Wednesday, June 30, 2021

ನಿರೂಪಣಾ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವ ಯುವ ಪ್ರತಿಬೆ ವಿ.ಜೆ.ಗುರುಪ್ರಸಾದ್ ಕೋಟ್ಯಾನ್

 ನಾವು ಇಂದು ಪರಿಚಯಿಸುತ್ತಿರುವ ಯುವ ಪ್ರತಿಭೆಯೇ ವಿ.ಜೆ.ಗುರುಪ್ರಸಾದ್ ಕೋಟ್ಯಾನ್....


ಮಂಗಳೂರಿನ ಹಳೆಯಂಗಡಿ ನಿವಾಸಿಗಳಾದ ಕುಸುಮ ಹಾಗೂ ಸದಾನಂದ ದಂಪತಿಗಳ ಮಗನಾಗಿರುವ ಇವರಿಗೆ ದಶು  ಕೋಟ್ಯಾನ್ ಎಂಬ ಸಹೋದರನಿದ್ದಾರೆ..ಬಾಲ್ಯದಿಂದಲೇ ನಾಟಕ,ಚಿತ್ರಕಲೆ ,ಕಲಿಕೆ,ಕ್ರೀಡೆಯಲ್ಲಿ ಬಹಳ ಆಸಕ್ತಿ ಹೊಂದಿದ್ದ ಇವರು ಶಾಲಾ ದಿನಗಳಲ್ಲಿಯೇ ಹಲವಾರು ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಪುರಸ್ಕಾರ ತಮ್ಮದಾಗಿಸಿಕೊಂಡಿದ್ದಾರೆ.ಕಾಲೇಜು ದಿನಗಳಲ್ಲಿ ನಿರೂಪಣೆ ಮಾಡುವ ಮೂಲಕ ನಿರೂಪಣಾ ಕ್ಷೇತ್ರದಲ್ಲಿ ಕಾಲಿಟ್ಟ ಇವರು ಸಾವಿರಕ್ಕೂ ಅಧಿಕ ವೇದಿಕೆಯಲ್ಲಿ ರಾಜ್ಯಾದ್ಯಂತ ನಿರೂಪಣೆ ಮಾಡಿದ್ದಾರೆ.. ನಿರೂಪಣೆ ಮಾತ್ರವಲ್ಲದೇ ಗಾಯನದಲ್ಲಿ ಕೂಡಾ ಆಸಕ್ತಿ ಇರುವ ಇವರು ತಾಲೂಕು ಮಟ್ಟದ ಯುವ ಜನ ಮೇಳದ ಜಾನಪದ ನೃತ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ಜನಮೆಚ್ಚುಗೆ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ ಕೂಡಾ ದುಡಿದಿರುವ ಇವರು ನಮ್ಮ ಟಿವಿ,ದಾಯ್ಜಿ ವರ್ಲ್ಡ್ ,ಟಿವಿ 7 ಮಾತ್ರ ಅಲ್ಲದೆ ಬೇರೆ ಬೇರೆ ವಾಹಿನಿಗಳಲ್ಲಿ  ನಿರೂಪಕರು ಹಾಗೂ ಸ್ಕ್ರೀಪ್ಟ್ ರೈಟರ್ ಆಗಿ ಕಾರ್ಯ ನಿರ್ವಹಿಸಿರುತ್ತಾರೆ ಹಾಗೂ ಇವರಿಗೆ ಬಡ ವರ್ಗದ ಜನರಿಗೆ  ಸಹಾಯ ಮಾಡುವುದೆಂದರೆ  ತುಂಬಾ ಇಷ್ಟ  ಕೆಲವು ಚಾರಿಟೇಬಲ್ ಟ್ರಸ್ಟ್ ಗಳ ಮೂಲಕ ಈಗಾಗಲೇ ಕಷ್ಟದಲ್ಲಿರುವ ಜನರಿಗೆ ತನ್ನ ಸಹಾಯ ಹಸ್ತ ಚಾಚಿದ್ದಾರೆ ಅಷ್ಟೇ ಅಲ್ಲದೇ ತನ್ನ ಮುಂದಿನ ಅಸೆ ಕೂಡ ಬಡವರಿಗೆ, ಕಷ್ಟದಲ್ಲಿರುವರಿಗೆ ತನ್ನಿದ್ದಾದಷ್ಟು ಸಹಾಯ ಮಾಡಬೇಕೆಂಬುದು.  ಇವರು ತಮ್ಮ ಸಾಧನೆಯನ್ನು ಮುಂದುವರಿಸಲಿ ಎಲ್ಲಾ ದೈವ ದೇವರುಗಳ ಅನುಗ್ರಹ ಇವರಿಗೆ ಇರಲಿ ಎಂದು ಆಶಿಸುವ ಟೀಮ್ ನಮ್ಮ ಬಿಲ್ಲವೆರ್


0 comments: