*ಕನ್ನಡ ಹಾಗೂ ತುಳು ಚಿತ್ರರಂಗದಲ್ಲಿ ಪ್ರಜ್ವಲಿಸುತ್ತಿರುವ ಯುವ ಪ್ರತಿಭೆ : ಪವಿತ್ರ ಅಂಚನ್ ರಾಮಕುಂಜ*
ಬರಹ:-ಸುಪ್ರೀತಾ ಎಸ್ ಪೂಜಾರಿ
ಬಣ್ಣದ ಲೋಕದಲ್ಲಿ ಆಸಕ್ತಿ ಹೊಂದಿದ ಇವರು ಇದೀಗ ಕನ್ನಡ ಹಾಗೂ ತುಳು ಚಿತ್ರರಂಗದಲ್ಲಿ ತನ್ನದೇ ಆದ ಚಾಪು ಮೂಡಿಸುತ್ತಿದ್ದಾರೆ.
ಕಡಬ ತಾಲೂಕಿನ ರಾಮಕುಂಜ ಗ್ರಾಮದ ಕೃಷ್ಣಪ್ಪ ಪೂಜಾರಿ ಮತ್ತು ರತ್ನಾವತಿಯರ ತೃತೀಯ ಪುತ್ರಿ ಇವರು.
ಕುಟುಂಬದಲ್ಲಿ ಕಡುಬಡತನ ಇದ್ದರೂ ಛಲ ಬಿಡದೆ ತನ್ನ ಯಶಸ್ಸಿನ ಪಥದತ್ತ ಸಾಗುತ್ತಿರುವ ಯುವ ಪ್ರತಿಭೆ....
ತನ್ನ ಪ್ರಾಥಮಿಕ ವಿಧ್ಯಾಭ್ಯಾಸವನ್ನು : ಶ್ರಿ ರಾಮಕುಂಜೇಶ್ವರ ಸಂಸ್ಕೃತ ಶಾಲೆ ರಾಮಕುಂಜ ಇಲ್ಲಿ ಮುಗಿಸಿ.
ಪ್ರೌಡ ಶಿಕ್ಷಣವನ್ನು : ಶ್ರಿ ರಾಮಾಕುಂಜೇಶ್ವರ ಕನ್ನಡ ಮೀಡಿಯಂ ಹೈಸ್ಕೂಲ್ ರಾಮಕುಂಜ ಇಲ್ಲಿ ಮುಗಿಸಿದರು.
ತನ್ನ ಪದವಿ ಶಿಕ್ಷಣವನ್ನು S.R.P.U college ರಾಮಕುಂಜ ಇಲ್ಲಿ ಮುಗಿಸಿದರು ಮಂಗಳೂರು ವಿಶ್ವವಿದ್ಯಾಲಯ ಮಂಗಳಗಂಗೋತ್ರಿ ಕೊಣಾಜೆ ಅಲ್ಲಿ ದೂರ ಶಿಕ್ಷಣದ ಮೂಲಕ ಬಿ.ಎ ಪದವಿ ಪಡೆಯುತ್ತಿದ್ದರೆ.
ಕಣ ಪ್ರತಿಕ್ಷಣ, ಅಂಬರ್ ಮರ್ಲೆರ್, ಮೊಕೆ ನಿಕ್ಕಾದ್ ( ಆಲ್ಬಂ ಸಾಂಗ್) ನಲ್ಲಿ ನಟಿಸಿದ್ದು ರವಿ ಬೋಳಾರ್ ನಿರ್ದೇಶನದ ಪಿಸು ಮಾತು ಕನ್ನಡ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಇವರಿಗೆ ತಾಯಿಯ ಮಾರ್ಗದರ್ಶನವೇ ಸ್ಪೂರ್ತಿ.
ಇವರಿಗೆ ಇನ್ನಷ್ಟು ಅವಕಾಶಗಳು ಒದಗಿ ಬರಲಿ ಎಂದು ಆಶಿಸುತ್ತೇವೆ.
ಟೀಂ ನಮ್ಮ ಬಿಲ್ಲವೆರ್.
0 comments: