Friday, June 25, 2021

ಕನ್ನಡ ಕಿರುತೆರೆ ಲೋಕದಲ್ಲಿ ಸದ್ದು ಮಾಡುತ್ತಿರುವ ಭವ್ಯಶ್ರೀ ಪೂಜಾರಿ

 #ಕನ್ನಡ ಕಿರುತೆರೆ ಲೋಕದಲ್ಲಿ ಸದ್ದು ಮಾಡುತ್ತಿರುವ ಭವ್ಯಶ್ರೀ ಪೂಜಾರಿ#


✍🏻ಶ್ರವಣ್ ಬಿ.ಸಿ.ರೋಡ್


ಬಣ್ಣದಲೋಕ ಎಂಬ ಮಾಯಜಗತ್ತಿಗೆ ಯುವಸಮೂಹ ಮಾರುಹೋಗುವುದು ಸಹಜ.ನಟ ನಟಿ ಆಗಬೇಕು ಕನಸು ಕಂಡವರು ಪೈಕಿ ಇವರು ಕೊಂಚ ಭಿನ್ನ ಖಳನಾಯಕಿಯ ಪ್ರಾತದಲ್ಲಿ ಮಿಂಚಬೇಕು ಎಂಬ ಆಶಯದೊಂದಿಗೆ ಬಣ್ಣದ ಬದುಕು ಆರಂಭಿಸಿದ ಇವರೇ ಭವ್ಯಶ್ರೀ ಪೂಜಾರಿ.ಬಾಲ್ಯದಲ್ಲೇ ಕುಟುಂಬದ ಆಧಾರಸ್ತಂಭವಾದ ತಂದೆಯನ್ನು ಕಳೆದು ಕೊಂಡ ಇವರಿಗೆ ತಾಯಿಯ ಮಾರ್ಗದರ್ಶನ ಒಂದೇ ಸ್ಥೂತಿ. ಬಾಲ್ಯಜೀವನದಲ್ಲಿ ಭರತನಾಟ್ಯ, ಯಕ್ಷಗಾನ, ನಟನೆ ಹೀಗೆ ಸಾಂಸ್ಕೃತಿಕ ರಂಗದಲ್ಲಿ ವಿಶೇಷ ಒಲವು. ಇದರ ಜೊತೆ ದೃಶ್ಯ ಕಲೆಯಲ್ಲಿ ಎರಡು ವರ್ಷ ಪದವಿ ಪಡೆದು ಸದ್ಯ ದೂರ ಶಿಕ್ಷಣದ ಮೂಲಕ ಬಿ.ಎ ಪದವಿ ಪಡೆಯುತ್ತಿದ್ದಾರೆ.  ಇವರು ಪ್ರಥಮವಾಗಿ "ಕಮಲಿ" ಧಾರವಾಹಿಯ 'ಪಿಂಕಿ' ಎಂಬ ಪ್ರಾತದ ಮೂಲಕ  ಖಳನಾಯಕಿಯಾಗಿ ಅಭಿನಯಿಸಿದ ಇವರು.ನಂತರ ಇವರ ನಟನೆಗೆ ಮನಸೋತು ಆವಕಾಶಗಳು ಹುಡುಕಿಕೊಂಡು ಇವರನ್ನು ಬಂದವು. 

 "ಇಂತಿ ನಿನ್ನ ಪ್ರೀತಿಯ", "ಪತ್ತೇದಾರಿ ಪ್ರತಿಭಾ", "ಶಾಂತಂ ಪಾಪಂ", ಇದರ ಜೊತೆ "ಅರಮನೆಯ ಗಿಣಿ" ಧಾರವಾಹಿಯಲ್ಲಿ ವಿಲನ್ ಪಾತ್ರದಲ್ಲಿ ಮಿಂಚಿ  ಇದರೊಂದಿಗೆ "ನಾಗಿಣಿ-2" ಧಾರವಾಹಿಯ ಸುರೇಖಾ ಪಾತ್ರದಲ್ಲಿ, "ಮಂಗಳ ಗೌರಿ" ಧಾರವಾಹಿಯ ಚಿನ್ನು ಪಾತ್ರದಲ್ಲಿ, "ಸುಂದರಿ" ಧಾರವಾಹಿಯ ಭಾರತಿ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಪ್ರಸುತ್ತ "ಮಂಗಳ ಗೌರಿ" ಧಾರವಾಹಿಯಲ್ಲಿ ನಟಿಸುತ್ತಿದ್ದಾರೆ. ಕಿರುತೆರೆ ನಟನೆಯ ಜೊತೆಗೆ ಬಿಡುಗಡೆಗೆ ಸಿಧ್ಧವಾದ "ತೋತಾ ಪುರಿ" ಎಂಬ ಕನ್ನಡ ಚಲನಚಿತ್ರದಲ್ಲಿ ನಟಿಸುವ ಮೂಲಕ ಜನಪ್ರಿಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ..

ಇವರ ಸಾಧನೆಯ ಹಾದಿ ಹೀಗೆ ಮುಂದುವರಿಯಲ್ಲಿ. ಕಿರುತೆರೆ& ಸಿನಿಮಾ ಲೋಕದಲ್ಲಿ ಇನ್ನಷ್ಟು ಸಾಧನೆ ಮಾಡಲಿ ಎಂಬುಂದೇ ನಮ್ಮ ಆಶಯ..ಟೀಮ್ ನಮ್ಮ ಬಿಲ್ಲವೆರ್




1 comment: