ರಾಷ್ಟ್ರೀಯ ಮಟ್ಟದಲ್ಲಿ ರಾಷ್ಟ್ರೀಯ ಮಟ್ಟದ ತಂಡವನ್ನು ಪ್ರತಿನಿಧಿಸಿದ ಹೆಮ್ಮೆಯ ಕಬಡ್ಡಿ ಪಟು ದಿವ್ಯಾ ಪೂಜಾರಿ...
ಉಳ್ಳಾಲ್ ಬೈಲ್ ಗ್ರಾಮದ ಶ್ರೀ ಸುರೇಶ್ ಪೂಜಾರಿ ಹಾಗೂ ಶ್ರೀಮತಿ ಶೋಭಾ ದಂಪತಿಗಳ ಮಗಳಾದ ಇವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಭಾರತ್ ವಿದ್ಯಾಸಂಸ್ಥೆ ಉಳ್ಳಾಲದಲ್ಲಿ ಪೂರ್ಣಗೊಳಿಸಿದ ಇವರು ಪ್ರಸ್ತುತವಾಗಿ ವಿಕಾಸ್ ಪದವಿ ಪೂರ್ವ ಕಾಲೇಜಿನಲ್ಲಿ ಕಲಿಯುತ್ತಿದ್ದಾರೆ. ತಮ್ಮ ಪ್ರತಿಭೆಯಿಂದಲೆ ಗುರುತಿಸಿಕೊಂಡಿರುವ ಇವರು ಕಬಡ್ಡಿ ,ನೆಟ್ ಬಾಲ್,ಹ್ಯಾಂಡ ಬಾಲ್ ನಲ್ಲಿ ಸಾಧನೆ ಮಾಡಿದ್ದಾರೆ. ಇವರು 2017-2018ರಂದು ಪಂಜಾಬ್ ನ ಚಂಡೀಗಡ್ ನಲ್ಲಿ ನಡೆದ 13ನೇ ಸಾಲಿನ ಸೀನಿಯರ್ ರಾಷ್ಟ್ರೀಯ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಕರ್ನಾಟಕ ರಾಜ್ಯ ತಂಡವನ್ನು ಪ್ರತಿನಿಧಿಸಿರುತ್ತಾರೆ.2018-2019ರ ಸಾಲಿನಲ್ಲಿ ಮೈಸೂರಿನಲ್ಲಿ ನಡೆದ ರಾಜ್ಯಮಟ್ಟದ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಿ ದಕ್ಷಿಣ ಕನ್ನಡವನ್ನು ಪ್ರತಿನಿಧಿಸಿರುತ್ತಾರೆ. ಕೇವಲ ಕಬಡ್ಡಿ ಆಟ ಮಾತ್ರವಲ್ಲದೇ ಹ್ಯಾಂಡ್ ಬಾಲ್ ನೆಟ್ ಬಾಲ್ ನಲ್ಲಿಯೂ ಇವರು 2015-2016ರಂದು ಮಡಿಕೇರಿ ಗೋಣಿಕೊಪ್ಪದಲ್ಲಿ ನಡೆದ ವಿಭಾಗ ಮಟ್ಟದ ಹ್ಯಾಂಡ್ ಬಾಲ್ ಪಂದ್ಯಾವಳಿಯಲ್ಲಿ ಭಾಗವಹಿಸಿ ಬೆಸ್ಟ್ ಗೂಟರ್ ಪ್ರಶಸ್ತಿಯೊಂದಿಗೆ ಮಾತ್ರವಲ್ಲದೇ ಸಾರ್ವಜನಿಕ ಮುಕ್ತ ಕಬಡ್ಡಿ ಪಂದ್ಯಾಟದಲ್ಲಿ ಬೆಸ್ಟ್ ರೈಡರ್,ಬೆಸ್ಟ್ ಕ್ಯಾಚರ್ ಹಾಗೂ ಬೆಸ್ಟ್ ಆಲ್ ರೌಂಡರ್ ಪ್ರಶಸ್ತಿ ಪಡೆದಿರುತ್ತಾರೆ.2018-2019 ಸಾಲಿನ ಪದವಿಪೂರ್ವ ಶಿಕ್ಷಣ ಸಂಸ್ಥೆಗಳ ವತಿಯಿಂದ ತುಮಕೂರಿನಲ್ಲಿ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲೆಯನ್ನು ಪ್ರತಿನಿಧಿಸಿದ್ದಾರೆ.2018ರಲ್ಲಿ ಬೈಂದೂರಿನಲ್ಲಿ ನಡೆದ ಜೂನಿಯರ್ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಪ್ರಥಮ 2019-2020ನೇ ಸಾಲಿನಲ್ಲಿ ಹಾವೇರಿಯಲ್ಲಿ ನಡೆದ ರಾಜ್ಯಮಟ್ಟದ ಕಬಡ್ಡಿ ಯಲ್ಲಿ ಉತ್ತಮ ಪ್ರದರ್ಶನ ನೀಡಿ ಹರ್ಯಾಣದ ಕುರುಕ್ಷೇತ್ರ ದಲ್ಲಿ ನಡೆದ ಜೂನಿಯರ್ ರಾಷ್ಟ್ರ ಮಟ್ಟ 2019-2020 ಸಾಲಿನ ಕಬಡ್ಡಿ ಯಲ್ಲಿ ಭಾಗವಹಿಸಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿರುತ್ತಾರೆ..ಹೀಗೆ ಇವರ ಸಾಧನೆ ಹೀಗೆ ಮುಂದುವರಿಯಲಿ ದೈವ ದೇವರುಗಳ ಆಶೀರ್ವಾದ ಇವರ ಮೇಲಿರುವ ಎಂದು ಆಶಿಸುವ ಟೀಮ್ ನಮ್ಮ ಬಿಲ್ಲವೆರ್
0 comments: