಷರಾಗಿ ದೊಡ್ಡ ಜವಬ್ದಾರಿಯನ್ನು ನಿಭಾಯಿಸುತ್ತಿರುವವರು.  ಹಲವಾರು ಸಮಾಜಮುಖಿ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುತ್ತಾರೆ.

ಸೂರ್ಯೋದಯ್  ಪೆರಂಪಳ್ಳಿ  ಅವರ ದೇಯಿ ಬೈದ್ಯೆತಿ ತುಳು ಚಿತ್ರದಲ್ಲಿ  ಕಲಾನಿರ್ದೇಶಕರಾಗಿಯೂ  ಕೆಲಸ ಮಾಡಿ ಬೇಷ್ ಎನಿಸಿದವರು  .ಇದಲ್ಲದೆ  ಸಾಮಾಜಿಕ ಶೈಕ್ಷಣಿಕ ಆರೋಗ್ಯ  ಸೇವೆಗಳಿಗಾಗಿ  ಜವನೆರೆ ತುಡರ್  ಟ್ರಸ್ಟ್ ಹುಟ್ಟುಹಾಕಿದ  ಸ್ಥಾಪಕರು . ಅಷ್ಟೇ ಅಲ್ಲದೇ ಧಾರ್ಮಿಕ ಉಪನ್ಯಾಸಕರಾಗಿ, ಸಂಪನ್ಮೂಲ ವ್ಯಕ್ತಿಯಾಗಿ ಉತ್ತಮ ತುಳು ಭಾಷಣಕಾರನಾಗಿ ಜನಮಾನಸದಲ್ಲಿ ನೆಲೆ ನಿಂತವರು. ಪ್ರಭಾಕರ್ ನೀರುಮಾರ್ಗ ಯುವವಾಹಿನಿ ಯುವ ಸಾಹಿತ್ಯ ಪ್ರಶಸ್ತಿ ಸಿಕ್ಕಿರುತ್ತದೆ.

H K ನೈನಾಡ್  ಇವರಿಂದ ನಿರೂಪಣೆಗೆ ಇಳಿದು ಪ್ರಸ್ತುತ ಮಂಗಳೂರಿನ ಪ್ರಪ್ರಥಮ ತುಳು ವಾರ್ತಾವಾಹಿನಿ ನಮ್ಮ ಕುಡ್ಲ ಚಾನೆಲ್ ನಲ್ಲಿ ನಿರೂಪಕರಾಗಿ  ಕೆಲಸ ನಿರ್ವಹಿಸುತ್ತಿದ್ದರು. ದೇಶದ ನಾನಾ ಕಡೆಗಳಲ್ಲಿ ಸಾವಿರಕ್ಕೂ ಮಿಕ್ಕಿ ಕಾರ್ಯಕ್ರಮ ನೀಡಿದ ಹೆಗ್ಗಳಿಕೆ ಇವರದ್ದೂ. ಈ ವೇದಿಕೆಯ ಮುಖಾಂತರ ಇದೀಗ ಅಂತರಾಷ್ಟ್ರೀಯ ಮಟ್ಟದಲ್ಲಿ  ನಿರೂಪಕನಾಗಿ ಹೊರಹೊಮ್ಮಿದ್ದಾರೆ. ಇತ್ತೀಚೆಗೆ ಮೊಗವೀರ್ಸ್ ಬೆಕರ್ರೈನ್ ನಲ್ಲಿ ನಡೆದ ಕಾರ್ಯಕ್ರಮದ ನಿರೂಪಣೆಯಲ್ಲಿ ಅಲ್ಲಿಯ ಜನರು ಇವರಿಗೆ ಅಭಿಮಾನದಿಂದ ಅಭಿನಂದಿಸಿರುತ್ತಾರೆ. “ಈ ಬದುಕೆ ಒಂದು ನಿರೂಪಣೆ” ಅಂದುಕೊಂಡಿರುವ ಇವರಿಗೆ ಇವರ ಮುಂದಿನ ಬದುಕಿಗೆ ನಿರೂಪಣೆಯ ಮೆರುಗು ಇನ್ನಷ್ಟು ರಂಜಿಸಲಿ ಎಂದು ಹಾರೈಸೋಣ.


ಟೀಮ್ ನಮ್ಮ ಬಿಲ್ಲವೆರ್

0 comments: