*ಹಾಡಿನ ಮೂಲಕ ಮನದ ಭಾವಗಳ ಚಿತ್ತಾರ ಮುಡಿಸುತ್ತಿರುವ ಕರಾವಳಿಯ ಯುವ ಪ್ರತಿಭೆ ಮೋನಿಶ್ ಕುಮಾರ್ ಪಾವೂರ್....*
ಸಂಗೀತ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ..ಮನಸ್ಸಿಗೆ ನೆಮ್ಮದಿಯ ನೀಡುವಂತಹ ಒಂದು ಔಷಧಿ ಸಂಗೀತ ಎಂದರೆ ತಪ್ಪಾಗಲಾರದು...ಅಂತಹ ಸಂಗೀತ ಕ್ಷೇತ್ರದಲ್ಲಿ ಸಾಧನೆಯ ಮಾಡಿದ ಅದೆಷ್ಟೋ ಮಹನೀಯರು ನಮ್ಮ ಕರಾವಳಿಯಲ್ಲಿ ಇದ್ದಾರೆ..
ಇದೆ ರೀತಿ ಇಲ್ಲೊಬ್ಬರು ಸಂಗೀತವೇ ನನ್ನ ಜೀವಾಳ ಎಂದು ಸಂಗೀತ ಕ್ಷೇತ್ರದಲ್ಲಿ ಏನದಾರೂ ಸಾಧಿಸಬೇಕೆಂಬ ಹಂಬಲದಿಂದ ಪುಟ್ಟ ಪುಟ್ಟ ಹೆಜ್ಜೆಗಳನಿಟ್ಟು ಸಂಗೀತದ ಪಥದಲ್ಲಿ ಸಾಗುತ್ತಿರುವ ತುಳುನಾಡಿನ ಯುವ ಪ್ರತಿಭೆ ಮೋನಿಶ್ ಕುಮಾರ್ ಪಾವೂರ್..
ಇವರು ಸಪ್ತ ಭಾಷಾ ಸಂಗಮ ಭೂಮಿ ಮಂಜೇಶ್ವರ,ಪಾವೂರ್ ಗ್ರಾಮದ ಲಿಂಗಪ್ಪ ಪೂಜಾರಿ ಮತ್ತು ಗೀತಾ ದಂಪತಿಗಳ ಪುತ್ರ..
ಇವರು ಸೈಂಟ್ ಜೋಸೆಫ್ ಸಂಯುಕ್ತ್ ಸ್ಕೂಲ್ ಕಲಿಯೂರ್ ವರ್ಕಾಡಿ ಇಲ್ಲಿ ಪ್ರಾಥಮಿಕ ಶಿಕ್ಷಣ ವನ್ನು ಮುಗಿಸಿ, S.A.T.H.S ಮಂಜೇಶ್ವರ ಹೈಸ್ಕೂಲ್ ನಲ್ಲಿ ಪ್ರೌಢಶಾಲಾ ವಿದ್ಯಾಭ್ಯಾಸ ಮುಗಿಸಿ, ನಂತರ
ಪಿಯುಸಿ ಶಿಕ್ಷಣವನ್ನು ಶ್ರೀ ನಾರಾಯಣ ಗುರು ಕಾಲೇಜು ಕುದ್ರೋಳಿ ಮಂಗಳೂರು ಇಲ್ಲಿ ಮಾಡಿದರು..
ಇವರಿಗೆ ಸಂಗೀತವೆಂದರೆ ಅದೇನೋ ಒಂದು ರೀತಿಯ ಹುಚ್ಚು ಪ್ರೀತಿ.. ಇವರು ಸಂಗೀತ ವನ್ನು ಯಾವುದೇ ಗುರುಗಳ ಬಳಿ ಕಲಿಯಲು ಹೋಗದೇ ಸ್ವತಃ ತಾನೇ ಸಂಗೀತ ಅಭ್ಯಾಸ ಮಾಡಿ ಹಾಡಲು ಆರಂಭಿಸಿದರು..ಇದೀಗ ಎಲ್ಲರ ಮನಸ್ಸಿನಲ್ಲಿ ಒಳ್ಳೆಯ ಹಾಡುಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ...
ಇವರು ನಿರಂತರವಾಗಿ ಒಂಬತ್ತು ವರ್ಷಗಳಿಂದ ಹಾಡನ್ನು ಹಾಡುತ್ತಿದ್ದಾರೆ..
*ಅಪ್ಪೆನ ಬ್ರಹ್ಮಕಲಶೋತ್ಸವದ ಪದ,ಪೊರ್ಲು, ಪಗಲ್ ಪ್ರೇಮಿ, ಪುಚ್ಚೆಕಣ್ಣ್, ದಾನೆಂಬೆ ಮಲುವ,ಲವ್ ಜಿಲೇಬಿ,ಕುರ್ತೆಲ್,ಏರ್ ನಿನ್ನ ಮಮ್ಮಿ, ಬಚ್ಚಲಿ, ಬೋಡಾ ಶೀರಾ, ತತ್ವಮಸಿ,ಪಕ್ಕಾ ಲೋಕಲ್, ಬರ್ತ್ ಡೆ funny ಸಾಂಗ್, ಯಾನ್ ನಿನ್ನ ಬಾಯ್ ಫ್ರೆಂಡ್, ಹ್ಯಾಂಗ್ ಅಂಡ್ ಎನ್ನ ಹಾರ್ಟ್, ಚಡ್ಡಿ ದೋಸ್ತಿ, ಮುಗುರ್ ತೆಲಿಕೆ, ಈಯೆ ಎನ್ನಾಲ್, ಅಯ್ಯಯ್ಯೋ ಎನ್ನ ಮದಿಮೆ, ಉಂದು ಎನ್ನ ಸ್ವಂತ, ಎನ್ನ ಮಾಮಿನ ಮಗಳ್, ಕಾರಗೆಜ್ಜೆ, ಸ್ಟೈಲಿಶ್ ಮೋನಿಶ್, ರೋಮಿಯೋ, ಬ್ರೇಕಪ್ ಅಂಥೇಮ್..ಹೀಗೆ 90 ಕ್ಕೂ ಹೆಚ್ಚು ತುಳು,ಕನ್ನಡ ಭಾಷೆಗಳಲ್ಲಿ ಹಾಡುಗಳನ್ನು ಹಾಡಿ, ತುಳುನಾಡಿನ ಹೆಮ್ಮೆಯ ಗಾಯಕ ಎಂದೆನಿಸಿಕೊಂಡಿದ್ದಾರೆ..
'ಆಪ್ಸರೆ ಹಾಗೂ ಪಗಲ್ ಪ್ರೇಮಿ' ಎಂಬ ಹಾಡುಗಳು ಇನ್ನೂ ಬಿಡುಗಡೆಯಾಗಲಿವೆ...
ಸಂಗೀತ ಅಂದ ಮೇಲೆ ಸಾಹಿತ್ಯ ಇರಲೇಬೇಕು. ಹಾಗೆಯೇ ಇವರು ಒಬ್ಬ ಸಾಹಿತಿಯು ಹೌದು.. ಐವತ್ತಕ್ಕೂ ಹೆಚ್ಚು ಸಾಹಿತ್ಯವನ್ನು ತಾವೇ ರಚಿಸಿ ತಾವೇ ಧ್ವನಿ ನೀಡಿದ್ದಾರೆ... ಅಷ್ಟೇ ಅಲ್ಲದೇ ಇವರಿಗೆ ನಟನೆಯಲ್ಲಿಯೂ ಆಸಕ್ತಿ ಇದೆ..ಹತ್ತು,ಹದಿನೈದು ಅಲ್ಬಂ ಸಾಂಗ್ ಗಳಲ್ಲಿ ನಟನೆಯನ್ನು ಮಾಡಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ...
ಎಲ್ಲರಿಗೂ ಒಬ್ಬ ಸ್ಫೂರ್ತಿದಾಯಕ ವ್ಯಕ್ತಿ ಇರುವ ಹಾಗೇ ಮೋನಿಶ್ ಕುಮಾರ್ ಇವರಿಗೂ ಒಬ್ಬ ಸ್ಫೂರ್ತಿ ನೀಡಿದ ವ್ಯಕ್ತಿ ಇದ್ದಾರೆ...ಅವರು ಬೇರೆ ಯಾರು ಅಲ್ಲ,ನಮ್ಮ ಕರಾವಳಿಯ ಹೆಮ್ಮೆಯ ಕಲಾವಿದನಾಗಿರುವ ನಿರೂಪಕ, ಗಾಯಕ,ಅದೇ ರೀತಿ ಕನ್ನಡ, ತುಳು ಚಿತ್ರರಂಗದಲ್ಲಿ ಅಭಿನಯಿಸುತ್ತಿರುವ ಯುವನಟ ರೂಪೇಶ್ ಶೆಟ್ಟಿಯವರು ನನಗೆ ಸ್ಫೂರ್ತಿ. ಅವರು ಹಾಡುವುದನ್ನು ನೋಡಿ ನಾನು ಅವರಂತೆಯೇ ಗಾಯಕನಾಗಬೇಕೆಂದು ಆಸೆಪಟ್ಟೆ ಎಂಬುದಾಗಿ ಮೋನಿಶ್ ಕುಮಾರ್ ಹೇಳುತ್ತಾರೆ...
ನನಗೆ ಪ್ರಶಸ್ತಿ,ಪುರಸ್ಕಾರ ಸಿಗಬೇಕೆಂಬ ಆಸೆ ಏನಿಲ್ಲ,ಆದ್ರೆ ನನ್ನ ಹಾಡುಗಳು ಜನರಿಗೆ ತಲುಪಿ ಅವರು ಇಷ್ಟಪಡಬೇಕು ಎಂಬುದು ಇವರ ಮಾತಾಗಿದೆ. ಅದೇ ರೀತಿ ನನಗೆ ತಂದೆ ತಾಯಿಯ ,ಸ್ನೇಹಿತರ ಪ್ರೋತ್ಸಾಹ ತುಂಬಾನೇ ಇದೆ ಎಂದು ಹೇಳುತ್ತಾರೆ..ಸಂಗೀತವನ್ನು ಮುಂದುವರಿಸಿ, ಸಂಗೀತ ಕ್ಷೇತ್ರದಲ್ಲಿ ಸ್ವತಃ ತಾನೇ ಮ್ಯೂಸಿಕ್ ಕಂಪೋಸ್ ಮಾಡಿ ಹೊಸದಾದ ರೀತಿಯಲ್ಲಿ ಜನರಿಗೆ ಇಷ್ಟವಾಗುವಂತೆ ಹಾಡನ್ನು ನಿರ್ಮಾಣ ಮಾಡಬೇಕು ಎಂಬ ಕನಸನ್ನು ಕಟ್ಟಿಕೊಂಡಿದ್ದಾರೆ ಮೋನಿಶ್ ಕುಮಾರ್ ಪಾವೂರ್...
ಇವರಿಗೆ ಇನ್ಸ್ಟಾಗ್ರಾಮ್ ನಲ್ಲಿ ಸಾವಿರಾರು ಸಂಗೀತಾಭಿಮಾನಿಗಳಿದ್ದು, ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ತನ್ನದೇ ಆದ ಹವಾ ಸೃಷ್ಟಿಸುತ್ತಿದ್ದಾರೆ.
ಇವರು ಇನ್ನಷ್ಟು ಸಂಗೀತ ಕ್ಷೇತ್ರದಲ್ಲಿ ಛಾಪನ್ನು ಮೂಡಿಸಲಿ, ಇವರು ಕಂಡಿರುವ ಕನಸುಗಳು ಬೇಗ ನೆರವೇರಲಿ, ಕಲಾಕ್ಷೇತ್ರದಲ್ಲಿ ಇನ್ನಷ್ಟು ಅವಕಾಶ ಒದಗಿ ಬರಲಿ,ಕಲಾಮಾತೆಯ ಆಶೀರ್ವಾದ ಇವರ ಮೇಲಿರಲಿ, ಇವರ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸೋಣ...
✍️ಅಶ್ವಿನಿ. ಟಿ ಕುರ್ನಾಡ್
Therefore, it's anticipated that the market will continue to develop as online gambling turns into extra mainstream 점보카지노 in North America. Continuous technical advances additionally contribute significantly to trade enlargement. The most significant improvements include enterprise models like virtual foreign money and social casinos, game kinds similar to in-play sports activities betting, and cellular geolocation. There are investments in facial recognition software based mostly on artificial intelligence and cryptocurrencies.
ReplyDelete