Wednesday, June 30, 2021

ಸುಮಧುರ ಕಂಠದ ಗಾಯಕಿ ಗೀತಾ ಬೈಂದೂರ್

 #ಸುಮಧುರ ಕಂಠದ ಗಾಯಕಿ ಗೀತಾ ಬೈಂದೂರ್#



✍🏻ಶ್ರವಣ್ ಬಿ.ಸಿ.ರೋಡ್ 


ಸ.ರಿ.ಗ.ಮ.ಪ.ದ.ನಿ.ಸ..ಈ ಏಳು ಅಕ್ಷರಗಳು ಕೆಲವರ ಹೆಸರನ್ನು ಏಳೇಳು ಜನ್ಮಕ್ಕೂ ನೆನಪಿನಲ್ಲಿಡುವಂತೆ ಮಾಡುತ್ತದೆ. ತನ್ನ ಸುಮಧುರ ಕಂಠದ ಮೂಲಕ ಕರಾವಳಿಯ ಗಾಯನ ಲೋಕದಲ್ಲಿ ಸದ್ದು ಮಾಡುತ್ತಿರುವ ಇವರೇ ಗೀತಾ ಬೈಂದೂರ್.. ಬಾಲ್ಯಜೀವನದಲ್ಲಿ ಭಜನೆಯ ಮೂಲಕ ಹಾಡಲು ಆರಂಭಿಸಿದ ಇವರ. ನಂತರ ಶಾಲಾದಿನಗಳಲ್ಲಿ ವೇದಿಕೆ ಹತ್ತಿ ಹಾಡಲು ಪ್ರಾರಂಭಿಸಿದರು. ಇವರು ಗಾಯನಕ್ಕೆ ಮನಸೋತ ಗುರುಗಳು ಮುಂದೆ ಇವರನ್ನು ಸಂಗೀತ ಕ್ಷೇತ್ರದಲ್ಲಿ ಮುಂದುವರಿಯಲು ಪ್ರೋತ್ಸಾಹಿಸುತ್ತಾರೆ.ಮುಂದೆ  ಕರ್ನಾಟಕ ಶಾಸ್ತ್ರೀಯ ಸಂಗೀತ 

ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವನ್ನು ಒಂದು ವರ್ಷಗಳ ತರಬೇತಿಯನ್ನು ಪಡೆದು .ಜಿಲ್ಲೆಯ ಪ್ರಸ್ಥಿದ ಆರ್ಕೆಸ್ಟ್ರಾ ತಂಡದಲ್ಲಿ ಹಾಡಲು ಆವಕಾಶ ಸಿಗುತ್ತಾದೆ. ಬಂದ ಆವಕಾಶಗಳನ್ನು ಸರಿಯಾಗಿ ಬಳಸಿಕೊಂಡ ಇವರು ಭಟ್ಕಳದ  'ಝೇಂಕಾರ್ ಮೆಲೋಡಿಸ್" ತಂಡದ ಮೂಲಕ ಹತ್ತಾರು ಊರುಗಳಲ್ಲಿ ಅನೇಕ ಕಾರ್ಯಕ್ರಮ ನಡೆಸುತ್ತಾರೆ.ಇದರೊಂದಿಗೆ "ಶ್ಯಾಡ್ಸ್ ಆರ್ಕೆಸ್ಟ್ರಾ "ತಂಡದ ಮುಖೇನ ತುಳು,ಹಿಂದಿ,ಕನ್ನಡ,ಮಲಯಾಳಂ, ಮರಾಠಿ, ಹಳೆಯ ಹಿಂದಿ ಹಾಡುಗಳನ್ನು ಕರಗತ ಮಾಡಿಕೊಂಡ ಇವರು ಎಲ್ಲಾ  ರೀತಿಯ ಹಾಡುಗಳಿಗೆ ಧ್ವನಿಯಾಗುವ  ಮೂಲಕ  ಸಂಗೀತ ಪ್ರೇಮಿಗಳ  ಮನಗೆದ್ದವರು. ಜೊತೆಗೆ ಆಕಾಶವಾಣಿ ಮತ್ತು  ಚಂದನ ವಾಹಿನಿಯ "ಮಧುರ ಮಧುರವೀ ಮಂಜುಳಗಾನ" ಕಾರ್ಯಕ್ರಮದಲೂ  ಸಂಗೀತದ ರಸದೌತಣ ನೀಡುವ ಮೂಲಕ ಸೈ ಎನಿಸಿಕೊಂಡಿದ್ದಾರೆ.ಕಲರ್ಸ್ ಕನ್ನಡ ವಾಹಿನಿಯ "ಹಾಡು ಕರ್ನಾಟಕ" ರಿಯಾಲಿಟಿ ಶೋ ಕಾರ್ಯಕ್ರಮದಲ್ಲಿ ಅದ್ಧುತ ಧ್ವನಿಯ ಮೂಲಕ ತೀರ್ಪುಗಾರರ ಮನ ಗೆಲ್ಲುವಲ್ಲಿ ಯಶ್ವಸಿಯಾಗಿದ್ದಾರೆ.ಗೀತಾ ಬೈಂದೂರು ಈ ವರೆಗೆ ಸುಮಾರು ಎರಡು ಸಾವಿರಕ್ಕೂ ಅಧಿಕ ಕಾರ್ಯಕ್ರಮಗಳನ್ನು ನೀಡಿದ್ದಾರೆ.

ಉಡುಪಿ ಪರ್ಯಾಯ ಮಹೋತ್ಸವದಲ್ಲಿ. ಜನ್ನಾಡಿ ಮಹೋತ್ಸವದಲ್ಲಿ,ಶಿರಸಿ ನಾಟ್ಯ ರಿದಂ ಶಾಲೆ,ಸುರಭಿ ನೃತ್ಯ  ಕಲಾ ಶಾಲೆ,ರೋಟರಿ ಕಬ್ಲ್ ಬೈಂದೂರು, ಹೀಗೆ ಹಲಾವರು ಪ್ರಶಸ್ತಿಗಳು ಇವರನ್ನು ಹುಡುಕಿಕೊಂಡು ಬಂದಿವೆ.ಇವರ ಈ ಸಾಧನೆಯ ಹಾದಿ ಹೀಗೆ ಮುಂದುವರಿಯಲ್ಲಿ.ಸಂಗೀತ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಲಿ ಎಂಬುದು ನಮ್ಮ ಆಶಯ..

ಟೀಮ್ ನಮ್ಮ ಬಿಲ್ಲವೆರ್.

0 comments: