Monday, June 14, 2021

ರಂಗಭೂಮಿ ಕ್ಷೇತ್ರದಲ್ಲಿ ಮಿಂಚುತ್ತಿರುವ ಯುವ ಪ್ರತಿಭೆ ಅಶ್ವಿನಿ ಸುವರ್ಣ..

 #ರಂಗಭೂಮಿ ಕ್ಷೇತ್ರದಲ್ಲಿ ಮಿಂಚುತ್ತಿರುವ ಯುವ ಪ್ರತಿಭೆ ಅಶ್ವಿನಿ ಸುವರ್ಣ..#







✍🏻ಶ್ರವಣ್ ಬಿ.ಸಿ.ರೋಡ್..


ತುಳುರಂಗಭೂಮಿ ಅದೆಷ್ಟೋ ಕಲಾವಿದರ ಜೀವಾಳ ತುಳುರಂಗಭೂಮಿಯಲ್ಲಿ ನಟಿಸಿ  ಇಂದಿಗೂ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದ್ದಾರೆ.ಅಧ್ಧುತ ಕಲಾವಿದರನ್ನೂ ತುಳುನಾಡಿಗೆ ಪರಿಚಯಿಸಿದ ಖ್ಯಾತಿ ತುಳುರಂಗಭೂಮಿಗೆ ಇದೆ..ಇಂತಹ  ತುಳುರಂಗಭೂಮಿಯಲ್ಲಿ ಮಿಂಚುತ್ತಿರುವ ಪ್ರತಿಭೆ ಅಶ್ವಿನಿ ಸುವರ್ಣ..

ಮಂಗಳೂರಿನ ಸುರತ್ಕಲ್ ವಿಜಯ ನಗರ ಮಧ್ಯ ನಿವಾಸಿಯಾದ ಇವರು. ಗಣೇಶ್ ಪೂಜಾರಿ ಮತ್ತು ರಾಜೀವಿ ದಂಪತಿಗಳ ಸುಪ್ರುತಿ. ಬಾಲ್ಯ ಜೀವನದಲ್ಲೇ ನೃತ್ಯದ ಬಗ್ಗೆ ಆಸ್ತಕಿ ಇದ್ದ ಇವರಿಗೆ. ಶಾಲಾದಿನಗಳಲ್ಲಿ ನೃತ್ಯದ ಮೂಲಕ ವೇದಿಕೆ ಹತ್ತಿದ ಇವರನ್ನೂ ನಟನಾ ಕ್ಷೇತ್ರ ಕೈ ಚಾಚಿ ಕರೆಯಿತು. ಪ್ರೌಢ ಶಿಕ್ಷಣದ ಸಮಯದಲ್ಲಿ ನಾಟಕದ ಮೂಲಕ ಬಣ್ಣ ಹಚ್ಚಿ ನಟಿಸಲು ಆರಂಭಿಸಿದ ಇವರು. ಇದೇ ಮುಂದೆ ತುಳುರಂಗಭೂಮಿಯಲ್ಲಿ ನಟನೆಗೆ ಅಡಿಪಾಯವಾಯಿತು.ಇವರು ರಂಗಭೂಮಿಯ ಗುರುವಿನ ಸ್ಥಾನವನ್ನು ವಿಶೇಷವಾಗಿ ತಂದೆಗೆ ನೀಡುತ್ತಾರೆ. ತಂದೆಯ ಸಂಪೂರ್ಣ ಸಹಕಾರದಿಂದ ರಂಗಭೂಮಿಯಲ್ಲಿ ಅಭಿನಯಿಸಲು ಸಾಧ್ಯವಾಯಿತು ಎನ್ನುತ್ತಾರೆ..

 ಕಾಲೇಜ್ ಜೀವನದಲ್ಲಿ ಪ್ರಥಮವಾಗಿ ತುಳುರಂಗಭೂಮಿಗೆ ಕಾಲ್ಲಿಟ್ಟ ಇವರು ಮಧು ಬಂಗೇರ ಕಲ್ಲಡ್ಕ ಇವರ "ತುಳುವೆರ್ ತುಡರ್" ಸುರತ್ಕಲ್ ತಂಡದ "ಯೆರ್ ಉಲ್ಲೆರ್ ಈ ಇಲ್ಲಡ್" ಇವರ ಮೊದಲ ನಾಟಕವಾಗಿದೆ.ನಂತರ ಇದೇ ತಂಡದ "ಕೊಪ್ಪರಿಗೆ","ಶಾಂತಿನಗರ 2nd ಕ್ರಾಸ್","ಈನಿ ಅತ್ತ್ಂಡ ಎಲ್ಲೆ","ಏರ್ನಬಂಗಾರ್", ನಾಟಕಗಳಿಗೆ ಬಣ್ಣ ಹಚ್ಚಿ ಸೈ ಎನಿಸಿಕೊಂಡಿದ್ದಾರೆ. 4 ವರ್ಷ ಈ ತಂಡದಲ್ಲಿ ನಟಿಸಿ.ನಂತರ ಸಾಯಿಕಲಾವಿದೆರ್ ತಂಡದ "ಬಲಿಪು ವಿಠಲ ಬಲಿಪು", ಮತ್ತು  ರಾಜಶ್ರೀ ಕಲಾವಿದೆರ್ ತಂಡದ "ನಟ್ಟುನಾಯೆ" ನಾಟಕದಲ್ಲಿ ಅಭಿನಯಿಸಿ V4 ವಾಹಿನಿಯಲ್ಲಿ ಪ್ರಸಾರವಾಗುವ ಜನಪ್ರಿಯ ರಿಯಾಲಿಟಿ ಶೋ ಕಾಮಿಡಿ ಪ್ರೀಮಿಯರ್ ಲೀಗ್ ಈ ತಂಡದಲ್ಲಿ ನಟಿಸಿ ಈ ತಂಡ ಅಂತಿಮ ಹಂತ ತಲುಪಿದೆ.. ಪ್ರಸ್ತುತ "ಬಲೆ ತೆಲಿಪಾಲೆ" ಖ್ಯಾತಿಯ ಸಂದೀಪ್ ಶೆಟ್ಟಿ ಇವರ ನಿರ್ದೇಶನದ  ರಮೇಶ್ ಶೆಟ್ಟಿ ಮಿಜಾರ್ ಇವರ ನೇತೃತ್ವದ ಕಲಾಶ್ರೀ ಕಲಾವಿದೆರ್ ಬೆದ್ರ ತಂಡದ "ಉಲಾಯಿ ಲೆಪ್ಪುಗ"& "ನಾಲಯಿ ಮಗುರುಜಿ" ನಾಟಕಗಳಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.. 

ನಿಮ್ಮ ಕಲಾಮಾತೆಯ ಸೇವೆ ಹೀಗೆ ಮುಂದುವರಿಯಲ್ಲಿ..ರಂಗಭೂಮಿಯಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಿ ಎಂಬುದು ನಮ್ಮ ಆಶಯ..

ಟೀಮ್ ನಮ್ಮ ಬಿಲ್ಲವೆರ್

0 comments: