Monday, June 14, 2021

 ನಾವು ಇಂದು ಪರಿಚಯಿಸುತ್ತಿರುವ ನಟನಾ ಕ್ಷೇತ್ರದಲ್ಲಿ ಚಿಗುರುತ್ತಿರುವ ಯುವ ಪ್ರತಿಭೆ ಮೂಲ್ಕಿಯ ದಿವ್ಯಾ ಪೂಜಾರಿ

ಅದೆಷ್ಟೋ ಯುವ ಪ್ರತಿಭೆಗಳು ತುಳುನಾಡಿನಲ್ಲಿ ನಟನಾ ಕ್ಷೇತ್ರದಲ್ಲಿ ಸಾಧನೆ ಮಾಡಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿರುವ ಸಾಧಕರಿದ್ದಾರೆ. ಅಂತೆಯೇ ತಾನು ಕೂಡಾ ನಟನೆಯ ಮೂಲಕ ಜನರ ಮನಸ್ಸಿಗೆ ಹತ್ತಿರವಾಗಬೇಕೆಂಬ ಉದ್ದೇಶದಿಂದ ನಟನಾ ಕ್ಷೇತ್ರದಲ್ಲಿ ಅಂಬೆಗಾಲಿಡುತ್ತಿರುವ ಯುವ ಪ್ರತಿಭೆ ದಿವ್ಯಾ ಪೂಜಾರಿ.ಮೂಲ್ಕಿ ಯ ದಿ.ರಮೇಶ್ ಬಂಗೇರಾ ಹಾಗೂ ಪ್ರೇಮ ಪೂಜಾರಿಯವರ ಮಗಳಾದ ಇವರು ಪ್ರಸ್ತುತ ವಿಜಯ ಕಾಲೇಜಿನ ಬಿಸಿಎ ದ್ವಿತೀಯ ವಿಭಾಗದ ವಿಧ್ಯಾರ್ಥಿನಿ...ಬಾಲ್ಯದಿಂದಲೇ ಎಲ್ಲಾ ಚಟುವಟಿಕೆಗಳಲ್ಲಿ ಮುಂದಿರುತ್ತಿದ್ದುದು ನಟನೆಗೆ ಬರಲು ಸಹಕಾರಿಯಾಗಿತ್ತು...ನಟನೆ ಮಾತ್ರವಲ್ಲದೆ ನೃತ್ಯ, ಮಾಡೆಲಿಂಗ್ ಕೂಡಾ ಮಾಡುತ್ತಿರುವ ಇವರು.‌ಇತ್ತೀಚೆಗೆ ಬಿಡುಗಡೆಗೊಂಡ ಐತ ಎಂಬ ತುಳು ಆಲ್ಬಮ್ ಹಾಡಿನಲ್ಲಿ ನಟಿಸಿ ಸೈ ಎನಿಸಿಕೊಂಡಿರುತ್ತಾರೆ.. ಶಾರ್ಟ್ ಮೂವಿಗಳಲ್ಲಿ ಕೂಡಾ ನಟಿಸಿರುವ ಇವರು ಇನ್ನಷ್ಟೇ ಬಿಡುಗಡೆಗೊಳ್ಳಬೇಕಾಗಿದೆ...ಇನ್ನಷ್ಟು ಹೆಚ್ಚಿನ ಸಾಧನೆ ಇವರಿಂದ ಮೂಡಿಬರಲಿ ಎಲ್ಲಾ ದೈವ ದೇವರ ಆಶೀರ್ವಾದ ಇವರ ಮೇಲಿರಲಿ ಎಂದು ಆಶಿಸುವ ಟೀಮ್ ನಮ್ಮ ಬಿಲ್ಲವೆರ್


0 comments: