ಚಂದನವನದಲ್ಲಿ ಮಿಂಚುತ್ತಿರುವ ತುಳುನಾಡಿನ ಕರಾವಳಿ ತೀರದ ಬಹುಭಾಷಾ ನಟಿ #ಚಿರಶ್ರೀ ಅಂಚನ್ #
✒️#ಕೀರ್ತನ ಸನಿಲ್#
ತುಳುನಾಡಿನ ಕರಾವಳಿ ತೀರವೇ ಅಧ್ಭುತ. ಇಲ್ಲಿನ ಆಚಾರ, ವಿಚಾರ, ಸಂಸ್ಕೃತಿ, ಪದ್ಧತಿಗಳೇ ವಿಭಿನ್ನ. ಇಲ್ಲಿನ ಅವೆಷ್ಟೋ ಪ್ರತಿಭೆಗಳು ಕಲೆ,ನಟನೆ, ನೃತ್ಯ ಎಂಬೆಲ್ಲಾ ಒಂದಲ್ಲ ಒಂದು ಕ್ಷೇತ್ರದಲ್ಲಿ ಎಲೆ ಮರೆಯ ಕಾಯಿಯಂತೆ ಚಿಗುರೊಡೆಯುತ್ತಾ ಬರುತ್ತಿರುವುದನ್ನು ನಾವು ಇತ್ತೀಚೆಗೆ ನೋಡುತ್ತಾ ಬರುತ್ತಿದ್ದೇವೆ. ಅಂತವರ ಸಾಲಿನಲ್ಲಿ ಮಿನುಗುತ್ತಿರುವ ಇನ್ನೋರ್ವ ಪ್ರತಿಭೆಯೇ ಸುಂದರ ಮುಖಚರ್ಯೆಯನ್ನು ಒಳಗೊಂಡ, ಗುಂಡು ಮೊಗದ ಹಾಲು ಗೆನ್ನೆಯ ಸುಂದರಿ, ಸಮಾಜ ಸೇವಕಿ, ನಟನಾ ಕ್ಷೇತ್ರದಲ್ಲಿ ಎಲ್ಲರನ್ನು ಮೂಕವಿಸ್ಮಿತ ರನ್ನಾಗಿಸುವಂತಹ ಅದ್ಭುತ ನಟನೆಗೈದು ತುಳು, ಕನ್ನಡ, ತೆಲುಗು, ತಮಿಳು ಚತುರ್ಥ ಭಾಷಾ ಚಲನಚಿತ್ರದಲ್ಲಿ ಮಿಂಚುತ್ತಿರುವ ಬಹುಭಾಷಾ ತಾರೆ #ಚಿರಶ್ರೀ ಅಂಚನ್ #
ಕರಾವಳಿ ತೀರದ ಹಳೆಯಂಗಡಿ ಪ್ರದೇಶದ ದಿವಂಗತ ಮಧುಸೂಧನ್ ಅಂಚನ್ ಮತ್ತು ಅಮ್ಮ ಪೂರ್ಣಿಮ ಮಧು ಇವರ ಇಬ್ಬರು ಮಕ್ಕಳಲ್ಲಿ ಪುತ್ರ ಚಿರಂಜೀವಿ ಅಂಚನ್ ಮತ್ತು ಮುದ್ದಿನ ಸುಪುತ್ರಿಯೇ # ಚಿರಶ್ರೀ ಅಂಚನ್ #
ಚಿಕ್ಕoದಿನಿಂದಲೇ ಕಲಾಕ್ಷೇತ್ರದಲ್ಲಿ ಅಭಿರುಚಿ, ಆಸಕ್ತಿ ಹೊಂದಿದ ಇವರು ಇಂದು ಅವೆಷ್ಟೋ ಚಲನಚಿತ್ರಗಳಲ್ಲಿ ನಾಯಕಿ ಪಾತ್ರಕ್ಕೆ ಬಣ್ಣ ಹಚ್ಚಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಪವಿತ್ರ", "ರಾಂಬಾರೂಟಿ", "ಕರ್ಣೇ" ಎನ್ನುವ ತುಳು ಚಲನಚಿತ್ರದಲ್ಲಿ ನಾಯಕಿ ಪಾತ್ರಕ್ಕೆ ಜೀವ ತುಂಬಿ ಪ್ರೇಕ್ಷಕರ ಮನ ಗೆದ್ದು ಸೈ ಎನಿಸಿ ಕೊಂಡಿದ್ದಾರೆ.ಕೇವಲ ತುಳು ಭಾಷೆಯ ಚಿತ್ರದಲ್ಲಿ ಮಾತ್ರ ಬಣ್ಣಹಚ್ಚಿದ್ದಲ್ಲದೇ ಕನ್ನಡ ಭಾಷೆಯ "ಕಲ್ಪನಾ 2", ಹುಲಿರಾಯ ", ಉಡುoಬ", "ಕಲಿವೀರ "ಎನ್ನುವ ಚಲನಚಿತ್ರಗಳಲ್ಲಿ ಬಣ್ಣ ಹಚ್ಚಿ ಕನ್ನಡಿಗರ ಹೊಗಳಿಕೆಗೆ ಪಾತ್ರರಾಗಿದ್ದಾರೆ. ಅಷ್ಟು ಮಾತ್ರವಲ್ಲದೇ ರಾಜ್ಯ ಬಿಟ್ಟು ಇನ್ನೊಂದು ರಾಜ್ಯಕ್ಕೆ ತೆರಳಿ ಅಲ್ಲಿಯೂ "ಆಮೆ ಅತಡಿತೆ ", ಡುಬಟ್ಲೂ", "ಮಿನ್ನಾಗು " ಎನ್ನುವ ತೆಲುಗು ಭಾಷೆಯ ಚಲನಚಿತ್ರದಲ್ಲಿ ನಟನೆಗೈದ ಅದ್ಭುತ ನಟಿ. ತಮಿಳಿನ "ಆಗವನ್"ಎಂಬ ಒಂದು ಚಲನಚಿತ್ರದಲ್ಲಿ ನಾಯಕಿ ಪಾತ್ರಕ್ಕೆ ಜೀವ ತುಂಬಿ ತಮಿಳರ ಅಭಿಮಾನಕ್ಕೆ ಭಾಜನರಾಗಿದ್ದಾರೆ. ತನ್ನ ನಟನೆಯ ಮೂಲಕ ರಾಜ್ಯದಾದ್ಯoತ ಅವೆಷ್ಟೋ ಅಭಿಮಾನಿಗಳನ್ನೊಳಗೊoಡ ಅದ್ಭುತ ನಟಿ. ಇವರ ನಟನೆಯನ್ನು ಗುರುತಿಸಿ ಮುಕ್ತ TV ಯವರು ಆಯೋಜಿಸಿದ viewers choice best actress awardನ್ನು ತನ್ನದಾಗಿಸಿಕೊಂಡದ್ದು ಮಾತ್ರವಲ್ಲದೇ, "Red FM best actress award "ನ್ನು ತನ್ನ ಮುಡಿಗೆರಿಸಿಕೊಂಡ ಅದ್ಭುತ ಕಲಾ ಪ್ರತಿಭೆ. ತಾನು ಒಬ್ಬಳು ನಟಿಯಾಗಿ ಕೇವಲ ನಟನೆಯಲ್ಲಿ ಮಾತ್ರ ತನ್ನನ್ನು ತೊಡಗಿಸಿಕೊಳ್ಳದೆ ಸಮಾಜಿಕ ಕಳಕಳಿಯನ್ನು ಹೊತ್ತು ಇತ್ತೀಚೆಗೆ ಕೊರೊಪಾ ಎನ್ನುವ ಮಹಾಮಾರಿಯಿಂದ ಇಡೀ ಜಗತ್ತೆ ತತ್ತರಿಸಿ ಹೋದ ಈ ಲಾಕ್ಡೌನ್ ಸಮಯದಲ್ಲಿ ಬೀದಿ ಬದಿಯಲ್ಲಿ ವಾಸವಾಗಿರುವ ಜನರಿಗೆ ಆಹಾರಗಳ್ಳನ್ನು ಪೂರೈಸಿ ಅವರ ಹಸಿವನ್ನು ನೀಗಿಸಿದ ಪುಣ್ಯಾತ್ಮರೆಂದೆನಿಸಿ ಕೊಂಡಿದ್ದಾರೆ.
ಚಿರಶ್ರೀ ಅಂಚನ್ ಇವರ ಕಲಾಮಾತೆಯ ಸೇವೆಯು ನಿತ್ಯನಿರಂತರವಾಗಿರಲಿ, ಇವರ ಹೆಸರು ರಾಷ್ಟ್ರ ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚಲಿ, ಮಗದಷ್ಟು ಅವಕಾಶಗಳು ಇವರ ಪಾಲಿಗೆ ಒದಗಿ ಬಂದು ಇನ್ನಷ್ಟು ಚಿತ್ರಗಳಲ್ಲಿ ಬಣ್ಣಹಚ್ಚಲಿ , ಇವರ ಸಮಾಜ ಸೇವೆಯು ಹೀಗೆಯೇ ಮುಂದುವರಿಯಲಿ ಎಂದು ಆಶಿಸುತ್ತಾ ಇವರ ಮೇಲೆ ಶ್ರೀ ದೈವ ದೇವರ, ಹಿರಿಯರ, ಅಭಿಮಾನಿಗಳ ಆಶೀರ್ವಾದ ಸದಾ ಇರಲಿ... ಇವರ ಸಾಧನೆಯ ಗರಿಯ ಕಂಪು ಶಿಖರಕ್ಕೆರಲಿ ಎಂದು ಹಾರೈಸೋಣ.
ಟೀಮ್ ನಮ್ಮ ಬಿಲ್ಲವೆರ್
0 comments: