ನಾವು ಇಂದು ಪರಿಚಯಿಸುತ್ತಿರುವ ಯುವ ಸಾಧಕಿಯೇ ಶ್ವೇತಾ ಪೂಜಾರಿ
ತನ್ನ ಕಿರಿಯ ವಯಸ್ಸಿನಲ್ಲಿಯೇ ರಾಜಕೀಯ ಜೀವನದಲ್ಲಿ ಸಾಧನೆ ಮಾಡುತ್ತಿರುವ ಯುವ ಸಾಧಕಿ ಶ್ವೇತಾ ಪೂಜಾರಿ... ಮಂಗಳೂರು ಸುರತ್ಕಲ್ ನಿವಾಸಿಯಾಗಿರುವ ಟಿ.ಎಚ್ ಆನಂದ್ ಹಾಗೂ ಸುಶೀಲಾ ಇವರ ಸುಪುತ್ರಿಯಾದ ಇವರು ಕಲಿತದ್ದು ಬಿ.ಎ ಹಾಗೂ ಬಿ.ಎಡ್..ಗೋವಿಂದಾಸ್ ಹಾಗೂ ಕರಾವಳಿ ಕಾಲೇಜಿನಲ್ಲಿ ಪೂರ್ಣಗೊಳಿಸಿದರು...ಕಾಲೇಜಿನಿಂದಲೇ ರಾಜಕೀಯ ಜೀವನದಲ್ಲಿ ಒಲವು ಇದ್ದ ಇವರು ಪ್ರಸ್ತುತವಾಗಿ ಬಿಜೆಪಿ ಪಕ್ಷದಲ್ಲಿ ಯುವ ಮೋರ್ಚಾ ರಾಜ್ಯ ಕಾರ್ಯದರ್ಶಿಯಾಗಿ ಹಾಗೂ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ಸುರತ್ಕಲ್ ಪೂರ್ವ ಎರಡನೆ ವಾರ್ಡ್ ನ ಕಾರ್ಪೊರೇಟ್ ಆಗಿ ಸೇವೆ ಸಲ್ಲಿಸುತ್ತಿರುವ ಇವರು ಉಡುಪಿ ಹಾಗೂ ಉತ್ತರ ಕನ್ನಡ ಯುವ ಮೋರ್ಚಾದ ಪ್ರಭಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ..ಕೇರಳ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಎಲ್ಲರಿಗಿಂತ ಮುಂಚೂನಿಯಲ್ಲಿ ಚುನಾವಣಾ ರ್ಯಾಲಿ ಯಲ್ಲಿ ಭಾಗವಹಿಸುತ್ತಿದ್ದರು.ಕೊರೊನಾದಂತಹ ಕಠಿಣ ಸಮಯದಲ್ಲಿ ಮನೆ ಮನೆಗೆ ಪಿಪಿಟಿ ಕಿಟ್ ಧರಿಸಿ ಅಗತ್ಯ ವಸ್ತುಗಳ ಕಿಟ್ ವಿತರಿಸಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು..ಕೇವಲ ರಾಜಕೀಯ ಮಾತ್ರವಲ್ಲದೆ ಸಾಮಾಜಿಕ ಸೇವೆಯಲ್ಲಿ ಕೂಡಾ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಇವರು ಇನ್ನಷ್ಟು ಉನ್ನತ ಹುದ್ದೆಗೆ ಏರಲಿ ದೈವ ದೇವರುಗಳ ಆಶೀರ್ವಾದ ಸದಾ ಇರಲಿ ಎಂಬುದು ನಮ್ಮ ಆಶಯ...
ಟೀಮ್ ನಮ್ಮ ಬಿಲ್ಲವೆರ್
0 comments: