Saturday, June 12, 2021

ತುಳು ರಂಗಭೂಮಿಯ ಸವ್ಯಸಾಚಿ ಕಲಾವಿದ ಸತೀಶ್ ಪೂಜಾರಿ ನಾವೂರು.

 ತುಳು ರಂಗಭೂಮಿಯ ಸವ್ಯಸಾಚಿ ಕಲಾವಿದ ಸತೀಶ್ ಪೂಜಾರಿ ನಾವೂರು.. ತೆರೆಮರೆಯ ಪ್ರತಿಭೆ...

ಇವರು ಬಂಟ್ವಾಳ ತಾಲೂಕಿನ ನಾವೂರು ಗ್ರಾಮದ ಸೂರ ಯಕ್ಷಗಾನದ ನೇಪಥ್ಯ ಕಲಾವಿದ ದಿ|ಕೃಷ್ಣಪ್ಪ ಪೂಜಾರಿ ಮತ್ತು ಶ್ರೀಮತಿ ಚಂದ್ರವಾತಿ  ಯವರ ಮಗನಾಗಿ 1987ಏಪ್ರಿಲ್ 30ರಂದು ಜನಿಸಿದರು. ಪ್ರಾರ್ಥಮಿಕ ಶಿಕ್ಷಣವನ್ನು ಸಂತ ಜಾಕೋಬರ ಹಿರಿಯ ಪ್ರಾರ್ಥಮಿಕ ಶಾಲೆ ಫರ್ಲಾ ದಲ್ಲಿ ಮತ್ತು ಪ್ರೌಢ ಶಾಲಾ ಶಿಕ್ಷಣವನ್ನು ಸರಕಾರಿ ಪ್ರಾಢಶಾಲೆ ನಾವೂರಿನಲ್ಲಿ ಪಡೆದರು ಪ್ರಸ್ತುತ ಚಾಲಕ ವೃತ್ತಿಯಲ್ಲಿ ದುಡಿಯುತ್ತಿದ್ದಾರೆ....


ಸುದೀರ್ಘ 18 ವರ್ಷಗಳ ರಂಗಪಯಣ ರಂಗದ ಮಲ್ಲಣ್ಣೆ ರಂಗಗುರು"ಶಾಂತರಾಮ್ ಕಲ್ಲಡ್ಕ" ರವರ "ಕಣ್ಣೀರ್ದ ಬದ್ಕ್ " ನಾಟಕದ ಮೂಲಕ ರಂಗಭೂಮಿ ಪ್ರವೇಶ ಮಾಡಿ ನಟನೆಯಲ್ಲಿ ಗುರುಗಳಿಂದ ಮೆಚ್ಚುಗೆ ಪಡೆದು.. ನಂತರದ ದಿನಗಳಲ್ಲಿ ಗೆಳೆಯ ರಂಗಕಲಾವಿದ "ದಿನೇಶ್ ಸಾಲ್ಯಾನ್ ಕನಪಾದೆ"  ಯವರ  ಜತೆಗೂಡಿ  ಆಗಿನದಿನಗಳಿಲ್ಲಿ ಕಲಾಸಂಗಮದ ಖ್ಯಾತ ಕಲಾವಿದ "ರಂಗದರಸ ರಾಜೇಶ್ ಬಂಟ್ವಾಳ್" ಮೂಲಕ ರಂಗಭೂಮಿಯ ಅಪಾರ ಅನುಭವ ಪಡೆದು "ಪರತ್ತೆಟ್ ಪೊಸತ್ತುಂಡು" ನಾಟಕದ ಚಂದಪ್ಪ ನ ಪಾತ್ರದ ಮೂಲಕ ಅಪಾರ ಜನಮನ್ನನೆ ಪಡೆದು ರಂಗಭೂಮಿಯ ಅನೇಕ ಹಿರಿಯ ಕಲಾವಿದರಿಂದ ಪ್ರಶಂಸೆ ಪಡೆದರು.

ನಂತರ ಶ್ಯಾಮ್ ಚಿತ್ರಪುರ ಅವರ ತಂಡದಲ್ಲಿ ಪ್ರಥಮ ಬಾರಿಗೆ ಅತಿಥಿ ಕಲಾವಿದನಾಗಿ ಅಭಿನಯಿಸಲು ಅವಕಾಶ ಪಡೆದರು.. ನಂತರ "ದಿ.ದಿನೇಶ ಕಂಕನಾಡಿ"ಯವರ "ಆಸರೆ ಕಲಾವಿದೆರ್ ಕುಡ್ಲ " ತಂಡದಕಲಾವಿದನಾಗಿ ಯಮುನ ದಾನೆ ನಮುನೇ, ಬಲಿಪು ವಿಠಲ ಬಲಿಪು ನಾಟಕದಲ್ಲಿ ಅಭಿನಯಿಸಿ ಮಿಂಚಿದರು.. "ಪುರುಷೋತ್ತಮ್ ಕೊಯಿಲ" ಇವರ "ತೆಲಿಕೆದ ಕಲಾವಿದೆರ್ ಕೊಯಿಲ" ತಂಡದಲ್ಲಿ ನಾಲ್ಕು ವರ್ಷಗಳಿಂದ ಪ್ರಮುಖ ಕಲಾವಿದನಾಗಿ ಅಭಿಹಿಸುತ್ತಿದ್ದಾರೆ... ಸುಮಾರು 40 ಕ್ಕೂ ಹೆಚ್ಚು ನಾಟಕಗಳಲ್ಲಿ  ನಟಿಸಿರುವ ಇವರು

ಬಂಟ್ವಾಳ ತಾಲೂಕು ಮಟ್ಟದಲ್ಲಿ ಇವರು ಅಭಿನಯಿಸಿದ ನಾಲ್ಕು ನಾಟಕಗಳು ಪ್ರಶಸ್ತಿಯನ್ನು ಪಡೆದಿವೆ.. ಸುರೇಶ್ ಕುಲಾಲ್ ಬಿ.ಸಿರೋಡ್ ನಿರ್ದೇಶನದ "ನಿಕುಲ್ ಎನ್ನಿಲೆಕತ್ತ್" ನಾಟಕದಲ್ಲಿ ಉತ್ತಮ ಹಾಸ್ಯನಟ ಪ್ರಶಸ್ತಿ ಹಾಗೂ ದಿನೇಶ್ ಸಾಲಿಯಾನ್ ನಿರ್ದೇಶನದ "ಬಲಿಪುಗನ" ನಾಟಕದಲ್ಲಿ ಉತ್ತಮ ಹಾಸ್ಯನಟಿ ಪ್ರಶಸ್ತಿ ಪಡೆದಿರುತ್ತಾರೆ..  ಯಾವುದೇ ಪಾತ್ರಕ್ಕೂ ಸೈ ಎನಿಸಿರುವ ಸತೀಶ್ ಪೂಜಾರಿ "ಚಾ ಪರ್ಕ "ತಂಡದ ಸುರೇಶ್ ಕುಲಾಲ್ ಬಿ. ಸಿ ರೋಡ್ ಅವರ ನಿರ್ದೇಶನದಲ್ಲಿ  ರಮಾ ಬಿ. ಸಿ ರೋಡ್, ಸದಾಶಿವ ಅಮೀನ್, ತಿಮ್ಮಪ್ಪ ಕುಲಾಲ್ ಬಿ. ಸಿ ರೋಡ್,ಸತೀಶ್ ಕಜೆಕಾರ್ ಇಂತಹ ಹಲವು ಪ್ರಭುದ್ಧ ರಂಗನಟರೊಂದಿಗೆ ಅಭಿನಯಿಸಿ ಅವರಿಂದ ಪ್ರಶಂಸೆ ಪಡೆದಿರುತ್ತಾರೆ... ಇಂತಹ ಕಲಾವಿದನಿಗೆ ಇನ್ನಷ್ಟು ಅವಕಾಶಗಳು ಒದಗಿ ಬರಲಿ ರಂಗಭೂಮಿಯಲ್ಲಿ ಹೊಳೆಯುವ ನಕ್ಷತ್ರವಾಗಲಿ ಅನ್ನೋದೇ ನಮ್ಮ ಆಶಯ...

0 comments: