Sunday, June 27, 2021

ಸಕಲ ಕಲಾ ವಲ್ಲಭೆ ಪುಣ್ಯ ಕೋಟ್ಯಾನ್

 #ಸಕಲ ಕಲಾ ವಲ್ಲಭೆ ಪುಣ್ಯ ಕೋಟ್ಯಾನ್#






















ಬರಹ:-ಶ್ರವಣ್ ಬಿ.ಸಿ.ರೋಡ್


 ಸಾಧನೆ ಎಂಬುದು ಸಾಧಕನ ಸ್ವತ್ತೇ ಹೊರತು ಸೋಮಾರಿಯ ಸ್ವತ್ತಲ್ಲ ಎಂಬ ಮಾತಿಗೆ ನೈಜ ಉದಾಹರಣೆಗೆ ಈ ಪ್ರತಿಭೆ ಪುಣ್ಯ ಕೋಟ್ಯಾನ್ .ಶ್ರೀ ಹೇಮಂತ್ ಕುಮಾರ್ ಮತ್ತು ಶ್ರೀಮತಿ ಚೆನ್ನಮ್ಮ ದಂಪತಿಗಳ ಸುಪುತ್ರಿಯಾಗಿರುವ ಇವರು ಮೂರ್ಜೆ ಮೂಲದ ನಿವಾಸಿ.

ಬಾಲ್ಯದಿಂದಲೇ ನೃತ್ಯದಲ್ಲಿ ಆಸ್ತಕಿ ಇದ್ದ ಇವರಿಗೆ ನಾಟ್ಯಲಹರಿ ಎಂಬ ನೃತ್ಯತಂಡದ ಮುಖಾಂತರ ವೇದಿಕೆ ಮೆಟ್ಟಿಲು ಹತ್ತಿದ ಇವರು. ಒಂಬತ್ತು ವರ್ಷಗಳಿಂದ ನ್ಯತೃಭ್ಯಾಸದಲ್ಲಿ ತೊಡಗಿಸಿಕೊಂಡಿದ್ದಾರೆ. ಶಾಲಾಜೀವನದಲ್ಲಿ  ಪ್ರತಿಭಾ ಕಾರಂಜಿಯ ಮುಖೇನ ಯಕ್ಷಗಾನದಲ್ಲಿ ವಲಯ ಮಟ್ಟ ಮತ್ತು ತಾಲೂಕು ಮಟ್ಟವನ್ನು ಪ್ರತಿನಿಧಿಸಿ ಕೃಷ್ಣ, ಬ್ರಹ್ಮ, ದೇವಿ, ದೇವೇಂದ್ರ, ಅಗ್ನಿ,ಮಧುರ,ವಾಯು,ತಿಲೋತ್ತಮೆ,ಸುದರ್ಶನ,ಹೀಗೆ ಹಲವಾರು ಪ್ರಾತಗಳಲ್ಲಿ  ಬಣ್ಣ ಹಚ್ಚಿ ಬಹುಮಾನಗಳನ್ನು ಮುಡಿಗೇರಿಸಿಕೊಂಡಿದ್ದಾರೆ.ಇದರ ಜೊತೆಗೆ  ನಟನೆಯಲ್ಲಿ ಕಮಾಲ್ ಮಾಡಿದ ಇವರು ವಿಷ್ಣು ಕಲಾವಿದೆರ್ ಮದಡ್ಕ ನಾಟಕ ತಂಡದಲ್ಲಿ ಬಣ್ಣ ಹಚ್ಚಿ ಖ್ಯಾತಿಗಳಿಸಿದ್ದಾರೆ. ವಾಲಿಬಾಲ್, ಖೊ-ಖೊ, ತ್ರೋಬಾಲ್, ಕ್ರೀಡೆಯಲ್ಲಿ ಭಾಗವಹಿಸಿ ತಾಲೂಕು,ಜಿಲ್ಲೆ, ರಾಜ್ಯಮಟ್ಟದಲ್ಲಿ ಪ್ರತಿನಿಧಿಸಿ 50ಕ್ಕೂ ಹೆಚ್ಚಿನ ಪದಕಗಳನ್ನು ಪಡೆದಿರುತ್ತಾರೆ."ಐಸಿರದ ಪೊಣ್ಣು","ನೊಂದ ಹೃದಯ", "ನನ್ನಾಸೆ ನನ್ನಾಕೆ", ಆಲ್ಬಮ್ ಸಾಂಗ್ ನಲ್ಲಿ ನಟಿಸಿ "ಬದ್ಕ್ ದ  ತಿರ್ಲ್" ಎಂಬ ಕಿರುಚಿತ್ರದಲ್ಲಿ ಅಭಿನಯಿಸಿದ್ದಾರೆ.ಇದರೊಂದಿಗೆ ಲಾಕ್ ಡೌನ್ ಸಮಯ  ಗೋಡೆ ಚಿತ್ರಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ.ಪ್ರಸ್ತುತ ಎಸ್.ಡಿ.ಮ್ ಡಿಗ್ರಿ ಕಾಲೇಜ್ ನಲ್ಲಿ ಬಿಸಿಎ ವಿಧ್ಯಾಭ್ಯಾಸದಲ್ಲಿ  ತೊಡಗಿಸಿಕೊಂಡಿದ್ದಾರೆ. ಬಹುಮುಖ ಪ್ರತಿಭೆಯ ಸಾಧನೆಯ ಹಾದಿ ಹೀಗೆ ಮುಂದುವರಿಯಲ್ಲಿ.ನಿಮ್ಮ ಭವಿಷ್ಯ ಉಜ್ಜಲವಾಗಲಿ ಎಂದು ಹಾರೈಸುವ.ಟೀಮ್ ನಮ್ಮ ಬಿಲ್ಲವೆರ್.

7 comments:

  1. ������������������������������������

    ReplyDelete
  2. 👏🏻👏🏻👏🏻👏🏻👏🏻👏🏻👏🏻👏🏻👏🏻

    ReplyDelete
  3. All d best punya ❤️👍👍👍

    ReplyDelete
  4. God bless u punya ur all dream come true❤

    ReplyDelete
  5. Congratulations...
    All the best for the future..

    ReplyDelete