#ಬಹುಮುಖ ಪ್ರತಿಭೆ ಜಿತೇಶ್#
ಬರಹ:-ಶ್ರವಣ್ ಬಿ.ಸಿ.ರೋಡ್
ಸಾಧನೆಗೆ ಪರಿಶ್ರಮವೇ ಸೋಪಾನ.ಸಾಧನೆ ಹಿಂದೆ ಪರಿಶ್ರಮ ಇದ್ದರೆ ಸಾಧನೆ ಎಂಬ ಶಿಖರವನ್ನು ಹತ್ತಲು ಸಾಧ್ಯ ಎಂಬುದನ್ನು ಹರಿತುಕೊಂಡು ಪ್ರಸ್ತುತ ಬಹುಮುಖ ಪ್ರತಿಭೆಯಾಗಿ ಪ್ರಜ್ಜಲಿಸುತ್ತಿರುವ ಇವರೇ
ಜಿತೇಶ್ .ತಂದೆ ಕೃಷ್ಣ ಪೂಜಾರಿ ಮತ್ತು ತಾಯಿ ಹೇಮಲತಾ ದಂಪತಿಗಳ ಹಿರಿಯ ಮಗನಾಗಿ 18/4/1990ರಲ್ಲಿ ಮೂಡಬಿದ್ರಿಯ ಒಂದು ಪುಟ್ಟ ಗ್ರಾಮದಲ್ಲಿ ಜನಿಸಿದರು. ಈಗ ಉಳ್ಳಾಲ ಪುರಸಭೆಯವ್ಯಾಪ್ತಿಯವಿಜೇತ ನಗರದಲ್ಲಿ ನೆಲೆಸಿದ್ದರೆ."ಮನಸ್ ದ ಪಾತೆರ" ಎಂಬ ಕಿರುಚಿತ್ರದ ಮೂಲಕ ನಟನಾ ಕ್ಷೇತ್ರಕ್ಕೆ ಪಾದರ್ಪಣೆ ಮಾಡಿದ ಇವರು. ಇತ್ತೀಚೆಗಷ್ಟೇ ಬಿಡುಗಡೆಗೊಂಡ "ಮೋಕೆದ ಉರ್ಲು" ಆಲ್ಬಮ್ ಸಾಂಗ್ ನಲ್ಲಿ ನಟನೆಯ ಜೊತೆಗೆ ಇವರೇ ಕಥೆ ರಚಿಸಿದ್ದಾರೆ. ಇದರೊಂದಿಗೆ "ಕಾಣನೀರ ಪನಿ"ಎಂಬ ಆಲ್ಬಮ್ ಸಾಂಗ್,"ಮಹಿಮೆದ ಮಹಾಮಹಿ", "ನಾಗಾರೂಪ" ಎಂಬ ಆಲ್ಬಮ್ ಗೆ ಧ್ವನಿ ನೀಡುವ ಮೂಲಕ ಹಾಡುಗಾರಿಕೆಯಲ್ಲಿ ಛಾಪು ಮೂಡಿಸಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲೂ ಕಮಾಲ್ ಮಾಡಿರುವ ಇವರು "ದ್ವಿಗ್ನರಾಜಾ" ಎಂಬ ಆಲ್ಬಮ್ ಸಾಂಗ್ ನಲ್ಲಿ ತಾವೇ ಸಾಹಿತ್ಯ ರಚಿಸುವ ಮೂಲಕ ಕ್ಷೇತ್ರದಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇದರ ಜೊತೆಗೆ ಅನ್ನ ದ ಮಹತ್ವನ್ನ ಸಾರುವ "ಅನ್ನದ ಋಣ " ಎನ್ನುವ ಒಂದು ಸುಂದರ ವಾದ ಕಥೆ ಯನ್ನು ಕೂಡ ರಚಿಸಿದ್ದಾರೆ.ಇವರಿಗೆ ಇನ್ನಷ್ಟು ಆವಕಾಶಗಳು ಹುಡುಕಿಕೊಂಡು ಬರಲಿ.ನಿಮ್ಮ ಭವಿಷ್ಯ ಉಜ್ಜಲವಾಗಲಿ ಎಂದು ಹಾರೈಸುವ.ಟೀಮ್ ನಮ್ಮ ಬಿಲ್ಲವೆರ್.
0 comments: