ಮಾರ್ಗದರ್ಶನ ನೀಡುವವರು ಇಲ್ಲದಿದ್ದರೆ ಏನು? ಹೊಸ ಮಾರ್ಗ ಸೃಷ್ಟಿಸುವ ದೈರ್ಯ,ತಾಕತ್ತು ನಿನ್ನಲಿದ್ದರೆ ಇಡೀ ಜಗತ್ತು ನಿನ್ನ ಹಿಂದೆ ಎಂಬ ಮಾತಿನ ಪ್ರಕಾರ ಬೆಳೆದು ನಿಂತ ಬಿಲ್ಲವ ನಾಯಕ ಜೆ.ಸಿ.ಪ್ರಕಾಶ್ ಪೂಜಾರಿ.
ಬರಹ:- ಸುಪ್ರೀತಾ ಎಸ್ ಪೂಜಾರಿ
ಕಾರ್ಕಳ ತಾಲೂಕಿನ ಕೆರ್ವಾಶೆ ಎಂಬ ಸಣ್ಣ ಗ್ರಾಮದಿಂದ ಬೆಳೆದು ಬಂದು ಇವರು ಮಾಡಿದ ಸಮಾಜ ಸೇವೆ ಅಪಾರ.
ತಂದೆ ಕುರಗ ಪೂಜಾರಿ ಹಾಗೂ ತಾಯಿ ವಸಂತಿ
ಕಡು ಬಡತನದಲ್ಲಿ ಬೆಳೆದು ಬಂದ ಇವರು ಜೀವನದಲ್ಲಿ ಏನಾದರೂ ಸಾಧಿಸಬೇಕು ಎಂಬ ಛಲ ತೊಟ್ಟು ಹಲವಾರು ಸಮಾಜಸೇವೆಯಲ್ಲಿ ತಮ್ಮನ್ನು ತಾನು ತೊಡಗಿಸಿಕೊಂಡು ತಾನು ಬೆಳೆದು ತನ್ನವರನ್ನು ಅವರ ಮಾರ್ಗದರ್ಶನದಂತೆ ಪ್ರೋತ್ಸಾಹಿಸಿ ಮುನ್ನಡೆಸುತ್ತಿದ್ದಾರೆ.
J.C.I ಕಾರ್ಕಳ ಇದರಲ್ಲಿ 2020 ರ ಸಾಲಿನಲ್ಲಿ ಅಧ್ಯಕ್ಷರಾಗಿ ಆಯ್ಕೆಯಾಗಿ ಸೇವೆ ಸಲ್ಲಿಸಿದ್ದಾರೆ.
ತಮ್ಮ ಊರಿನಲ್ಲಿ ಬಡವರಿಗೆ 3 ಮನೆಯನ್ನು ತಮ್ಮ ಸ್ವಂತ ದುಡಿಮೆಯಲ್ಲಿ ನಿರ್ಮಿಸಿ ಕೊಟ್ಟಿದ್ದಾರೆ.ಊರಿನಲ್ಲಿ ಬಸ್ಸ್ ಸ್ಟ್ಯಾಂಡ್ ಸೇರಿದಂತೆ ಕೋರೋಣ ಸಮಯದಲ್ಲಿ 300ಕ್ಕು ಅಧಿಕ ಮನೆಗಳಿಗೆ ದಿನಸಿ ವಸ್ತುಗಳನ್ನು ವಿಸ್ತರಿಸಿದರು.ಹಾಗೂ ಬಡ ಮಕ್ಕಳಿಗೆ ಪ್ರತಿ ವರ್ಷ ಕೂಡ ವಿದ್ಯಾರ್ಥಿವೇತನ ನೀಡುತ್ತಿದ್ದಾರೆ.
ಇವರಿಂದ ಇನ್ನಷ್ಟು ಸಮಾಜಸೇವೆ ಮುಂದುವರಿಯಲಿ ಎಂದು ನಮ್ಮ ಆಶಯ .
ಟೀಂ ನಮ್ಮ ಬಿಲ್ಲವೇರ್
0 comments: