Friday, June 11, 2021

ಯುವ ಬಹುಮುಖ ಪ್ರತಿಭೆ ಸುಮಂತ್ ಪೂಜಾರಿ ಕಡಬ

 ಬಿಲ್ಲವ ಸಮಾಜದ ಯುವ ಪ್ರತಿಭೆಗಳಲ್ಲಿ ಸುಮಂತ್ ಪೂಜಾರಿ ಕಡಬ ಇವರು ಒಬ್ಬರು. ಕಡಬ ತಾಲೂಕಿನ ಸುಂದರ ಬಂಗೇರ ಮತ್ತು  ಶ್ರೀಮತಿ ಶಾಂತ ಇವರ  ಏಕೈಕ ಪುತ್ರ.  ಸಕಲ ಕಲಾ ವಲ್ಲಭನಾಗಿದ್ದು, ನಿರೂಪಣೆ,  ಡ್ಯಾನ್ಸ್,   ಅಭಿನಯದ ಜೊತೆಗೆ  ಯುವ ಬರಹಗಾರನು  ಆಗಿದ್ದಾರೆ. ವಿದ್ಯಾಭ್ಯಾಸದಲ್ಲಿಯೂ ಅತ್ಯುನ್ನತ ಸಾಧನೆ ಮಾಡಿದ್ದಾರೆ. ಪ್ರಾಥಮಿಕ ಶಿಕ್ಷಣದ  ಸಂದರ್ಭದಲ್ಲಿ ನಡೆದ ಜಿಲ್ಲಾ ಮಟ್ಟದ  "ಸಿರಿ ಕನ್ನಡ"   ಪರೀಕ್ಷೆಯಲ್ಲಿ ಜಿಲ್ಲೆಗೆ   ನಾಲ್ಕನೇ  ರಾಂಕ್  ಪಡೆದಿದ್ದಾರೆ. " ಕಿಂಗ್ಸ್ ಆಫ್ ಕೂರ್ಗ್ " ವತಿಯಿಂದ ನಡೆದ  ರಾಜ್ಯ ಮಟ್ಟದ " ನೃತ್ಯ ವೈಭದಲ್ಲಿ  ಭಾಗವಹಿಸಿ ಮೆಚ್ಚುಗೆ ಪಡೆದಿದ್ದಾರೆ.  ಕಾಲೇಜು ವಿಭಾಗದಲ್ಲಿ  ಜಿಲ್ಲಾಮಟ್ಟದ  ಪ್ರಬಂಧ ಸ್ಪರ್ಧೆಯಲ್ಲಿ  ತೃತೀಯ ಸ್ಥಾನ ಪಡೆದು  ಸರಕಾರಿ ಕಾಲೇಜು ನ  ಹೆಸರು ಉಳಿಸಿದ್ದಾರೆ. ಕಾಲೇಜು ಜೀವನದಲ್ಲಿ  ಅದೆಷ್ಟೋ  ಕಾರ್ಯಕ್ರಮ, ಸ್ಪರ್ಧೆಯಲ್ಲಿ ಭಾಗವಹಿಸಿ ಹೆಸರು ಗಳಿಸಿದ್ದಾರೆ. ದ್ವಿತೀಯ ಪಿಯುಸಿ  ಯಲ್ಲಿ  90%  ಅಂಕ ಪಡೆದು ಜೊತೆಗೆ  ಸಮಾಜ ಶಾಸ್ತ್ರ ವಿಷಯದಲ್ಲಿ  100 ಕ್ಕೆ  100 ಅಂಕ ಪಡೆದು  ಸರಕಾರಿ ಪದವಿ- ಪೂರ್ವ ಕಾಲೇಜುನಲ್ಲಿ  ದಾಖಲೆ ಬರೆದಿದ್ದಾರೆ. ಪ್ರಸ್ತುತ  "ಕುಡ್ಲ ಕುಸಲ್ " ತಂಡದ  ಸ್ಟೇಜ್ ಶೋ ನಲ್ಲಿ  ನಿರೂಪಣೆ  ಮಾಡುತ್ತಿದ್ದಾರೆ.  "ಭ್ರಮರಾಂಬಿಕೆ " ಮತ್ತು " ತನ್ನೋಜಿ ಶ್ರೀ  ಮಹಾಲಿಂಗೇಶ್ವರ " ಎಂಬ  2  ತುಳು  ಭಕ್ತಿಗೀತೆಯನ್ನು ಬರೆದಿದ್ದಾರೆ. 50 ಕ್ಕೂ  ಅಧಿಕ  ಸ್ಟೇಜ್ ಶೋಗಳಲ್ಲಿ  ನೃತ್ಯ ಪ್ರದರ್ಶನ ಮಾಡಿದ್ದಾರೆ. ಇವರ ಕೆಲವು ಲೇಖನ  ವಾರ್ತಾಪತ್ರಿಕೆಯಲ್ಲಿ  ಪ್ರಕಟಗೊಂಡಿರುವುದು. 4 ಕವನ ಸಂಕಲನವನ್ನು  ಬರೆದಿರುತ್ತಾರೆ. ಯಕ್ಷಗಾನ ನೃತ್ಯವನ್ನು  ಕಲಿತಿದ್ದಾರೆ.  ಸಾಮಾಜಿಕ ಜಾಲತಾಣದಲ್ಲಿ  ಇವರು  ಮಾಡಿದ  ವಿಡಿಯೋಗಳು  ಲಕ್ಷಾಂತರ ವೀಕ್ಷಣೆ ಪಡೆದು ಕೊಂಡಿವೆ. ಸಣ್ಣ ಅಭಿಮಾನಿ ಬಳಗವನ್ನು ಸಾಮಾಜಿಕ ಜಾಲತಾಣದಲ್ಲಿ ಹೊಂದಿದ್ದಾರೆ.  ಮಧ್ಯಮ ವರ್ಗದ ಕುಟುಂಬದಲ್ಲಿ  ಜನಿಸಿ, ಸರಕಾರಿ ಶಾಲೆಯಲ್ಲಿ  ಕಲಿತು, ಬಾಲ್ಯ ದಿಂದ  ಇಲ್ಲಿವರೆಗೂ  ಅದೆಷ್ಟೋ ಕಾರ್ಯಕ್ರಮ, ಸ್ಪರ್ಧೆಯಲ್ಲಿ ಭಾಗವಹಿಸಿ  ನೂರಾರು    ಬಹುಮಾನ, ಸನ್ಮಾನ ತಮ್ಮದಾಗಿಸಿ ಕೊಂಡಿದ್ದಾರೆ.ಇವರು ಮುಂದಿನ ದಿನಗಳಲ್ಲಿ ಕೂಡಾ ಹೆಚ್ಚಿನ ಸಾಧನೆ ಮಾಡಲಿ ಎಂದು ಆಶಿಸುವ ಟೀಮ್ ನಮ್ಮ ಬಿಲ್ಲವೆರ್







0 comments: