Friday, June 11, 2021

ರಂಗಭೂಮಿಯಲ್ಲಿ ಮಿಂಚುತ್ತಿರುವ ಬಹುಮುಖ ಪ್ರತಿಭೆ ದಿನೇಶ್ ಸಾಲಿಯಾನ್ ಕನಪಾದೆ

 #ರಂಗಭೂಮಿಯಲ್ಲಿ ಮಿಂಚುತ್ತಿರುವ ಬಹುಮುಖ ಪ್ರತಿಭೆ ದಿನೇಶ್ ಸಾಲಿಯಾನ್ ಕನಪಾದೆ#








ಬರಹ:-ಶ್ರವಣ್ ಬಿ.ಸಿ.ರೋಡ್

ರಂಗಭೂಮಿ ಎಂದು ತಕ್ಷಣ ನೆನಪಿಗೆ ಬರುವುದು ಕರಾವಳಿ ಭಾಗ.ತುಳು ರಂಗಭೂಮಿ ಹಲವಾರು ವಿಶೇಷತೆಗಳ ಮೂಲಕ ಹೆಸರುವಾಸಿಯಾಗಿದೆ.ಇಂತಹ ತುಳು ರಂಗಭೂಮಿಯ ಬಹುಮುಖ ಪ್ರತಿಭೆ ದಿನೇಶ್ ಸಾಲಿಯಾನ್ ಕನಪಾದೆ.ಯುವ ರಂಗನಿರ್ದೇಶಕ,ನಾಟಕ ರಚನೆಗಾರ,ನಿರೂಪಕ,ಚಿತ್ರಕಲಾವಿದನಾಗಿ ಗುರುತಿಸಿಕೊಂಡಿರುವ ಇವರು

 ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡು ಇವರಿಗೆ ತಾಯಿಯೇ ಕುಟುಂಬದ ಆಧಾರ ಸ್ತಂಭವಾಗಿ ನಿಲ್ಲುತ್ತಾರೆ. ಬಡತನದಲ್ಲಿ ಬೆಳೆದ ಇವರು.

 4 ನೇ ತರಗತಿಯಲ್ಲಿ "ಏಕಲವ್ಯ" ನಾಟಕದಲ್ಲಿ ಏಕಲವ್ಯನ ಪಾತ್ರದ ಮೂಲಕ ಮೊದಲು ಬಣ್ಣ ಹಚ್ಚಿದರು.ಅಂದಿನಿಂದ ಕಲಾವಿದನಾಗಬೇಕೆಂಬ ಆಸೆ ಮೂಡಿತು.ನಂತರ ರಂಗಭೂಮಿಯ ದಿಗ್ಗಜ ನಟರ ಪೈಕಿ "ರಂಗದರಸ" ಬಿರುದಾಂಕಿತ ದಿ|ರಾಜೇಶ್ ಬಂಟ್ವಾಳ ಇವರ ಶಿಷ್ಯನಾಗಿ ನಟನೆಯಲ್ಲಿ ಅಪಾರ ಅನುಭವನ್ನು ಪಡೆದ ಬಳಿಕ  ತಾವೇ ಬರೆದ "ಗಂಗಜ್ಜಿಗ್ ಗತಿಜ್ಜಿ" ನಾಟಕದ ಮೂಲಕ ತುಳು ರಂಗಭೂಮಿ ಪ್ರವೇಶ ಮಾಡಿದರು. ನಂತರ ಹಲವಾರು ನಾಟಕಗಳಲ್ಲಿ ರಾಜೇಶ್ ಬಂಟ್ವಾಳರವರ ಜೊತೆ ಹೋಗಿ, ಅಭಿನಯಿಸಿ ತಾವೇ ರಚಿಸಿದ ಮೂರನೆಯ ನಾಟಕ "ಪರತ್ತೆಟ್ ಪೊಸತ್ತುಂಡು",  "ರಂಗಗುರು" ರಾಜೇಶ್ ಬಂಟ್ವಾಳರವರ ನಿರ್ದೇಶನದಲ್ಲಿ ಮೂಡಿಬಂದ ಈ ನಾಟಕವು ಬಂಟ್ವಾಳ ನಾಟಕೋತ್ಸವದಲ್ಲಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.. "ಗಂಗಜ್ಜಿಗ್ ಗತಿಜ್ಜಿ" "ಪನಿಯರೊರಿ ಕೇನಿಯರೊರಿ", "ಪುಲ್ಲಿಡ್ದ್ ಬಲ್ಲಿ" ,"ಪರತ್ತೆಟ್ ಪೊಸತ್ತುಂಡು", ಗುರುವಪ್ಪಗ್ ಗುರುವಾರ" ಇವರ ರಚನೆಯ ನಾಟಕಗಳು  "ದೇಗುಲ", "ಅಮ್ಮಾ", "ಬರವುದ ಪಿರವು" ಕಿರುನಾಟಕಗಳು ಪ್ರಸ್ತುತ ಕಲಾನಿಧಿ ಕಲಾವಿದರು ನಾವೂರು ತಂಡದ ನಿರ್ದೇಶಕನಾಗಿ, ಕಲಾವಿದನಾಗಿ ರಂಗಸೇವೆಯನ್ನು ಮಾಡುತ್ತಿದ್ದಾರೆ. 

 ಇದರ ಜೊತೆ ಬಲೆತೆಲಿಪಾಲೆ ಹಾಗೂ ಕಾಮಿಡಿ ಪ್ರೀಮಿಯರ್ ಲೀಗ್ ಗಳಲ್ಲಿ ಭಾಗವಹಿಸಿ  ಹಾಗೂ "ವಿಧಾತ್ರಿ ಕುಡ್ಲ" ತಂಡದ ಕಲಾವಿದನಾಗಿ ಉತ್ತಮ ನಟನೆಯ ಮೂಲಕ ಜನಮನ ಗೆದ್ದಿದ್ದಾರೆ.ಹಲವಾರು ಶಾಲೆ ಕಾಲೇಜುಗಳಿಗೆ ತೆರಳಿ ಯಾವುದೇ ಹಣ ಪಡೆಯದೆ ಉಚಿತವಾಗಿ ಮಕ್ಕಳಿಗೆ ರಂಗ ತರಬೇತಿ ನೀಡಿ ತುಳು ರಂಗಭೂಮಿಯ ಬೆಳವಣಿಗೆಗೆ ಶ್ರಮಿಸುತ್ತಿದ್ದಾರೆ.ನಿಮ್ಮ ಮಾರ್ಗದರ್ಶನದಲ್ಲಿ ಹಲವಾರು ಕಲಾವಿದರು ರಂಗಭೂಮಿಯಲ್ಲಿ ರಾರಾಜಿಸಲಿ..ನಿಮ್ಮ ರಂಗಭೂಮಿಯ ಸಾಧನೆ ಹೀಗೆ ಮುಂದುವರಿಯಲ್ಲಿ ಎಂಬುದು ನಮ್ಮ ಆಶಯ..

ಟೀಮ್ ನಮ್ಮ ಬಿಲ್ಲವೆರ್.

0 comments: